108 ಅಂಬ್ಯುಲೆನ್ಸ್ ಸೇವೆ ಅಸ್ತವ್ಯಸ್ತಕ್ಕೆ ಔಟ್ ಡೇಟೇಡ್ ಸಾಫ್ಟ್ವೇರ್ ಕಾರಣವಂತೆ!

Social Share

ಬೆಂಗಳೂರು,ಸೆ.26-ಆರೋಗ್ಯ ಕವಚ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ 108 ಅಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲು ಔಟ್ ಡೇಟೇಡ್ ಸಾಫ್ಟ್ವೇರ್ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

108 ಅಂಬ್ಯುಲೆನ್ಸ್ ಸೇವೆ ನೀಡುತ್ತಿರುವ ಜಿವಿಕೆ ಸಂಸ್ಥೆಯವರು 14 ವರ್ಷಗಳ ಹಳೆಯದಾದ ಸಾಪ್ಟ ವೇರ್ ಆದ ಅವಾಯಾ ಹಾಗೂ ಬ್ಲೂ ಸಾಫ್ಟವೆರ್ ನಿಂದ ಕಾರ್ಯ ನಿರ್ವ ಹಣೆ ಮಾಡುತ್ತಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.

ಸಂಸ್ಥೆ ಅಳವಡಿಸಿಕೊಂಡಿರುವ ಅವಾಯಾ ಸಾಪ್ಟವೇರ್ ಸರ್ವಿಸ್, ಸರ್ವರ್ ರಿಪ್ಲೇಸ್ ಸೇರಿದಂತೆ ಇರುವ ಹಲವಾರು ತಾಂತ್ರಿಕ ದೋಷ ಸರಿಪಡಿಸದೇ ನಾಲ್ಕು ವರ್ಷಗಳಾಗಿವೆಯಂತೆ.ಅವಾಯಾ ಸಂಸ್ಥೆ ಸರ್ವಿಸ್ ನಿಡೋದನ್ನು ನಿಲ್ಲಿಸಿ ಹಲವು ವರ್ಷಗಳು ಕಳೆದ್ರೂ ಎಚ್ಚೆ ತ್ತು ಕೊಳ್ಳದ ಜಿವಿಕೆ ಸಂಸ್ಥೆಯ ಸಿಬ್ಬಂದಿಗಳು ಇದೀಗ ಅವಾಯ ಸಂಸ್ಥೆಯ ಐಟಿ ಸಿಬ್ಬಂದಿ ಗಳಿಗಾಗಿ ಪರದಾಡುತ್ತಿದ್ದಾರೆ.

ಜಿವಿಕೆಗೆ 108 ಅಂಬ್ಯುಲೆನ್ಸ್ ಸೇವೆಯ ಗುತ್ತಿಗೆ ಅವ ಮುಗಿದ ನಾಲ್ಕು ವರ್ಷವಾಗಿದೆ ಆದರೂ ಅದೇ ಸಂಸ್ಥೆಯವರು ಸೇವೆ ಮುಂದುವರೆಸುತ್ತಿದ್ದಾರೆ. ಯಾವಾಗ ಅವಾಯಾ ಸಾಫ್ಟ್ವೇರ್ ಕೈ ಕೊಡ್ತೋ ಆಗ ಸರ್ಕಾರಕ್ಕೆ ಸರ್ವರ್ ಅಪ್ ಡೇಟ್ ವರ್ಷನ್ ನೀಡುವಂತೆ ಮನವಿ ಮಾಡಿ ಜಿವಿಕೆ ಸಂಸ್ಥೆ ಕೈತೊಳೆದುಕೊಂಡಿದೆ.

ಹೊಸ ಸಂಸ್ಥೆಗೆ ಟೆಂಡರ್ ಆಗುವ ವರೆಗೂ 108 ಅಂಬ್ಯುಲೆನ್ಸ್ ಸೇವೆ ಮುಂದುವರೆಸಲು ಜಿವಿಕೆ ಸಂಸ್ಥೆಗೆ ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿ ನಾಲ್ಕು ವರ್ಷ ಕಳೆದರೂ ಇದುವರೆಗೂ ಟೆಂಡರ್ ಕರೆಯದೆ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.

ಸರ್ವೀಸ್ ರೂಮ್ ನಲ್ಲೇ ದೊಡ್ಡ ಪ್ರಾಬ್ಲಂ:

ಜಿವಿಕೆ ಸಂಸ್ಥೆಯ ಸರ್ವಿಸ್ ರೂಮ್ನಲ್ಲಿರುವ ಮದರ್ ಬೋರ್ಡ್ಗೆ ರ್ಯಾಂಡ್ ಸಮ್ ವೇರ್ ಎಂಬ ವೈರಸ್ ಅಟ್ಯಾಕ್ ಆಗಿದೆ. ಇದರಿಂದ ಹಾರ್ಡ್ ಡಿಸ್ಕ್ , ಮದರ್ ಬೋರ್ಡ್ , ಸರ್ವರ್ ಕ್ರಾಶ್ ಆಗಿದೆ.

ಹೀಗಾಗಿ ಹೆಚ್ ಪಿಯಿಂದ ತಾತ್ಕಾಲಿಕವಾಗಿ ಮದರ್ ಬೋರ್ಡ್ ತರಿಸಿಕೊಂಡು ಜಿವಿಕೆ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಸಾಪ್ಟವೇರ್, ಹಾರ್ಡ್ವೇರ್ ಸೇರಿ ದಂತೆ ಟೆಕ್ನಿಕಲ್ ಐಟಂ ಖರೀದಿ ಮ ತ್ತು ನಿರ್ವಹಣೆಗೆ ಜಿವಿಕೆ ಸಂಸ್ಥೆಗೆ ಸುಮಾರು 50 ರಿಂದ 60 ಕೋಟಿ ಹಣ ಬೇಕಾಗಿದೆ.

ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಆಗಿರುವ ದೋಷ ಸರಿಪಡಿಸುವ ಮೂಲಕ ಬಡವರ ಜೀವನದ ಜೊತೆ ಚಲ್ಲಾಟ ಆಡುವುದನ್ನು ನಿಲ್ಲಿಸಬೇಕಿದೆ ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸಿದ್ದಾರೆ.

Articles You Might Like

Share This Article