ಸಿಯೋಲ್, ಆ.22- ಅಮೆರಿಕಾ ಜೊತೆಗೂಡಿ ದಕ್ಷಿಣ ಕೊರಿಯಾ ತನ್ನ ಸಮರಾಭ್ಯಾಸವನ್ನು ಚುರುಕುಗೊಳಿಸಿದೆ. ಈ ಮೂಲಕ ಉತ್ತರ ಕೊರಿಯಾಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದೆ. ಉತ್ತರ ಕೊರಿಯಾ ತನ್ನ ಪ್ರಚೋದನೆಯ ಅಣ್ವಸ್ತ್ರ ದಾಳಿ ಬೆದರಿಕೆಗೂ ಬಗ್ಗದೆ ತನ್ನ ಬತ್ತಳಿಕೆಯಲ್ಲಿರುವ ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಸಿ, ತನ್ನ ಬಲವನ್ನು ಪ್ರದರ್ಶಿಸಿದೆ. ಇದರಿಂದಾಗಿ ಯುದ್ಧದ ಕಾರ್ಮೋಡ ದಟ್ಟವಾಗಿ ಹರಡಿದೆ.
ಮುಂದಿನ ಸೆಪ್ಟೆಂಬರ್ 1ರ ವರೆಗೆ ವಾಯುಪಡೆ, ನೌಕಪಡೆ ಮತ್ತು ಭೂಸೇನೆಯ ಯೋಧರು ಸಮರಾಭ್ಯಾಸದಲ್ಲಿ ತೊಡಗಲಿದ್ದಾರೆ. ಹಲವಾರು ಯುದ್ಧ ವಿಮಾನಗಳ ಹಾರಾಟ ಮತ್ತು ಸಮರ ಟ್ಯಾಂಕ್‍ಗಳ ಘರ್ಜನೆ ಹೆಚ್ಚುತ್ತಿದ್ದು, ಸಾವಿರಾರು ಸೈನಿಕರು ವಿವಿಧ ರೀತಿಯ ಕಸರತ್ತುಗಳಲ್ಲಿ ತೊಡಗಿದ್ದಾರೆ.
ಅಮೆರಿಕಾ ಇದನ್ನು ರಕ್ಷಣಾತ್ಮಕ ಸಮರಾಭ್ಯಾಸ ಎಂದು ಹೇಳುತ್ತಿದ್ದರು. ಉತ್ತರ ಕೊರಿಯಾ ಇದನ್ನು ಯುದ್ಧದ ತಾಲೀಮು ಎಂದು ಹೇಳುತ್ತಿದ್ದು, ಚೋ ಜಾಂಗ್ ಹೋನ್ ಅವರು ಈ ಕುರಿತು ಮಾತನಾಡಿ, ನಾವು ಉತ್ತರ ಕೊರಿಯಾ ಜೊತೆ ಯಾವುದೇ ರೀತಿಯ ಗಲಾಟೆ ಮಾಡುತ್ತಿಲ್ಲ. ನಮ್ಮ ದೇಶದ ಭದ್ರತೆಯನ್ನು ಹೆಚ್ಚಿಸಲು ಈ ಸಮರಾಭ್ಯಾಸ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.