ಸಾಮಾಜಿಕ ಜಾಲತಾಣ ದೊಡ್ಡ ಸವಾಲಾಗಿದೆ : ನ್ಯಾ.ಚಂದ್ರಚೂಡ್

Social Share

ನವದೆಹಲಿ,ನ.12- ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣ ದೊಡ್ಡ ಸವಾಲಾಗಿದೆ ಎಂದು ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಸುದ್ದಿ ಸಂಸ್ಥೆ ಆಯೋಜಿಸಿದ್ದ ನಾಯತ್ವ ಸಮಾವೇಶದ ಕೊನೆಯ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಟ್ವಿಟರ್, ಟೆಲಿಗ್ರಾಂ, ಇನ್‍ಸ್ಟಾಗ್ರಾಮ್‍ನಲ್ಲಿ ನ್ಯಾಯಾೀಧಿಶರ ಮೌಲ್ಯಮಾಪನಗಳು ನಡೆಯುತ್ತಿವೆ. ನ್ಯಾಯಾೀಧಿಶರು ಸುಮ್ಮನೆ ಇದ್ದರೆ ಅದರ ಪರಿಣಾಮ ನಿರ್ಣಯ ತೆಗೆದುಕೊಳ್ಳವುದರ ಮೇಲೆ ಅಪಾಯಕಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮಷ್ಟಕ್ಕೆ ನಾವು ಸಮಕಾಲೀನ ಸವಾಲುಗಳಿಗೆ ಮರುಗಳಿಕೆ, ಮರು ಆಲೋಚನೆ ಮತ್ತು ಪುನರ್ ವಿನ್ಯಾಸಗೊಳ್ಳುವ ಅಗತ್ಯವಿದೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣ ಇಂದು ದೊಡ್ಡ ಸವಾಲುಗಳಾಗಿವೆ. ಸುಳ್ಳಿನ ಸಾಮ್ರಾಜ್ಯದಲ್ಲಿ ಸತ್ಯದ ವ್ಯತ್ಯಾಸ ಗುರುತಿಸುವುದು ಕಷ್ಟವಾಗಲಿದೆ ಎಂದು ಹೇಳಿದ್ದಾರೆ.

ಕಾಲಮಿತಿಯೊಳಗೆ ಕಡತ ವಿಲೇವಾರಿ ಮಾಡುವಂತೆ ಸಿಎಂ ಎಚ್ಚರಿಕೆ

ನ್ಯಾಯಾೀಧಿಶರಲ್ಲಿ ಎರಡು ರೀತಿಯ ಜನರಿರುತ್ತಾರೆ. ಒಬ್ಬರು ಬೇರೆಯವರಿಗೆ ಮಾತನಾಡಲು ಅವಕಾಶ ನೀಡದೆ ಪ್ರಬಲವಾದಿಗಳಾಗಿರುತ್ತಾರೆ. ಮತ್ತೊಬ್ಬರು ತಾತ್ವಿಕ ಇತ್ಯರ್ಥಕ್ಕಾಗಿ ಸಮನಾಂತರ ವಾದಕ್ಕೆ ಅವಕಾಶ ಮಾಡಿಕೊಡುತ್ತಾರೆ. ಪ್ರಕರಣದ ವಿಚಾರಣೆ ನಡೆಯುವಾಗ ಮುಕ್ತವಾದ ವಾದಕ್ಕೆ ಅವಕಾಶ ಕಲ್ಪಿಸಿಕೊಡಬೇಕಿದೆ ಎಂದು ಹೇಳಿದ್ದಾರೆ.

ಕಳೆದ 70 ವರ್ಷಗಳಲ್ಲಿ ನಾವು ನಿರ್ಣಯ ತೆಗೆದುಕೊಳ್ಳುವ ಸಂಸ್ಕøತಿಯನ್ನು ಬೆಳೆಸಿದ್ದೇವೆ. ಇದು ಸರ್ಕಾರದ ಕಡೆಯಿಂದ ದೊಡ್ಡ ಸಂಖ್ಯೆಯ ಧಾವೆಗಳಿಗೆ ಸೃಷ್ಟಿಯಾಗಿವೆ. ಇಲ್ಲಿ ಅಪನಂಬಿಕೆಯ ಸಂಸ್ಕøತಿಯಿಂದಾಗಿ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳಲಾಗುತ್ತಿಲ್ಲ. ನ್ಯಾಯಾಲಯಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರಕರಣಗಳು ಬಾಕಿ ಉಳಿಯಲು ಇದು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

ನಮ್ಮ ಮುಂದಿರುವ ಮೊದಲ ಸವಾಲೆಂದರೆ ನಿರೀಕ್ಷೆಗಳು. ಎಲ್ಲ ಪ್ರಕರಣಗಳು ಸಾಮಾಜಿಕ ಕಾನೂನಾತ್ಮಕ ವಿಷಯಗಳ ಆಧಾರಿತವಾಗಿಯೇ ನ್ಯಾಯಾಲಯಕ್ಕೆ ಬರುತ್ತಿವೆ. ಅದರಲ್ಲೂ ರಾಜಕೀಯ ವಿಷಯಾಧಾರಿತ ಪ್ರಕರಣಗಳು ನ್ಯಾಯಾಂಗದ ಅಧಿಕಾರಿಗಳ ಮುಂದೆ ರಾಶಿ ಬಿದ್ದಿವೆ ಎಂದು ಅವರು ಧೈರ್ಯವಾಗಿ ಹೇಳಿದ್ದಾರೆ.

ನ್ಯಾಯಾಲಯಗಳ ಮೂಲಸೌಲಭ್ಯಗಳ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ದೇಶದ ಬಹಳಷ್ಟು ನ್ಯಾಯಾಲಯಗಳಲ್ಲಿ ಈಗಲೂ ಮಹಿಳಾ ಶೌಚಾಲಯವಿಲ್ಲ. ನ್ಯಾಯಾೀಧಿಶರು ಭಾರೀ ಪ್ರಮಾಣದಲ್ಲಿ ಕೆಲಸದ ಒತ್ತಡ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

ತಾಂತ್ರಿಕತೆಯನ್ನು ಬಳಸಿಕೊಂಡು ನಾವು ವ್ಯವಸ್ಥೆಯನ್ನು ಸುಧಾರಿಸಬಹುದಾಗಿದೆ. ಇ-ಕೋರ್ಟ್ ಸೇವೆಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಿಗೆ ವಿಲೀನಗೊಳಿಸುವ ಪ್ರಯತ್ನ ನಡೆದಿದೆ. ಇದರಿಂದ ಪ್ರತಿ ಗ್ರಾಮಪಂಚಾಯತಿಯ ನಾಗರಿಕರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ. ಈಗಾಗಲೇ ಹಲವು ಹೈಕೋರ್ಟ್‍ಗಳ ನೇರ ಪ್ರಸಾರವನ್ನು ಆರಂಭಿಸಿವೆ. ಜಿಲ್ಲಾ ನ್ಯಾಯಾಲಯಗಳಲ್ಲೂ ನಾಗರಿಕ ಕೇಂದ್ರಿಕೃತವಾಗಿ ಪರಿವರ್ತನೆಯಾಗುತ್ತಿದೆ.

ತಾಂತ್ರಿಕತೆ ನ್ಯಾಯಾೀಧಿಶರ ಸಾಂಪ್ರದಾಯಿಕ ಕಾರ್ಯ ಕ್ಷಮತೆಯ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ನ್ಯಾಯಾಲಯದ ಕಟ್ಟಡಗಳು ಧಾವೆದಾರರ ಮನಸಿನಲ್ಲಿ ವಿಸ್ಮಯಗಳನ್ನು ಮೂಡಿಸುತ್ತದೆ. ವಸಾಹತು ವಿನ್ಯಾಸವನ್ನು ಇವು ಅನುಸರಿಸುತ್ತಿವೆ. ಭವಿಷ್ಯದಲ್ಲಿ ರಾಷ್ಟ್ರ ಮತ್ತು ರಾಜ್ಯ ಕಲ್ಪನೆಯೊಂದಿಗೆ ವಿನ್ಯಾಸಗೊಳ್ಳಬೇಕಿದೆ.

ಸ್ವಾಮೀಜಿ ಹೆಗಲ ಮೇಲೆ ಕೈ ಇಟ್ಟು ಪೋಸ್ ಕೊಟ್ಟ ಅಶೋಕ್ ವಿರುದ್ಧ ಆಕ್ರೋಶ

ನಾಗರಿಕರಿಗೆ ಸಾಮಾನ್ಯ ಸೇವೆ ದೊರೆಯುವುದಿದ್ದರೆ ಎಲ್ಲ ಗ್ರಾಮಗಳಲ್ಲೂ ಸಮಾನಂತರ ಇಂಟರ್‍ನೆಟ್ ಸೌಲಭ್ಯವಿಲ್ಲದಿರುವ ದೇಶದಲ್ಲಿ ನಾವಿದ್ದೇವೆ. ಅದರ ಹೊರತಾಗಿ ಆನ್‍ಲೈನ್ ವರ್ಚುವಲ್ ವಿಚಾರಣೆಗಳು ಮಹಿಳಾ ವಕೀಲರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿವೆ ಎಂದರು.

ಸೂರ್ಯನ ಬೆಳಕು ಉತ್ತಮ ಸೋಂಕು ನಿವಾರಕ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಅಪಾರದರ್ಶಕತೆ ದೊಡ್ಡ ಅಪಾಯ. ನಾವು ಪ್ರಕ್ರಿಯೆಗಳನ್ನು ಮುಕ್ತವಾಗಿಡಬೇಕು. ಆಗ ಉತ್ತರದಾಯಿತ್ವದ ಪದವಿಗಳು ಮೇಲ್ದರ್ಜೆಗೇಳುತ್ತವೆ. ಪಾರದರ್ಶಕತೆ, ಪ್ರಾತಿನಿಧ್ಯದ ಪ್ರಜ್ಞೆಗಳು ಸುಧಾರಣೆಯಾಗುತ್ತವೆ ಎಂದು ಹೇಳಿದರು.

ವರುಣನ ಅಬ್ಬರಕ್ಕೆ ತಮಿಳುನಾಡು ತತ್ತರ, ಶಾಲಾ-ಕಾಲೇಜು ರಜೆ

ದೇಶದ ಕಾನೂನು ಸುವ್ಯವಸ್ಥೆ ಊಳಿಗಮಾನ್ಯದಂತಿದೆ. ಇಲ್ಲಿ ಪ್ರತಿಭಾನ್ವಿತ ಮಹಿಳೆಯರ ಮತ್ತು ನಿಮ್ನವರ್ಗದವರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ವೈವಿಧ್ಯತೆಯ ನಡುವೆ ಜೇಷ್ಠತೆಯನ್ನು ಅರ್ಥೈಸುವಾಗ ಕಠಿಣ ದೃಷ್ಟಿಕೋನವನ್ನು ಅನುಸರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Articles You Might Like

Share This Article