ಬೆಂಗಳೂರು, ಅ.3- ಭಾರತ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಇಂದು ಮೈಸೂರಿಗೆ ಆಗಮಿಸಿದ್ದಾರೆ. ಮುಂಜಾನೆ ರಾಹುಲ್‍ಗಾಂಧಿಯವರು ಮೈಸೂರಿನ ಹಾರ್ಡಿಂಜ್ ಸರ್ಕಲ್‍ನ ಆರ್‍ಗೇಟ್‍ನಿಂದ ಪಾದಯಾತ್ರೆ ಆರಂಭಿಸಿ ಶ್ರೀರಂಗಪಟ್ಟಣದ ಅಗ್ರಹಾರದ ವರೆಗೂ 12 ಕಿ.ಮೀ.ವರೆಗೂ ಹೆಜ್ಜೆ ಹಾಕಿದರು. ಅಲ್ಲಿಂದ ಮೈಸೂರಿನ ವಿಮಾನ ನಿಲ್ದಾಣಕ್ಕೆ ತೆರಳಿ ತಾಯಿ ಸೋನಿಯಾಗಾಂಧಿ ಅವರನ್ನು ಸ್ವಾಗತಿಸಿದರು.
ಬಳಿಕ ಸೋನಿಯಾಗಾಂಧಿ ಅವರು ಹೆಲಿಕಾಫ್ಟರ್‍ನಲ್ಲಿ ಮಡಿಕೇರಿಗೆ ತೆರಳಲಿದ್ದಾರೆ. ನಾಳೆ ಮತ್ತು ಅ.5ರಂದು ಎರಡು ದಿನಗಳ ಕಾಲ ಸೋನಿಯಾಗಾಂಧಿ ಅವರು ಮಡಿಕೇರಿಯಲ್ಲೇ ಉಳಿದು ವಿಶ್ರಾಂತಿ ಪಡೆಯಲಿದ್ದು, ರಾಹುಲ್‍ಗಾಂಧಿ ಜತೆಯಾಗಲಿದ್ದಾರೆ.
ರಾಹುಲ್‍ಗಾಂಧಿ ಅವರು ಸಂಜೆಯವರೆಗೂ ಪಾದಯಾತ್ರೆಯಲ್ಲಿ ಭಾಗವಹಿಸಲಿ ನಂತರ ಮಡಿಕೇರಿಗೆ ತೆರಳಲಿದ್ದಾರೆ. ಸೋನಿಯಾಗಾಂಧಿ ಅವರು ಅ.6ರಂದು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ಮಹೇಶ್ವರಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗುತ್ತಿದ್ದು, ಅದರಲ್ಲಿ ಭಾಗವಹಿಸುವ ಸೋನಿಯಾಗಾಂ ಅವರು ಅಂದು ಮೇಲುಕೋಟೆಯ ಶ್ರೀ ಚೆಲುವರಾಯಸ್ವಾಮಿ ದೇವರ ದರ್ಶನ ಪಡೆಯುವ ಸಾಧ್ಯತೆ ಇದೆ.
ಅ.7ರಂದು ಪ್ರಿಯಾಂಕಗಾಂಧಿ ಅವರು ರಾಜ್ಯಕ್ಕೆ ಆಗಮಿಸಲಿದ್ದು, ನಾಗಮಂಗಲದಲ್ಲಿ ಪಾದಯಾತ್ರೆಗೆ ಹೆಜ್ಜೆ ಹಾಕಲಿದ್ದಾರೆ. ಆದಿಚುಂಚನಗಿರಿ ಮಠಕ್ಕೆ ರಾಹುಲ್‍ಗಾಂಧಿ ಅವರ ಜೊತೆ ಭೇಟಿ ನೀಡುವ ಸಾಧ್ಯತೆ ಇದೆ.