ನಡುರಸ್ತೆಯಲ್ಲೇ ಅತ್ತೆಯನ್ನು ಕೊಂದ ಅಳಿಯ

Social Share

ಕನಕಪುರ, ನ.8- ನಡು ರಸ್ತೆಯಲ್ಲೇ ಅತ್ತೆಯನ್ನು ಅಳಿಯನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಟ್ಟೆಗೌಡನ ದೊಡ್ಡಿ ನಿವಾಸಿ ರತ್ನಮ್ಮ (46) ಕೊಲೆಯಾಗಿರುವ ದುರ್ದೈವಿ.

ರತ್ನಮ್ಮ ಅವರು ತಮ್ಮ ಮಗಳು ಮಾನಸಳನ್ನು ಸುಕ್ಕಿ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಸುಕ್ಕಿ ಸರಿಯಾಗಿ ಮಗಳನ್ನು ನೋಡಿಕೊಳ್ಳು ತ್ತಿರಲಿಲ್ಲ. ಈ ವಿಚಾರವಾಗಿ ಹಲವಾರು ಬಾರಿ ಅಳಿಯನಿಗೆ ಬುದ್ಧಿವಾದ ಹೇಳಿದ್ದರೂ, ಕೇಳಿರಲಿಲ್ಲ.

ಈ ವಿಚಾರಕ್ಕೆ ಮಾನಸ ಬೇಸರಗೊಂಡು ಗಂಡನ ಮನೆಯಿಂದ ವಾಪಸ್ ತವರಿಗೆ ಬಂದು ನೆಲಸಿದ್ದಳು. ಮಾನಸಳನ್ನು ಮನೆಗೆ ವಾಪಸ್ ಕಳುಹಿಸಿಕೊಡಿ ಎಂದು ಸುಕ್ಕಿ ಕೇಳಿದ್ದರೂ ಅತ್ತೆ ಕಳುಹಿಸಿರಲಿಲ್ಲ. ಇದೇ ಜಿದ್ದಿನಿಂದ ಅತ್ತೆಯನ್ನು ಸಾಯಿಸಲು ಸುಕ್ಕಿ ಸಂಚು ರೂಪಿಸಿದ್ದಾನೆ.

ಅದರಂತೆ ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಬೆಟ್ಟೆಗೌಡನಹಳ್ಳಿ ಗೇಟ್ ಬಳಿ ಬಸ್‍ಗಾಗಿ ಕಾಯುತ್ತಾ ರತ್ನಮ್ಮ ನಿಂತಿದ್ದರು. ಇದೇ ಸಮಯವನ್ನು ಕಾದಿದ್ದ ಅಳಿಯ ಸುಕ್ಕಿ ತನ್ನ ಸಹೋದರ ಚಲುವರಾಜನೊಂದಿಗೆ ಸೇರಿಕೊಂಡು ಕಲ್ಲು, ದೊಣ್ಣೆಗಳಿಂದ ಮನ ಬಂದಂತೆ ಅತ್ತೆಗೆ ಹೊಡೆದು ಕೊಲೆ ಮಾಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕೋಡಿಹಳ್ಳಿ ಠಾಣೆ ಸಬ್ ಇನ್ಸ್‍ಪೆಕ್ಟರ್ ರವಿಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಆರೋಪಿ ಚೆಲುವರಾಜನನ್ನು ಬಂಸಿ ವಿಚಾರಣೆಗೊಳಪಡಿಸಿದ್ದಾರೆ.

Articles You Might Like

Share This Article