ಶಾಲೆ ಗೋಡೆ, ಮೆಟ್ಟಿಲುಗಳ ಮೇಲೆ `SORRY’ಬರೆದವನಿಗಾಗಿ ಪೊಲೀಸರ ಶೋಧ

Spread the love

ಬೆಂಗಳೂರು,ಮೇ 24- ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ ಎಂದು ವಿದ್ಯಾರ್ಥಿಗಳನ್ನು ಕರೆಯುವ ಶಾಲೆಯೊಂದರ ಪರಿಸರವನ್ನು ಹಾಳುಗೆಡುವಿರುವುದು ಕಂಡುಬಂದಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದಕಟ್ಟೆ ಸಮೀಪದ ಶಾಂತಿಧಾಮ ಶಾಲೆಯ ಮೆಟ್ಟಿಲುಗಳ ಮೇಲೆ ಇಂಗ್ಲೀಷ್ ಭಾಷೆಯಲ್ಲಿ ಸಾರಿ…ಸಾರಿ… ಎಂದು ಬರೆಯಲಾಗಿದೆ.

ಅಷ್ಟೇ ಅಲ್ಲದೆ ಶಾಲೆಯ ಗೋಡೆ ಮೇಲೆ , ಶಾಲೆ ಮುಂಭಾಗ ಈ ರೀತಿಯಾಗಿ ಬರೆದಿರುವುದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಮುಜುಗರಕ್ಕೀಡು ಮಾಡಿದೆ. ರಾತ್ರಿ 11 ಗಂಟೆ ನಂತರ ಈ ಬರಹವನ್ನು ಬರೆದಿರುವ ಸಾದ್ಯತೆಯಿದೆ. ಇಂದು ಬೆಳಗ್ಗೆ ಶಾಲಾ ಶಿಕ್ಷಕರು ಬಂದಾಗ ಎಲ್ಲಾ ಕಡೆಗಳಲ್ಲೂ ಸಾರಿ… ಸಾರಿ.. ಎಂದು ಬರೆದಿರುವುದನ್ನು ಗಮನಿಸಿದ್ದಾರೆ.

ತಕ್ಷಣ ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಿ ಶಾಲೆ ಬಳಿ ಬಂದು ಈ ರೀತಿ ಯಾರು ಬರೆದು ಹೋಗಿದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.

ಡ್ಯೂಕ್ ಬೈಕ್‍ನಲ್ಲಿ ಡೆಲಿವರಿ ಬಾಯ್ ಸೋಗಿನಲ್ಲಿ ಶಾಲೆ ಯೊಳಗೆ ಬಂದು ಸ್ಪ್ರೇನಲ್ಲಿ ಬರೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ರೀತಿ ಶಾಲೆ ಆವರಣದಲ್ಲಿ ಯಾರು ಬರೆದಿದ್ದಾರೆ, ಏತಕ್ಕಾಗಿ ಬರೆದರು, ಯಾರಿಗೆ ಕ್ಷಮೆ ಕೇಳಬೇಕಿತ್ತು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

Facebook Comments