ಇಂಗ್ಲೆಂಡ್ ವಿರುದ್ಧ ಸರಣಿ ಜಯ, ಯುವ ಪಡೆಗೆ ದಾದಾ ಶಹಬಾಸ್‍ಗಿರಿ

Social Share

ನವದೆಹಲಿ, ಜು. 18- ಇಂಗ್ಲೆಂಡ್ ಪಿಚ್‍ಗಳಲ್ಲಿ ಆಂಗ್ಲರನ್ನು ಸದೆಬಡಿದು ಸರಣಿ ಗೆಲ್ಲುವುದು ಅಷ್ಟು ಸುಲಭವಲ್ಲ ಆದರೆ ಟೀಂ ಇಂಡಿಯಾದ ಯುವ ಆಟಗಾರರ ಉತ್ಕøಷ್ಟ ಪ್ರದರ್ಶನದಿಂದಾಗಿ ಟ್ವೆಂಟಿ-20 ಹಾಗೂ ಏಕದಿನ ಸರಣಿಯನ್ನು ಗೆಲ್ಲಲು ಸಹಕಾರಿಯಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಗುಣಗಾನ ಮಾಡಿದ್ದಾರೆ.

2021ರಲ್ಲಿ ಆರಂಭಗೊಂಡ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯ 5ನೆ ಟೆಸ್ಟ್ ಪಂದ್ಯವು 2022ರಲ್ಲಿ ನಡೆದಿತ್ತು, ಟೆಸ್ಟ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರ ರಿಷಭ್ ಪಂತ್ ಹಾಗೂ ಜಸ್‍ಪ್ರೀತ್ ಬೂಮ್ರಾ ಸೇರಿದಂತೆ ಯುವ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದರಿಂದ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ 2-2 ರಿಂದ ಸರಣಿ ಸಮಬಲಗೊಳಿಸಲಾಯಿತು.

ನಂತರ ನಡೆದ ಚುಟುಕು ಸರಣಿಯಲ್ಲಿ ಅನುಭವಿ ಆಟಗಾರ ಭುವನೇಶ್ವರ್‍ಕುಮಾರ್, ಜಸ್‍ಪ್ರೀತ್ ಬೂಮ್ರಾ, ಯುವ ಆಟಗಾರರಾದ ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ , ಹರ್ಷದೀಪ್ ಸಿಂಗ್‍ರ ಪ್ರದರ್ಶನ ಐಪಿಎಲ್ ವಿಜೇತ ನಾಯಕ ಹಾರ್ದಿಕ್ ಪಾಂಡ್ಯರ ಅದ್ಭುತ ಆಟದಿಂದಾಗಿ 2-1 ರಿಂದ ಸರಣಿಯನ್ನು ವಶಪಡಿಸಿಕೊಳ್ಳಲು ಸಹಕಾರಿ ಯಾಯಿತು ಎಂದು ಸೌರವ್ ಗಂಗೂಲಿ ಹೇಳಿದರು.

ಏಕದಿನ ಸರಣಿಯನ್ನು ತಮ್ಮ ಬ್ಯಾಟಿಂಗ್ ವೈಭವ ಮೆರೆದ ಭಾರತದ ಆಟಗಾರರು ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಜಯಿಸುವ ಭರವಸೆ ಮೂಡಿಸಿದ್ದರೂ ಅದಕ್ಕೆ ತಕ್ಕಂತೆ ನಿರ್ಣಾಯಕ ಪಂದ್ಯದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಅಲ್‍ರೌಂಡರ್ ಹಾರ್ದಿಕ್ ಪಾಂಡ್ಯರ ರೋಚಕ ಆಟದಿಂದಾಗಿ ಆಂಗ್ಲರ ನಾಡಿನಲ್ಲಿ ಭಾರತ 2-1 ರಿಂದ ಸರಣಿ ಜಯಿಸಿತು ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಸ್ತುತ ಭಾರತ ತಂಡವು ಶಿಖರ್ ಧವನ್‍ರ ನಾಯಕತ್ವದಲ್ಲಿ ವೆಸ್ಟ್‍ಇಂಡೀಸ್‍ನಲ್ಲಿ ಏಕದಿನ ಸರಣಿ ಹಾಗೂ ರೋಹಿತ್ ಶರ್ಮಾ ಸಾರಥ್ಯದಲ್ಲಿ ಚುಟುಕು ಸರಣಿ ಆಡಲು ಸಜ್ಜಾಗಿದೆ ಎಂದು ಸೌರವ್ ತಿಳಿಸಿದರು.

Articles You Might Like

Share This Article