ವಿಜಯವಾಡ,ಫೆ.27- ಮೀನು ಹಿಡಿಯಲು ಕೊಳದ ನಡುಭಾಗಕ್ಕೆ ತೆರಳಿದ್ದ 10 ಮಂದಿ ಪೈಕಿ ಹೂಳಿನಲ್ಲಿ ಮುಳುಗಿ ಆರು ಮಂದಿ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ತೊಡೆರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೊಳದಲ್ಲಿ ಮೀನು ಹಿಡಿಯಲು ಭಾನುವಾರ 10 ಮಂದಿ ತೆರಳಿದ್ದರು, ಅವರಲ್ಲಿ ನಾಲ್ಕು ಮಂದಿ ಮಾತ್ರ ವಾಪಾಸಾಗಿದ್ದಾರೆ. ಉಳಿದ ಶ್ರೀನಾಥ್ (18), ಪ್ರಶಾಂತ್ (28), ರಘು (24), ಬಾಲಾಜಿ (18), ಕಲ್ಯಾಣ್ (25) ಮತ್ತು ಸುರೇಂದ್ರ (18) ಕೊಳದ ಜೌಗುನಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಎಲ್ಲರಿಗೂ ಈಜು ಬರುತ್ತಿತ್ತು, ಆದರೆ ಕೊಳದಲ್ಲಿದ್ದ ಹೂಳಿನಲ್ಲಿ ಸಿಲುಕಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ 10 ಮಂದಿ ಮೀನಿಗೆ ಆಹಾರ ನೀಡಲು ಬಳಸುವ ಕಬ್ಬಿಣದಿಂದ ತಯಾರಿಸಿದ ಹಳ್ಳಿಗಾಡಿನ ದೋಣಿಯಲ್ಲಿ ಕೊಳದ ಒಳಗೆ ಹೋಗಿದ್ದಾರೆ. ಈ ವೇಳೆ ಅವರು ಕೊಳದ ಉಸ್ತುವಾರಿ ನೋಡಿಕೊಳ್ಳುತ್ತಿದ್ದವರಿಗೆ ಮಾಹಿತಿ ನೀಡಿರಲಿಲ್ಲ ಎಂದು ಹೇಳಲಾಗಿದೆ.
ಕನ್ನಡಿಗನ ಸಂಶೋಧನೆ: ಮಕ್ಕಳಿಗೆ ಪಾಠ ಮಾಡಲಿದೆ ‘ಶಿಕ್ಷಾ’ ರೋಬೋಟ್
ಈ ಮೊದಲು ಈ ರೀತಿ ಹಲವು ಬಾರಿ ಕೊಳದ ಒಳಗೆ ಹೋಗಿ ವಾಪಾಸ್ ಬಂದ ಉದಾಹರಣೆಗಳಿವೆ. ಭಾನುವಾರ ದೋಣಿಯನ್ನು ಕೊಳದ ಮಧ್ಯೆ ಯು ಟನ್ ತೆಗೆದುಕೊಳ್ಳುವಾಗ ಮುಗಚಿ ಬಿದ್ದಿದೆ.
ಕಾಡು ಹಂದಿಯೊಂದಿಗೆ ಹೋರಾಡಿ ಮಗಳನ್ನು ರಕ್ಷಿಸಿ ಬಲಿದಾನವಾದ ಮಹಿಳೆ
ಎಲ್ಲರೂ ನೀರಿಗೆ ಹಾರಿದ್ದಾರೆ. ನಾಲ್ವರು ಕಷ್ಟ ಪಟ್ಟು ಈಜಿ ಹೊರ ಬಂದಿದ್ದಾರೆ. ಉಳಿದ ಆರು ಮಂದಿ ಹೂಳಿನಲ್ಲಿ ಸಿಲುಕಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ನೆಲ್ಲೂರು ಪೊಲೀಸ್ ವರಿಷ್ಠಾಧಿಕಾರಿ ಸಿ.ವಿ.ವಿಜಯ ರಾವ್ ತಿಳಿಸಿದ್ದಾರೆ.
Six, persons, drown, Andhra Pradesh, Nellore, district,