ದೆಹಲಿ ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ, ರಾಹುಲ್ ಜೊತೆ ಹೆಜ್ಜೆ ಹಾಕಿದ ಸೋನಿಯಾ, ಪ್ರಿಯಾಂಕಾ

Social Share

ನವದೆಹಲಿ,ಡಿ.25- ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ 108ನೇ ದಿನವಾದ ಇಂದು ಮುಂಜಾನೆ ರಾಜಧಾನಿ ದೆಹಲಿ ಪ್ರವೇಶಿಸಿದ್ದು, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಒಟ್ಟಿಗೆ ಸಾಥ್ ನೀಡಿದರು.

ಯಾತ್ರೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸುವಂತೆ ಕೇಂದ್ರ ಆರೋಗ್ಯ ಸಚಿವರು ಸೂಚನೆ ನಡುವೆಯೂ ಯಾತ್ರೆ ಇಂದು ದೆಹಲಿ ಪ್ರವೇಶಿಸಿದ್ದು, ರಾಹುಲ್ ಗಾಂಧಿ ಮತ್ತಿತರರನ್ನು ಪಕ್ಷದ ದೆಹಲಿ ನಾಯಕರು ಭಾದರ್‍ಪುರ್ ಗಡಿಯಲ್ಲಿ ಸ್ವಾಗತಿಸಿದರು.

ನಂತರ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿ, ಜೈರಾಮ್ ರಮೇಶ, ಪವನ್ ಖೇರಾ, ಭೂಪಿಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ಜಾ ಮತ್ತು ರಣದೀಪ್ ಸುರ್ಜೆವಾಲಾ ಸೇರಿದಂತೆ ಹಲವಾರು ಪಕ್ಷದ ನಾಯಕರು ರಾಹುಲ್ ಗಾಂಧಿಯವರೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ರಾಜಧಾನಿ ಪ್ರವೇಶಿಸಿದ ಯಾತ್ರೆಗೆ ರಾಹುಲ್ ಗಾಂಧಿ ಅವರ ತಾಯಿ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಹೋದರಿ ಪ್ರಿಯಾಂಕ ಗಾಂಧಿ ಸಾಥ್ ನೀಡಿದರು.

ಈ ಹಿಂದೆ ಆಕ್ಟೋಬರ್‍ನಲ್ಲಿ ಕರ್ನಾಟಕದಲ್ಲಿ ನಡೆದ ಪಾದಯಾತ್ರೆಯಲ್ಲಿ ಸೋನಿಯಾ ಪುತ್ರನೊಂದಿಗೆ ಹೆಜ್ಜೆ ಹಾಕಿದರು. ಈಗ ಎರಡನೆ ಬಾರಿಗೆ ದೆಹಲಿ ಯಾತ್ರೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಅವರು, ‘ನಫ್ರತ್ ಕಾ ಬರ್ಜಾ’ (ದ್ವೇಷದ ಮಾರುಕಟ್ಟೆ) ಮಧ್ಯೆ ‘ಮೊಹಬ್ಬತ್ ಕಿ ದುಕಾನï’ (ಪ್ರೀತಿಯ ಅಂಗಡಿ) ತೆರೆಯುವುದು ತಮ್ಮ ಯಾತ್ರೆಯ ಉದ್ದೇಶವಾಗಿದೆ ಎಂದು ಪುನರುಚ್ಚರಿಸಿದರು.

ಬಿಬಿಎಂಪಿ ಅಧಿಕಾರಿಗಳ ಸಭೆ : ಹೊಸ ವರ್ಷಾಚರಣೆಗೆ ಹೊಸ ನಿಯಮ

ದೇಶದ ಜನಸಾಮಾನ್ಯರು ಈಗ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿ ರಾಜ್ಯದಲ್ಲೂ ಲಕ್ಷಾಂತರ ಜನರು ಯಾತ್ರೆಗೆ ಸೇರಿದ್ದಾರೆ. ನಿಮ್ಮ ದ್ವೇಷದ ‘ಬರ್ಜಾ’ನಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಾವು ಇಲ್ಲಿದ್ದೇವೆ ಎಂದು ನಾನು ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಜನರಿಗೆ ಹೇಳಿದ್ದೇನೆ ಎಂದು ಅವರು ಹೇಳಿದರು.

ಅವರು (ಬಿಜೆಪಿ, ಆರ್‍ಎಸ್‍ಎಸï) ದ್ವೇಷವನ್ನು ಹರಡಿದರು, ನಾವು (ಕಾಂಗ್ರೆಸ್) ಪ್ರೀತಿಯನ್ನು ಹರಡುತ್ತೇವೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕೋವಿಡ್ ಪ್ರೋಟೋಕಾಲ ಅನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಳಿದ್ದರು. ಭಾರತ್ ಜೋಡೋ ಯಾತ್ರೆಗೆ ಸಿಕ್ಕಿರುವ ಪ್ರೀತಿಗೆ ಹೆದರಿ ಗಾಂಧಿಯವರ ಯಾತ್ರೆಯನ್ನು ನಿಲ್ಲಿಸಲು ಬಿಜೆಪಿ ಬಯಸಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಕೋವಿಶೀಲ್ಡ್ ಲಸಿಕೆ ಪೂರೈಸುವಂತೆ ಸರ್ಕಾರಕ್ಕೆ ಬಿಬಿಎಂಪಿ ಮನವಿ

ಇದರ ನಡುವೆಯೂ ಯಾತ್ರೆ ದೆಹಲಿ ಪ್ರವೇಶಿಸಿದ್ದು, ನಗರದ ಹಲವಾರು ಪ್ರದೇಶಗಳಲ್ಲಿ ಸಂಚರಿಸಿ ಸಂಜೆ ವೇಳೆಗೆ ಕೆಂಪುಕೋಟೆಯಲ್ಲಿ ಮುಕ್ತಾಯಗೊಳ್ಳಲಿದೆ. ಡಿಸೆಂಬರ್ 16 ರಂದು 100 ದಿನಗಳನ್ನು ಪೂರೈಸಿದ ಯಾತ್ರೆಯು ಇಂದಿನಿಂದ ಒಂಬತ್ತು ದಿನಗಳ ವಿರಾಮದ ಬಳಿಕೆ ಜ.3ರಿಂದ ಮತ್ತು ಪುನರಾರಂಭಗೊಳ್ಳಲಿದೆ.

Sonia, Priyanka,, join, Rahul Gandhi, Bharat Jodo Yatra,

Articles You Might Like

Share This Article