ವಿದ್ಯೆ, ಸಾಹಿತ್ಯ, ಕಲೆ ಯಾರೊಬ್ಬರ ಸ್ವತ್ತಲ್ಲ: ಸೋಮಣ್ಣ

Spread the love

ಮೈಸೂರು, ಅ.2- ವಿದ್ಯೆ, ಸಾಹಿತ್ಯ, ಕಲೆ ಯಾರೊಬ್ಬರ ಸೊತ್ತೂ ಅಲ್ಲ, ಆಸ್ತಿಯೂ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.ನಗರದ ಜಗನ್ಮೋಹನ ಅರಮನೆಯಲ್ಲಿ ಇಂದು ಬೆಳಗ್ಗೆ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯೆ, ಸಾಹಿತ್ಯ, ಕಲೆ ಯಾರೊಬ್ಬರ ಸೊತ್ತಲ್ಲ ಅಥವಾ ಯಾರದೊ ಒಬ್ಬರಿಗೆ ಸೇರಿದ ಆಸ್ತಿಯಲ್ಲ ಎಂದರು.

ನಾಡಿನ ಹಿರಿಮೆ-ಗರಿಮೆಯನ್ನು ಪರಿಚಯಿಸುವಂತಹ ಶಕ್ತಿಯನ್ನು ದೇವಿ ಶಾರದೆ ಸಾಹಿತಿಗಳು ಹಾಗೂ ಕವಿಗಳಿಗೆ ನೀಡಿದ್ದಾಳೆ. ದಸರಾ ಕವಿಗೋಷ್ಠಿ ಸಮಿತಿಯವರು ಉತ್ತಮವಾಗಿ ಕೆಲಸ ಮಾಡುವ ಮೂಲಕ ರಾಜಕಾರಣಿಗಳು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.

ಮುಂದಿನ ವರ್ಷವೂ ಬಿಜೆಪಿಯೇ ಅಧಿಕಾರದಲ್ಲಿರುತ್ತದೆ. ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಇದೇ ರೀತಿ ಉತ್ತಮ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೋಮಣ್ಣ ಭವಿಷ್ಯ ನುಡಿದರು.

ದಸರಾ ಕವಿಗೋಷ್ಠಿಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಡಾ.ದೊಡ್ಡರಂಗೇಗೌಡರು ಉದ್ಘಾಟಿಸಿದರು. ಶಾಸಕ ನಾಗೇಂದ್ರ, ಅಂಕಣಕಾರ ಜೋಗಿ, ಮುಖಂಡರಾದ ಚಿಕ್ಕಮ್ಮ ಬಸವರಾಜು, ಲೋಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

Facebook Comments