ಬೆಂಗಳೂರು, ಅ.6- ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂ ಅವರು ಇಂದು ಭಾರತ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಕೈ ಪಡೆಯಲ್ಲಿ ಸಂಚಲನ ಮೂಡಿಸಿದರು.ಕಳೆದ ಸೋಮವಾರ ಕರ್ನಾಟಕಕ್ಕೆ ಆಗಮಿಸಿದ ಸೋನಿಯಾಗಾಂ ಅವರು ಎರಡು ದಿನಗಳ ಕಾಲ ವಿಶ್ರಾಂತಿ ಪಡೆದ ಬಳಿಕ ಇಂದು ಬೆಳಗ್ಗೆ ಆರಂಭಗೊಂಡ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ನಾಗಮಂಗಲ ವಿಧಾನಸಭಾ ಕ್ಷೇತ್ರದ ಅಮೃತಿ ಗ್ರಾಮದ ಸಮೀಪ ಪಾದಯಾತ್ರೆಯಲ್ಲಿ ಸೋನಿಯಾಗಾಂ ಹೆಜ್ಜೆ ಹಾಕುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದರು. ಆರಂಭದಲ್ಲಿ ಸುಮಾರು 12 ನಿಮಿಷಗಳ ಕಾಲ ನಡೆದ ಅವರನ್ನು ವಿಶ್ರಾಂತಿ ಪಡೆಯುವಂತೆ ರಾಹುಲ್ಗಾಂ ಸಲಹೆ ನೀಡಿ ಕಾರಿಗೆ ಹತ್ತಿಸಿದರು.
ಸ್ವಲ್ಪ ದೂರ ಕಾರಿನಲ್ಲಿ ಯಾತ್ರೆಯೊಂದಿಗೆ ಬಂದ ಸೋನಿಯಾಗಾಂ ಮತ್ತೆ ಕಾರಿನಿಂದ ಕೆಳಗಿಳಿದು ಪಾದಯಾತ್ರೆಯಲ್ಲಿ ಭಾಗವಹಿಸಿದರು.ಹಾದಿ ಮಧ್ಯೆ ಕಾಂಗ್ರೆಸ್ ನಾಯಕರೊಂದಿಗೆ ಸೋನಿಯಾಗಾಂ ಮತ್ತು ರಾಹುಲ್ ಗಾಂಧಿ ಅಮ್ಮಾಸ್ ಕೆಫೆಗೆ ತೆರಳಿ ಕಾಫಿ ಸೇವಿಸಿದರು.
ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸೋನಿಯಾಗಾಂ ಅವರು ಇಷ್ಟು ದೂರ ನಡೆಯಬಾರದು ಎಂಬ ಕಾರಣಕ್ಕಾಗಿ ಅಲ್ಲಲ್ಲಿ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿತ್ತು.ಸೋನಿಯಾಗಾಂ ಅವರ ಭಾಗವಹಿಸುವಿಕೆ ಪಾದಯಾತ್ರೆಗೆ ಹೊಸ ಹುರುಪು ನೀಡಿದೆ. ಸೋನಿಯಾ ಅವರನ್ನು ನೋಡಲು ಜನ ಮುಗಿಬಿದ್ದಿದ್ದರು. ಅವರನ್ನು ನಿಯಂತ್ರಿಸಲು ಎಸ್ಜಿಪಿ ಮತ್ತು ಸ್ಥಳೀಯ ಪೊಲೀಸರು ಹರಸಾಹಸ ಪಡಬೇಕಾಯಿತು.
ಕೆಲವು ಕಡೆ ಭದ್ರತಾ ಸಿಬ್ಬಂದಿಗಳೊಂದಿಗೆ ಸಂಘರ್ಷ ನಡೆಸಿದ ಸ್ಥಳೀಯರು ಸೋನಿಯಾಗಾಂ ಅವರನ್ನು ಭೇಟಿ ಮಾಡಲೇಬೇಕೆಂಬ ಹಠಕ್ಕೆ ಬಿದ್ದು ಧಾವಿಸುತ್ತಿದ್ದರು. ಕೈ ಬೀಸುತ್ತಲೇ ಯಾತ್ರೆಗೆ ಪ್ರವೇಶಿಸಿದ ಸೋನಿಯಾಗಾಂ ಅವರು ಜನರತ್ತ ಪದೇ ಪದೇ ಕೈ ಮುಗಿಯುತ್ತ ಅಭಿನಂದಿಸುತ್ತಿದ್ದುದು ಕಂಡುಬಂತು. ಸೋನಿಯಾ ಆಗಮನದಿಂದಾಗಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿತ್ತು. ಎಂದಿಗಿಂತಲೂ ಹೆಚ್ಚಿನ ಜನಸ್ತೋಮ ಯಾತ್ರೆಯುದ್ದಕ್ಕೂ ಕಂಡುಬಂತು.
ಪಾದಯಾತ್ರೆ ನಡುವೆ ಕಾಂಗ್ರೆಸ್ ಶಾಸಕಿಯಓರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ರೂಪಾ ಶಶಿಧರ್ ಮತ್ತಿತರರು ಜತೆಯಾಗಿ ಹೆಜ್ಜೆ ಹಾಕಿದರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೆಲವು ನಾಯಕರನ್ನು ಕರೆದು ಸೋನಿಯಾಗಾಂ ಅವರಿಗೆ ಪರಿಚಯ ಮಾಡಿಕೊಡುತ್ತಿದ್ದರು. ಪಕ್ಷದ ರಾಜ್ಯ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾದ ಕೆ.ಎಚ್.ಮುನಿಯಪ್ಪ ಅವರೊಂದಿಗೂ ಪಾದಯಾತ್ರೆ ನಡುವೆಯೇ ಮಾತುಕತೆ ನಡೆಸಿದರು. ಜನಸಾಮಾನ್ಯರ ಸ್ಪಂದನೆಗೆ ಸೋನಿಯಾಗಾಂ ಅವರು ಕೈ ಮುಗಿಯುತ್ತಲೇ ಪ್ರತಿಕ್ರಿಯಿಸುತ್ತಿದ್ದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿಯ ಪ್ರಮುಖ ನಾಯಕರಾದ ದಿಗ್ವಿಜಯ್ಸಿಂಗ್, ಜಯರಾಂ ರಮೇಶ್, ಕೆ.ಸಿ.ವೇಣುಗೋಪಾಲ್, ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಚಲುವರಾಯಸ್ವಾಮಿ, ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ನರೇಂದ್ರಸ್ವಾಮಿ ಸೇರಿದಂತೆ ಅನೇಕರು ಸೋನಿಯಾಗಾಂ ಅವರೊಂದಿಗೆ ಯಾತ್ರೆಯಲ್ಲಿ ಕಾಣಿಸಿಕೊಂಡರು. ಯಾವುದೇ ಬಳಲಿಕೆ ಇಲ್ಲದೆ ಚೋತೋಹಾರಿಯಾಗಿಯೇ ಸೋನಿಯಾಗಾಂ ಅವರು ಹೆಜ್ಜೆ ಹಾಕಿದರು.