ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಬೀಗ

Social Share

ಬೆಂಗಳೂರು,ಅ.25- ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ನಗರದ ಬಹುತೇಕ ದೇಗುಲಗಳಿಗೆ ಬೀಗ ಜಡಿಯಲಾಗಿದೆ.ಮಲ್ಲೇ ಶ್ವರಂನ ಕಾಡು ಮಲ್ಲಿಕಾರ್ಜುನ, ಲಕ್ಷ್ಮೀ ನರಸಿಂಹ ದೇವಾಲಯ, ಗಂಗಮ್ಮದೇವಿ, ನಂದಿತೀರ್ಥ ಕಲ್ಯಾಣಿ ಕ್ಷೇತ್ರಗಳಲ್ಲಿ ಬೆಳಿಗ್ಗೆ ಪೂಜೆ, ಪುನಸ್ಕಾರ ಮಾಡಿದ ನಂತರ ದೇವಾಲಯಗಳಿಗೆ ಬೀಗ ಹಾಕಲಾಗಿದೆ.

ಬೆಳಗ್ಗೆ 10 ಗಂಟೆಯಿಂದ ಸೂರ್ಯಗ್ರಹಣ ಆರಂಭವಾಗುವುದರಿಂದ ಮುಂಜಾನೆಯೇ ದೇವರ ವಿಗ್ರಹಗಳಿಗೆ ಮಹಾಮಂಗಳಾರತಿ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ದೇಗುಲಗಳ ಬಾಗಿಲು ಬಂದ್ ಮಾಡಲಾಗಿದೆ.

ಸಂಜೆ ಗ್ರಹಣ ಮುಗಿದ ಬಳಿಕ ಮತ್ತೆ ಪೂಜೆ,ಹೋಮ ನಡೆಸಿದ ನಂತರ ದೇವಾಲಯಗಳ ಬಾಗಿಲು ತೆರೆದು ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.

ಹರ್ಷ ಕುಟುಂಬದವರಿಗೆ ಕೊಲೆ ಬೆದರಿಕೆ, ಶಿವಮೊಗ್ಗದಲ್ಲಿ ಮತ್ತೆ ಆತಂಕ

ದೀಪಾವಳಿ ಅಮವಾಸ್ಯೆಯಂದು ಭಕ್ತರು ದೇವಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ವಾಡಿಕೆ, ಆದರೆ, ಈ ಬಾರಿ ಗ್ರಹಣದಿಂದಾಗಿ ನಗರದ ಬಹುತೇಕ ದೇವಾಲಯಗಳಿಗೆ ಬೀಗ ಹಾಕಿರುವುದರಿಂದ ಭಕ್ತರು ದೇವಸ್ಥಾನಗಳತ್ತ ಸುಳಿಯುತ್ತಿಲ್ಲ.

Articles You Might Like

Share This Article