ನಾಪತ್ತೆಯಾಗಿದ್ದ ಪೊಲೀಸ್ ಅಸ್ಥಿಪಂಜರ ಪತ್ತೆ

Social Share

ಭಿವಾನಿ (ಹರಿಯಾಣ), ನ.6- ನಿಗೂಢವಾಗಿ ನಾಪತ್ತೆಯಾಗಿದ್ದ ಪೊಲೀಸ್ ಕಾನ್ಸ್ಟೇಬಲ್‍ವೊಬ್ಬರ ಅಸ್ಥಿಪಂಜರ ಚಾಖಿರ್ ದಾದ್ರಿಯಲ್ಲಿ ಪತ್ತೆಯಾದೆ. ಕಳೆದ ಆಗಸ್ಟ್26 ರಂದು ತೋಷಮ್ ಪೊಲೀಸ್ ಠಾಣೆಯ ಕಾನ್ಸ್‍ಟೇಬಲ್ ಜಸ್ಬೀರ್ ಬಂದೂಕಿನಿಂದ ಹೊರಗೆ ಹೋಗಿ ಕಾಣೆಯಾಗಿದ್ದರು.

ಚಖಿರ್ ದಾದ್ರಿ ಸಿವಿಲ್ ಆಸ್ಪತ್ರೆಯ ಹಿಂಭಾಗದ ರಸ್ತೆಯ ಬಳಿ ಅಸ್ಥಿಪಂಜರದ ಅವಶೇಷಗಳನ್ನು ಕಂಡುಕೊಂಡುಬಂದಿದ್ದು ,ಹರಿದ ಬಟ್ಟೆ ಮತ್ತು ಮೊಬೈಲ್ ಆಧಾರದ ಮೇಲೆ, ಮೃತನನ್ನು ಜಸ್ಬೀರ್ ಎಂದು ಗುರುತಿಸಲಾಗಿದೆ.

ಅಸ್ಥಿಪಂಜರವನ್ನು ಸಿವಿಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪೊಲೀಸ್ ಉಪ ಅೀಧಿಕ್ಷಕ ವೀರೇಂದ್ರ ಸಿಂಗ್ ಅವರು ಸ್ಥಳದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂದೂಕು ಹಾಗು ಇತರ ವಸ್ತು ಪತ್ತೆಯಾಗಿಲ್ಲ ನಿಗೋಢ ಸಾವಿನ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Articles You Might Like

Share This Article