ಹಾವಿನಿಂದಲೇ ಸಾವನ್ನಪ್ಪಿದ ಸ್ನೇಕ್ ಲೋಕೇಶ್

Social Share

ಬೆಂಗಳೂರು,ಆ.23-ಉರಗ ರಕ್ಷಕ ಸ್ನೇಕ್ ಲೋಕೇಶ್ ಹಾವು ಕಡಿತದಿಂದ ಕೊನೆಯುಸಿರು ಎಳೆದಿದ್ದಾರೆ. ಸಾವಿರಾರು ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಸ್ನೇಕ್ ಲೋಕೇಶ್ ಎಂದೇ ಗುರುತಿಸಿಕೊಂಡಿದ್ದ ಅವರು ಕೆಲ ದಿನಗಳ ಹಿಂದೆ ದಾಬಸ್‍ಪೇಟೆಯಲ್ಲಿ ಹಾವು ಹಿಡಿಯಲು ಹೋದಾಗ ಅವರಿಗೆ ಹಾವು ಕಚ್ಚಿತ್ತು.

ಮೂಟೆ ಕೆಳಗೆ ಅವಿತ್ತಿದ್ದ ಹಾವನ್ನು ರಕ್ಷಿಸುವ ವೇಳೆ ಹಾವು ಕಚ್ಚಿದ್ದರಿಂದ ಲೋಕೇಶ್ ಅವರು ಮಿದುಳು ನಿಷ್ಕ್ರಿಯಗೊಂಡಿತ್ತು.
ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ನೆಲಮಂಗಲದ ಮಾರುತಿ ಬಡಾವಣೆ ನಿವಾಸಿಯಾಗಿದ್ದ ಲೋಕೇಶ್ ಆವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಆಗಲಿದ್ದಾರೆ.

Articles You Might Like

Share This Article