ವಾಷಿಂಗ್ಟನ್, ಜ.7- ಪ್ರಾಥಾಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಆರು ವರ್ಷದ ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿರುವ ಘಟನೆಯಲ್ಲಿ ಶಿಕ್ಷಕಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕದ ವರ್ಜೀನಿಯಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ರಿಚ್ನೆಕ್ ಎಲಿಮೆಂಟರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ದಾಳಿಯಲ್ಲಿ ಇತರ ಯಾವುದೇ ವಿದ್ಯಾರ್ಥಿಗಳು ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ. ಗುಂಡು ಹಾರಿಸಿರುವ ಬಾಲಕನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರೋ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ್ದಾರೆ.
ವಿದ್ಯಾರ್ಥಿ ಆಕಸ್ಮಿಕವಾಗಿ ಗುಂಡು ಹಾರಿಸಿಲ್ಲ ಎನ್ನುವುದು ದೃಢಪಟ್ಟಿದೆ ಮುಂದಿನ ವಿಚಾರಣೆ ನಡೆಸಲಾಗುತ್ತಿದೆ. ಗುಂಡೇಟಿನಿಂದ ಗಾಯಗೊಂಡಿರುವ ಶಿಕ್ಷಕಿ ಜೀವ ಆಪಾಯದಲ್ಲಿದ್ದು, ಆಕೆಯನ್ನು ಉಳಿಸಿಕೊಳ್ಳಲು ವೈದ್ಯರು ಹರಸಾಹಸ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಲಿಂಗ ವಿವಾಹ ಮಾನ್ಯತೆ ಬಯಸುವ ಅರ್ಜಿಗಳು ಸುಪ್ರೀಂ ಪೀಠಕ್ಕೆ ವರ್ಗಾವಣೆ
ಘಟನೆಯಿಂದ ನಾನು ಆಘಾತಕ್ಕೆ ಒಳಗಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ ಎಂದು ಶಾಲೆಯ ಮುಖ್ಯಸ್ಥ ಜಾರ್ಜ್ ಪಾರ್ಕರ್ ತಿಳಿಸಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ಟೆಕ್ಸಾಸ್ನಲ್ಲಿ 18 ವರ್ಷದ ಬಂದೂಕುದಾರಿ 19 ಮಕ್ಕಳು ಹಾಗೂ ಇಬ್ಬರು ಶಿಕ್ಷಕರನ್ನು ಹತ್ಯೆ ಮಾಡಿರುವುದು ಸೇರಿದಂತೆ ಇದುವರೆಗೂ ಹಲವಾರು ಬಾರಿ ಶಾಲೆಗಳ ಮೇಲೆ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ.
ಅಮೆರಿಕಾದ ಶಾಲೆಗಳಲ್ಲಿ ಇತ್ತಿಚೇಗೆಮಕ್ಕಳು ಗುಂಡಿನ ದಾಳಿಗಳನ್ನು ನಡೆಸುತ್ತಿರುವುದು ಹೆಚ್ಚಾಗುತ್ತಿದ್ದು, ಮಕ್ಕಳ ಕೈಗೆ ಗನ್ ಸಿಗದಂತೆ ನೋಡಿಕೊಳ್ಳಲು ಪೋಷಕರು ಪ್ರಯತ್ನಿಸಬೇಕಾಗಿದೆ.
Sixyearold, student, shoots, teacher, Virginia,