ಮರಕ್ಕೆ ಅಪ್ಪಳಿಸಿದ ಬೈಕ್ : ಸಾಫ್ಟ್ ವೇರ್ ಎಂಜಿನಿಯರ್ ಸಾವು

Spread the love

ಬೆಂಗಳೂರು, ಮೇ 28- ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಊಟ ಮತ್ತು ಮದ್ಯ ತರಲು ಬೈಕ್‍ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಪರಿಣಾಮ ಸಾಫ್ಟ್‍ವೇರ್ ಎಂಜಿನಿಯರ್ ಮೃತಪಟ್ಟಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಶ್ರೀಕಾಂತ್(23) ಮೃತಪಟ್ಟ ಸಾಫ್ಟ್‍ವೇರ್ ಎಂಜಿನಿಯರ್.

ಐದು ಮಂದಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಸಲುವಾಗಿ ಶ್ರೀಕಾಂತ್ ಬೈಕ್ ತೆಗೆದುಕೊಂಡು ಊಟ ಮತ್ತು ಮದ್ಯ ತರಲು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಹೋಗುತ್ತಿದ್ದಾಗ ರಾತ್ರಿ 12.30ರ ಸುಮಾರಿನಲ್ಲಿ ಕಾಮಾಕ್ಯ ಬಸ್ ನಿಲ್ದಾಣ ಸಮೀಪ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಅಪ್ಪಳಿಸಿದೆ.

ಕೆಳಗೆ ಬಿದ್ದ ಶ್ರೀಕಾಂತ್ ತಲೆಗೆ ತೀವ್ರ ಪೆಟ್ಟಾಗಿದೆ. ಹಿಂದೆ ಬೈಕ್‍ನಲ್ಲಿ ಬರುತ್ತಿದ್ದ ಸ್ನೇಹಿತರು ನೋಡಿ ತಕ್ಷಣ ಶ್ರೀಕಾಂತ್‍ನನ್ನು ಡಿಜಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments