ಮುಂಬೈ ” ದೇಶ ದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ತನ್ನ ಆರ್ಭಟ ಹೆಚ್ಚಿಸುತ್ತಿದ್ದು ಇಂದು 58 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿ ಕೊಂಡಿರುವಾಗಲೇ ಬಾಲಿವುಡ್ ಅಂಗಳದಲ್ಲೂ ಕೂಡ ಕೊರೊನಾ ಅಬ್ಬರ ಜೋರಾಗಿದೆ.
# ಬಿಗ್‍ಬಿ ಸಿಬ್ಬಂದಿಗೆ ಸೋಂಕು:
ಬಾಲಿವುಡ್‍ನ ಬಾದ್‍ಷಾ ಎಂದೇ ಖ್ಯಾತಿ ಹೊಂದಿರುವ ಹಿರಿಯ ನಟ ಅಮಿತಾಬ್‍ಬಚ್ಚನ್‍ರ ಮುಂಬೈನಲ್ಲಿರುವ ಜಲ್ಸಾ ನಿವಾಸದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೇಶದಲ್ಲಿ 3ನೆ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಮಿತಾಬ್‍ಬಚ್ಚನ್ ಅವರು ತಮ್ಮ ಸಿಬ್ಬಂದಿಗಳಿಗೋಸ್ಕರ ಕೋವಿಡ್ ಪರೀಕ್ಷೆಯನ್ನು ಏರ್ಪಡಿಸಿ ದ್ದರೂ, 31 ಸಿಬ್ಬಂದಿಗಳು ಪರೀಕ್ಷೆಗೆ ಒಳಪಟ್ಟಾಗ ಅವರಲ್ಲಿ ಒಬ್ಬ ಸಿಬ್ಬಂದಿಗೆ ಕೊರೊನಾ ತಗುಲಿರುವುದ ದೃಢವಾಗಿದೆ.
2020ರಲ್ಲಿ ಅಮಿತಾಬ್‍ಬಚ್ಚನ್, ಸೊಸೆ, ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾರೈಗೂ ಕೊರೊನಾ ಸೋಂಕು ತಗುಲಿದ್ದನ್ನು ಇಲ್ಲಿ ಸ್ಮರಿಸಬಹುದು. ಅಮಿತಾಬ್‍ಬಚ್ಚನ್ ಅವರು ಸದ್ಯ ಬಾಲಿವುಡ್‍ನ ಸೀರಿಯಲ್ ಕಿಸ್ಸರ್ ಖ್ಯಾತಿಯ ಇಮ್ರಾನ್ ಹಶ್ಮಿ ನಟನೆಯ ಚಹರೆಯಲ್ಲಿ ನಟಿಸುತ್ತಿದ್ದಾರೆ.
# ಗಾಯಕ ಸೋನುನಿಗಮ್‍ಗೆ ಪಾಸಿಟಿವ್:
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಗಾಯಕ ಸೋನುನಿಗಮ್ ಅವರಿಗೂ ಕೊರೊನಾ ಪಾಸಿಟಿವ್ ಬಂದಿರುವ ವಿಷಯವನ್ನು ತಮ್ಮ ಇನ್ಸಾಟಾಗ್ರಾಮ್ ಖಾತೆ ಮೂಲಕ ನಿಗಮ್ ಸ್ಪಷ್ಟಪಡಿಸಿದ್ದಾರೆ. ಹೊಸ ವರ್ಷ ಆಚರಣೆ ಗಾಗಿ ದುಬೈಗೆ ತೆರಳಿದ್ದ ಗಾಯಕ ಸೋನುನಿಗಮ್‍ಗೆ ಶೀತವಾಗಿ ದ್ದರಿಂದ ಕೊರೊನಾ ಪರೀಕ್ಷೆಗೆ ಒಳ ಪಡಿಸಿದಾಗ ಅವರಿಗೆ ಪಾಸಿಟಿವ್ ಬಂದಿರುವುದು ಗೋಚರಿಸಿದೆ.
ಸೋನುನಿಗಮ್‍ರ ಪತ್ನಿ, ಮಗನಿಗೂ ಸೋಂಕು ತಗುಲಿರುವು ದರಿಂದ ಕ್ವಾರಂಟೈನ್‍ಗೆ ಒಳಗಾಗಿ ದ್ದಾರೆ. ಭುವನೇಶ್ವರದಲ್ಲಿ ಸೂಪರ್ ಸಿಂಗರ್ ಶೂಟ್ ಕಾರ್ಯಕ್ರಮದಲ್ಲಿ ಸೋನುನಿಗಮ್ ಪಾಲ್ಗೊಳ್ಳಬೇಕಾ ಗಿತ್ತಾದರೂ ಅವರಿಗೆ ಕೊರೊನಾ ಪಾಸಿಟಿವ್ ಆಗಿ ಕ್ವಾರಂಟೈನ್‍ಗೆ ಒಳಗಾಗಿರುವುದರಿಂದ ಅವರ ಸ್ಥಾನವನ್ನು ಖ್ಯಾತ ಗಾಯಕ ಅನುಮಲ್ಲಿಕ್ ತುಂಬಲಿದ್ದಾರೆ.
ಬಾಲಿವುಡ್‍ನ ಖ್ಯಾತ ಖಳನಟ ಪ್ರೇಮ್‍ಚೋಪ್ರಾ, ಆತನ ಪತ್ನಿ ಉಮಾಕಪೂರ್‍ಗೂ ಕೊರೊನಾ ತಗುಲಿರುವುದರಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬಾಲಿವುಡ್‍ನ ಸೆಲೆಬ್ರಿಟಿ ಗಳಲ್ಲಿ ಕೊರೊನಾ ಸೋಂಕು ಕಂಡುಬರುತ್ತಿದ್ದು ನಿನ್ನೆಯಷ್ಟೇ ನಟ ಜಾನ್ ಅಬ್ರಾಹಂ ಹಾಗೂ ಆತನ ಪತ್ನಿ ಪ್ರಿಯಾ ರಂಚಲ್ ಅವರಿಗೂ ಕೊರೊನಾ ಸೋಂಕು ತಗುಲಿದೆ.
