ಸಾಫ್ಟ್ ವೇರ್ ಇಂಜಿನಿಯರ್ ಅಪಹರಿಸಿದ್ದ ನಾಲ್ವರ ಬಂಧನ, ಕಾರು ವಶ

Social Share

ಬೆಂಗಳೂರು, ಡಿ.4- ಬ್ರಿಗೇಡ್ ರಸ್ತೆಗೆ ಮನರಂಜನೆಗಾಗಿ ಬಂದಿದ್ದ ಸಾಫ್ಟ್‍ವೇರ್ ಇಂಜಿನಿಯರ್ ಒಬ್ಬರನ್ನು ಅಪಹರಿಸಿ ಅವರಿಂದ 8 ಲಕ್ಷ ರೂ. ನಗದು ಹಾಗೂ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದ ನಾಲ್ಕು ಅಪಹರಣಕಾರರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಣಸವಾಡಿ ಮುಖ್ಯರಸ್ತೆಯ ಹೊರಮಾವು ಪಿಎನ್‍ಟಿ ಲೇಔಟ್‍ನ ತರುಣ್ ಗಣೇಶ್(22), ಜಾನಕಿ ರಾಮ ಲೇಔಟ್‍ನ ವಿಘ್ನೇಶ್ ಅಲಿಯಾಸ್ ವಿಕಿ(23), ಹಳೆ ಬೈಯ್ಯಪ್ಪನಹಳ್ಳಿ 2ನೇ ಮುಖ್ಯರಸ್ತೆಯ ಚರೀಶ್(23) ಹಾಗೂ ಸುಬ್ಬಣ್ಣಪಾಳ್ಯ ಡಾ. ರಾಜ್ ರಸ್ತೆಯ ಮಣಿಕಂಠ(21) ಬಂಧಿತ ಆರೋಪಿಗಳು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್‍ಗಳು ಹಾಗೂ ಒಂದು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ನವೆಂಬರ್ 26ರಂದು ಬೆಳಗ್ಗೆ 3 ಗಂಟೆ ಸಂದರ್ಭದಲ್ಲಿ ಬ್ರಿಗೇಡ್ ರಸ್ತೆಯ ಸೆಂಟ್ರಲ್ ಮಾಲ್ ಬಳಿ ಬಂಧಿತ ಆರೋಪಿಗಳು ಕಾರಿನಲ್ಲಿ ಬಂದು ಆಟೋವನ್ನು ಅಡ್ಡಗಟ್ಟಿ ಅದರಲ್ಲಿದ್ದ ಸಾಫ್ಟ್‍ವೇರ್ ಇಂಜಿನಿಯರ್‍ನನ್ನು ಎಳೆದುಕೊಂಡಿದ್ದಾರೆ.

ಗುಜರಾತ್‍ ಚುನಾವಣೆ : ನಾಳೆ 2ನೇ ಹಂತದ ಮತದಾನ

ನಂತರ ಕಾರಿನಲ್ಲಿ ಅವರನ್ನು ಕೂರಿಸಿಕೊಂಡು ಅಪಹರಿಸಿ ಬೆಂಗಳೂರು ಹೊರ ವರ್ತುಲ ರಸ್ತೆ, ಬೆಳಂದೂರು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಇನ್ನಿತರ ಸ್ಥಳಗಳನ್ನು ಸುತ್ತಾಡಿಸಿ , ಅವರ ಬ್ಯಾಂಕ್ ಕಾರ್ಡ್‍ಗಳನ್ನು ಬಳಸಿ ಹಣ ಡ್ರಾ ಮಾಡಿಸಿ ಮತ್ತು ಸ್ಪೈಪಿಂಗ್ ಮಾಡಿಸಿಕೊಂಡು ಸುಮಾರು 8 ಲಕ್ಷ ನಗದು ಹಾಗೂ ಒಂದು ಚಿನ್ನದ ಚೈನ್ ಅನ್ನು ಸುಲಿಗೆ ಮಾಡಿ ನಂತರ ಕಲ್ಯಾಣ ನಗರದ ಬಳಿ ಅವರನ್ನು ಬಿಟ್ಟು ಹೋಗಿದ್ದರು.

ಈ ಸಂಬಂಧ ಸಾಫ್ಟ್‍ವೇರ್ ಇಂಜಿನಿಯರ್ ನವೆಂಬರ್ 30ರಂದು ಅಶೋಕ ನಗರ ಠಾಣೆಗೆ ಬಂದು ಅಪಹರಣದ ಬಗ್ಗೆ ತಿಳಿಸಿ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಶೋಕ ನಗರ ಪೊಲೀಸರು ತನಿಖೆ ಕೈಗೊಂಡು ಸ್ಥಳೀಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ತಾಂತ್ರಿಕ ನೆರವಿನೊಂದಿಗೆ ಆರೋಪಿಗಳನ್ನು ಬಂಧಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಶೋಭಯಾತ್ರೆಗೆ ಪೊಲೀಸರ ಬಿಗಿ ಬಂದೋಬಸ್ತ್

ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ, ಎಸಿಪಿ ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಅಶೋಕ ನಗರ ಠಾಣೆ ಇನ್ಸ್‍ಪೆಕ್ಟರ್ ಶ್ರೀಕಾಂತ್ ಅವರ ನೇತೃತ್ವದಲ್ಲಿ ಪಿಎಸ್‍ಐ ಶ್ರೀನಿವಾಸ ನಭಿ ಸಾಬ್, ಎಎಸ್‍ಐ ದೇವರಾಜ್ ಮತ್ತು ಅವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

#SoftwareEngineer, #Kidnap, #FourArrested,

Articles You Might Like

Share This Article