ಬೆಂಗಳೂರು, ಡಿ.21- ಹೃದಯ ಸಂಬಂಧಿ ಕಾಯಿಲೆಯಿಂದ ಖಿನ್ನತೆಗೊಳಗಾಗಿದ್ದ ಸಾಫ್ಟ್ ವೇರ್ ಎಂಜಿನಿಯರ್ರೊಬ್ಬರು ತಮ್ಮ ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮಹಾಲಕ್ಷ್ಮೀ ಲೇಔಟ್ ನಿವಾಸಿ ವಿಜಯಕುಮಾರ್(51) ಆತ್ಮಹತ್ಯೆ ಮಾಡಿಕೊಂಡಿರುವ ಸಾಫ್ಟ್ವೇರ್.
ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಉದ್ಯೋಗದಲ್ಲಿದ್ದ ವಿಜಯಕುಮಾರ್ ಹೃದಯ ಸಂಬಂಧಿ ಕಾಯಿಲೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಗುಣಮುಖವಾಗಿರಲಿಲ್ಲ. ಇದರಿಂದ ಅವರು ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ.
ಕಾರನ್ನು ಸ್ವಚ್ಛತೆ ಮಾಡಿಸಲೆಂದು ಮನೆಯಿಂದ ಮೊನ್ನೆ ಕಾರು ತೆಗೆದುಕೊಂಡು ಹೊರಬಂದ ವಿಜಯಕುಮಾರ್ ಪೈಪ್ ಲೈನ್ ರಸ್ತೆ ಯಶಸ್ವಿನಿ ಜಂಕ್ಷನ್ ಬಳಿ ಬಂದು ಪಾನಿಪುರಿ ಅಂಗಡಿಯೊಂದರ ಬಳಿ ನಿಲ್ಲಿಸಿದ್ದಾರೆ.
ನಂತರ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರೊಬ್ಬರನ್ನು ಕರೆದು ತಮ್ಮ ಬಳಿ ಇದ್ದ ಹಣವನ್ನು ಅವರಿಗೆ ಕೊಟ್ಟು ನಾನು ಕಾರಿನೊಳಗೆ ಮಲಗುತ್ತೇನೆ. ನೀವು ಕಾರಿನ ಮೇಲೆ ಕವರ್ ಹಾಕಿ ಎಂದು ಕವರ್ ಕೊಟ್ಟಿದ್ದಾರೆ.
ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಕೇಂದ್ರಕ್ಕೆ ಶಿಫಾರಸ್ಸು
ಅದರಂತೆ ಆ ವ್ಯಕ್ತಿ ಕಾರಿಗೆ ಕವರ್ ಹಾಕಿ ಅಲ್ಲಿಂದ ತೆರಳಿದ್ದಾರೆ. ನಿಂತ ಜಾಗದಲ್ಲೇ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಕಾರಿಗೆ ಮುಚ್ಚಲಾಗಿದ್ದ ಕವರ್ನ್ನು ತೆಗೆದು ನೋಡಿದಾಗ ವಿಜಯ ಕುಮಾರ್ ಮೂಗಿಗೆ ನೈಟ್ರೋಜನ್ ಆ್ಯಕ್ಸಿಜನ್ನನ್ನು ಪೈಪ್ನಲ್ಲಿ ಅಳವಡಿಸಿಕೊಂಡು ಮುಖಕ್ಕೆ ಕವರ್ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
3ನೇ ಬಾರಿಗೆ ಸಭಾಪತಿಯಾಗಿ ಹೊಸ ದಾಖಲೆ ಬರೆದ ಹೊರಟ್ಟಿ
ತಕ್ಷಣ ಕಾರಿನಿಂದ ಅವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
#SoftwareEngineer, #CommitSuicide, #HeartDisease,