ಸೌತ್ ಏಷ್ಯಾನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ  ಸಾಕ್ಷಿ, ರವೀಂದ್ರಾ

ಕಠ್ಮಂಡು, ಡಿ.9- ಸೌತ್ ಏಷ್ಯಾನ್ ಗೇಮ್ಸ್‍ನಲ್ಲಿ ಭಾರತದ ಕುಸ್ತಿಪಟುಗಳು ಪದಕಗಳ ಬೇಟೆಯನ್ನು ಮುಂದುವರೆಸಿದ್ದು ಇಂದು ಕೂಡ ಸಾಕ್ಷಿಮಲ್ಲಿಕ್ ಹಾಗೂ ರವೀಂದ್ರಾ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ರಿಯೋ ಒಲಿಂಪಿಕ್ಸ್‍ನಲ್ಲಿ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದ ಸಾಕ್ಷಿ ಮಲ್ಲಿಕ್ 62 ಕೆಜಿ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದರೆ,

ಅಂಡರ್ 23 ವಿಶ್ವ ಚಾಂಪಿಯನ್ಸ್‍ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದ ರವೀಂದ್ರ ಅವರು 61 ಕೆಜಿ ಪುರುಷರ ಫ್ರಿಸ್ಟೈಲ್ ವಿಭಾಗದಲ್ಲಿ ಚಿನ್ನವನ್ನು ಗೆದ್ದು ಪದಕಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ.ಮಹಿಳೆಯರ ಫ್ರಿ ಸ್ಚಟೈಲ್ ವಿಭಾಗದಲ್ಲಿ ಅಂಶು (59 ಕೆಜಿ) ಹಾಗೂ 86 ಕೆಜಿ ವಿಭಾಗದಲ್ಲಿ ಭಾರತದ ಪವನ್‍ಕುಮಾರ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪವನ್ ಪಾಕಿಸ್ತಾನದ ಕುಸ್ತಿಪಟು ವಿರುದ್ಧ 4-1 ರಿಂದ ಗೆದ್ದು ಬೀಗಿದರೆ ಅಂಶು ಶ್ರೀಲಂಕಾದ ಸ್ಪರ್ಧಿ ವಿರುದ್ಧ ಗೆದ್ದು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕುಸ್ತಿ ವಿಭಾಗದಲ್ಲಿ ಭಾರತವು ಇದುವರೆಗೆ 12 ಪದಕಗಳನ್ನು ಗೆದ್ದಿದ್ದು ಅ ಗೌರವ್ ಬಲಿಯಾನ್ (74ಕೆಜಿ) ಹಾಗೂ ಅನಿತಾ ಶಿರೋನ್ (68 ಕೆಜಿ) ಕೂಡ ಪದಕಗಳನ್ನು ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ.