ವಿಮಾನದಲ್ಲಿ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಪ್ರಯಾಣಿಕರು

ಫ್ಲೋರಿಡಾದ ತಾಂಪಾ ನಗರದಿಂದ ನ್ಯೂಜೆರ್ಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಹಾವು ಕಾಣಿಸಿಕೊಂಡು ಪ್ರಯಾಣಿಕರು ಆತಂಕಗೊಂಡ ಘಟನೆ ಇಂದು ನಡೆದಿದೆ. ನ್ಯೂಯಾರ್ಕ್ ಲಿಬರ್ಟಿ
Social Share

ನ್ಯೂಜೆರ್ಸಿ, ಅ.19- ಫ್ಲೋರಿಡಾದ ತಾಂಪಾ ನಗರದಿಂದ ನ್ಯೂಜೆರ್ಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಹಾವು ಕಾಣಿಸಿಕೊಂಡು ಪ್ರಯಾಣಿಕರು ಆತಂಕಗೊಂಡ ಘಟನೆ ಇಂದು ನಡೆದಿದೆ. ನ್ಯೂಯಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳಿಗೆ ಸೂಚನೆ ನೀಡಿ ತಕ್ಷಣ ಹಾವು ಹಿಡಿಯಲು ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ : ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಸಿದ್ದು ವಾಗ್ದಾಳಿ

ಪೊಲೀಸರು ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ವಿಮಾನ ಇಳಿಯುತ್ತಿದ್ದಂತೆಯೇ ಸುರಕ್ಷಿತವಾಗಿ ಪ್ರಯಾಣಿಕರನ್ನು ಇಳಿಸಿ ಹುಡುಕಾಟ ನಡೆಸಿದಾಗ ಹಾವು ಸೀಟಿನ ಕೆಳಗೆ ಅಡಗಿದ್ದು ಕಂಡುಬಂದಿದೆ.

ಸಂಪೂರ್ಣ ಪ್ರಯಾಣವನ್ನು ಹೇಗೆ ಕಳೆದೆವು ಎಂಬುದು ನಮಗೆ ಗೊತ್ತಾಗಲಿಲ್ಲ ಎಂದು ಬಿಸಿನೆಸ್ ಕ್ಲಾಸ್‍ನಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಯುನೈಟೆಡ್ ಫ್ಲೈಟ್ 2038ನಲ್ಲಿ ಈ ಘಟನೆ ನಡೆದಿದೆ.

Articles You Might Like

Share This Article