ಚರ್ಮಗಂಟು ರೋಗಕ್ಕೆ 30297 ಜಾನುವಾರು ಸಾವು

Social Share

ಬೆಂಗಳೂರು,ಫೆ.22-ರಾಜ್ಯದಲ್ಲಿ ಚರ್ಮಗಂಟು ರೋಗದಿಂದಾಗಿ 30297 ಜಾನುವಾರುಗಳು ಮೃತಪಟ್ಟಿವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು. ವಿಧಾನಪರಿಷತ್‍ನಲ್ಲಿಂದು ಪ್ರಶ್ನೋತ್ತರದಲ್ಲಿ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 147 ಗ್ರಾಮವಾರು ಜಾತ್ರೆಗಳು, 101 ಜಾನುವಾರು ಸಂತೆಗಳು ನಡೆಯುತ್ತಿವೆ. ಚರ್ಮಗಂಟು ರೋಗದಿಂದಾಗಿ ತಾತ್ಕಾಲಿಕವಾಗಿ ಇವುಗಳಿಗೆ ನಿರ್ಬಂಧ ಹೇರಲಾಗಿದೆ ಎಂದರು.

ಅನಿತಾಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ : ಅಶ್ವಥ್ ನಾರಾಯಣ

ಫೆ.7ರವರೆಗೆ ರಾಜ್ಯದಲ್ಲಿ 3,25,253 ಜಾನುವಾರುಗಳು ರೋಗಕ್ಕೆ ತುತ್ತಾಗಿವೆ. 30,297 ಜಾನುವಾರುಗಳು ಮರಣ ಹೊಂದಿವೆ. 2,57,084 ಜಾನುವಾರುಗಳು ಗುಣಮುಖವಾಗಿವೆ. 101121 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.

ತಾಂತ್ರಿಕ ದೋಷ : ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ

ಮೃತಪಟ್ಟ ಜಾನುವಾರುಗಳ ಪೈಕಿ ಕರುವಿಗೆ 5 ಸಾವಿರ, ಹಸುವಿಗೆ 20 ಸಾವಿರ, ಎಮ್ಮೆಗೆ 30 ಸಾವಿರ ಪರಿಹಾರ ಘೋಷಿಸಲಾಗಿದ್ದು, ಈವರೆಗೂ 17,564 ಜಾನುವಾರುಗಳ ಮಾಲೀಕರಿಗೆ 37 ಕೋಟಿ ರೂ.ಗಳನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ಮತ್ತೆ 12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

skin, nodule, disease, 30297, cattle, died, Karnataka,

Articles You Might Like

Share This Article