ತಂದೆಯನ್ನು ಕೊಂದು, 30 ತುಂಡುಗಳನ್ನಾಗಿ ತುಂಡರಿಸಿದ ಪಾಪಿ ಪುತ್ರ

Social Share

ಬಾಗಲಕೋಟೆ,ಡಿ.13-ದೆಹಲಿಯ ಶ್ರದ್ಧಾ ವಾಲ್ಕರ್ ಮಾದರಿಯಲ್ಲಿ ರಾಜ್ಯದಲ್ಲೂ ಒಂದು ಭೀಕರ ಹತ್ಯೆ ನಡೆದಿದ್ದು, ಮಗನೇ ತಂದೆಯನ್ನು ಕೊಂದು 30 ತುಂಡುಗಳನ್ನಾಗಿ ಕತ್ತರಿಸಿ ಪಾಳುಬಿದ್ದ ಕೊಳವೆ ಬಾವಿಯೊಳಗೆ ಹಾಕಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯ ಜುಂಜುರಕೊಪ್ಪ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಪರಶುರಾಮ ಕುಳಲಿ (54) ಕೊಲೆಯಾಗಿದ್ದಾರೆ. ಅವರ ಪುತ್ರ ವಿಠಲ್ ಪರಶುರಾಮ ಕುಳಲಿ (20)ಯನ್ನು ಪೊಲೀಸರು ಬಂಧಿಸಿದ್ದಾರೆ.

ಪರಶುರಾಮ ಅವರ ಪತ್ನಿ ಸರಸ್ವತಿ ಕುಳಲಿ ನೀಡಿದ ದೂರಿನ ಮೇರೆಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಶುರಾಮ್ ಕೊಳಲಿ ಪದೇ ಪದೇ ಕುಡಿದು ಬಂದು ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಜಗಳವಾಡುತ್ತಿದ್ದ. ಪತ್ನಿ ಸರಸ್ವತಿ ಹಾಗೂ ಸೊಸೆಯೊಂದಿಗೆ ಅಡುಗೆ ಮಾಡುವ ವಿಷಯವಾಗಿಯೂ ಗಲಾಟೆ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಪೂಜಾ ಹೆಗ್ಡೆ ಬಲೆಗೆ ಬಿದ್ದಸಲ್ಮಾನ್..!?

ಡಿ.7ರಂದು ವಿಠಲ ತಮ್ಮ ತೋಟದ ಮನೆಯಲ್ಲಿ ಮಲಗಿರುವಾಗ ಅಲ್ಲಿಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಂದ ಪರಶುರಾಮ ಕಬ್ಬಿನ ಹೊಲಕ್ಕೆ ನೀರು ಹಾಯಿಸಲು ಏಕೆ ಬಂದಿಲ್ಲ ಎಂದು ಆಕ್ಷೇಪಿಸಿ ಮಗನನ್ನು ಬೈದಿದ್ದಾನೆ.

ಮಾತಿಗೆ ಮಾತು ಬೆಳೆದು ಜಗಳ ತೀವ್ರ ಸ್ವರೂಪಕ್ಕೆ ಹೋಗಿದೆ. ಸಿಟ್ಟಿನಲ್ಲಿ ಪರಶುರಾಮ ಕೈಯಲ್ಲಿದ್ದ ಕೊಡಲಿಯಿಂದ ವಿಠಲನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಅದರಿಂದ ತಪ್ಪಿಸಿಕೊಂಡ ವಿಠಲ ಪ್ರತಿದಿನ ಜಗಳವಾಡುವ ಅಪ್ಪನ ಕಾಟ ಜಾಸ್ತಿಯಾಗಿದೆ. ಒಂದು ಗತಿ ಕಾಣಿಸಬೇಕೆಂದು ಯೋಚಿಸಿ ತೋಟದ ಮನೆಯಲ್ಲಿದ್ದ ಟ್ರಾಕ್ಟರ್‍ನ ಕಬ್ಬಿಣದ ಹೈಡ್ರೋಲಿಕ್ ರಾಡ್ ತೆಗೆದುಕೊಂಡು ಹಲ್ಲೆ ಮಾಡಿದ್ದಾನೆ.

ಮೋದಿ ವಿರುದ್ಧ ಹೇಳಿಕೆ : ಕಾಂಗ್ರೆಸ್‍ನ ರಾಜಾ ಪಟೇರಿಯಾ ಬಂಧನ

ತಲೆಗೆ ಭಾರೀ ಪೆಟ್ಟು ಬಿದ್ದಿದ್ದರಿಂದ ಪರಶುರಾಮ ಸಾವನ್ನಪ್ಪಿದ್ದು, ವಿಷಯ ಯಾರಿಗೂ ಗೊತ್ತಾಗಬಾರದೆಂದು ಶವವನ್ನು ತೋಟದಲ್ಲಿದ್ದ ಪಾಳು ಕೊಳವೆ ಬಾವಿಯೊಳಗೆ ಹಾಕಲು ಹೋಗಿದ್ದಾನೆ. ಆದರೆ ದೇಹ ದೊಡ್ಡದಾಗಿದ್ದ ಬಾವಿಯೊಳಗೆ ಹೋಗದಿದ್ದರಿಂದ ಅಪ್ಪನ ಕೈಯಲ್ಲಿದ್ದ ಕೊಡಲಿಯಿಂದಲೇ 30ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ್ದಾನೆ. ನಂತರ ಒಂದೊಂದೇ ಅಂಗಾಂಗಗಳನ್ನು ಪಾಳು ಕೊಳವೆ ಬಾವಿಯೊಳಗೆ ಹಾಕಿ ಮಣ್ಣು ಮುಚ್ಚಿ ಏನೂ ಗೊತ್ತಿಲ್ಲದಂತೆ ಮನೆಗೆ ಮರಳಿದ್ದಾನೆ.

ಪರಶುರಾಮ ಮನೆಗೆ ಬಾರದೆ ಇದ್ದುದ್ದನ್ನು ಕಂಡು ಮನೆಯವರೆಲ್ಲ ಹುಡುಕಾಟ ನಡೆಸಿದ್ದಾರೆ. ಮೂರು ದಿನದ ಬಳಿಕ ವಿಠಲ ವಿಷಯವನ್ನು ತಾನಾಗಿಯೇ ಬಾಯಿಬಿಟ್ಟಿದ್ದಾನೆ. ಇದರಿಂದ ಆತಂಕಗೊಂಡ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆಸಿಬಿಯಿಂದ ಪಾಳು ಕೊಳವೆ ಬಾವಿ ಪಕ್ಕ ಅಗೆದು ಅಂಗಾಂಗಗಳನ್ನು ಹೊರತೆಗೆದಿದ್ದಾರೆ.

#SonKilledFather #Bagalkot

Articles You Might Like

Share This Article