ಬಿಜೆಪಿ ನಾಯಕಿ ಸೋನಾಲಿ ಸಾವಿನ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ಅರೆಸ್ಟ್

Social Share

ಪಣಜಿ, ಆ.26- ಬಿಜೆಪಿ ನಾಯಕಿ ಹಾಗೂ ಬಿಗ್‍ಬಾಸ್ ಖ್ಯಾತಿಯ ಸೋನಾಲಿ ಪೊಗಾಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆ. ಸ್ನೇಹಿತರ ಜೊತೆ ಗೋವಾಕ್ಕೆ ಬಂದು ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ನಂತರ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. ಮೊದಲು ಅವರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮತ್ತು ದೇಹದ ಮೇಲೆ ಹಲವಾರು ಕಡೆ ಬಲವಾದ ಗಾಯದ ಗುರುತುಗಳು ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಸಾವಿನ ಪ್ರಕರಣ ಹೊಸ ತಿರುವು ಪಡಿಸಿಕೊಂಡಿದ್ದು, ಕಳೆದ ರಾತ್ರಿ ಕೊಲೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋನಾಲಿ ಜೊತೆಯಲ್ಲಿ ಬಂದಿದ್ದ ಸುೀಧಿರ್ ಸಾಗ್ವಾನ್ ಮತ್ತು ಸುಖ್ವಿಂದರ್ ವಾಸಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಇವರ ಕೊಲೆಗೆ ಮೊದಲೇ ಸಂಚು ರೂಪಿಸಲಾಗಿತ್ತು ಎಂದು ಅನುಮಾನಗಳು ವ್ಯಕ್ತವಾಗಿವೆ.

ಘಟನೆ ಕುರಿತಂತೆ ಸೋನಾಲೆಯವರ ಕುಟುಂಬ ಸದಸ್ಯರು ಇದನ್ನು ಕೊಲೆ ಎಂದು ಹೇಳುತ್ತಿದ್ದರು. ನಮಗೆ ದೂರವಾಣಿ ಕರೆ ಮಾಡಿದಾಗ ಆಕೆ ಆತಂಕದಲ್ಲೇ ಮಾತನಾಡುತ್ತಿದ್ದಳು ಎಂದು ಹೇಳಿಕೆ ನೀಡಿದ ನಂತರ ಪೊಲೀಸರು ಅಲರ್ಟ್ ಆಗಿದ್ದರು. ಮೂಲಗಳ ಪ್ರಕಾರ ಆಕೆಯ ಮೇಲೆ ಅತ್ಯಚಾರ ನಡೆದಿದೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಒಟ್ಟಾಗಿ ದೇಶಾದ್ಯಂತ ಭಾರಿ ಸಂಚಲನ ರೂಪಿಸಿದ್ದ ಸೋನಾಲಿ ನಿಗೂಢ ಸಾವು ಎಂದು ಕೊಲೆ ಎಂದು ಗೊತ್ತಾಗಿದೆ. ಹೆಚ್ಚಿನ ಮಾಹಿತಿಗಳು ಹೊರ ಬರಬೇಕಾಗಿದ್ದು, ಬಂತ ಆರೋಪಿಗಳಿಂದ ವಿಚಾರಣೆಗೆ ಒಳಪಡಿಸಿ ಈ ಘಟನೆ ಹಲವರು ಇರುವ ಶಂಖೆ ವ್ಯಕ್ತವಾಗಿದೆ.

Articles You Might Like

Share This Article