ಸಿಯೋಲï, ಜ.20-ದಕ್ಷಿಣ ಕೊರಿಯಾದ ಸಿಯೋಲ್ ಹೊರವಲಯದ ಗುರ್ಯೋಂಗ್ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ಬೆಂಕಿ ಅವಗಡದಲ್ಲಿ ಸುಮಾರು 60 ಮನೆಗಳು ನಾಶಗೊಂಡಿದೆ. ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಣಕ್ಕೆ ಸುಮಾರು 6 ತಾಸು ಪ್ರಯಾಸಪಟ್ಟಿದ್ದು ಗಾಯಗಳಿಗಳು ಅಥವಾ ಸಾವಿನ ಬಗ್ಗೆ ತಕ್ಷಣದ ವರದಿಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 500ಕ್ಕೂ ಹೆಚ್ಚು ಜನರು ಮನೆಗಳನ್ನು ಬಿಟ್ಟು ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಓಡುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ಕಂಡುಬಂದಿದೆ.
ನಮ್ಮ ರಕ್ಷಣಾ ಕಾರ್ಯಕರ್ತರು ಬೆಂಕಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಹುಡುಕಾಟವನ್ನು ಮುಂದುವರೆಸಿದ್ದಾರೆ ಆದರೆ ಅಲ್ಲಿನ ಎಲ್ಲಾ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದಾರೆ ಎಂದು ಸಿಯೋಲ್ನ ಗಂಗ್ನಮ್ ಜಿಲ್ಲೆಯ ಅಗ್ನಿಶಾಮಕ ವಿಭಾಗದ ಅಧಿಕಾರಿ ಶಿನ್ ಯೋಂಗ -ಹೋ ತಿಳಿಸಿದ್ದಾರೆ.
ಡಾಲರ್ಗೆ ಸೆಡ್ಡು ಹೊಡೆಯಲು ಭಾರತದೊಂದಿಗೆ ಕೈ ಜೋಡಿಸಿದ ಹಲವು ರಾಷ್ಟ್ರಗಳು
ಇಂದು ಬೆಳಿಗ್ಗೆ 6:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ನಂತರ 800 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ಕಾರ್ಯಕರ್ತರು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದರು.
ಹೆಲಿಕಾಪ್ಟರ್ಗಳನ್ನು ಬಳಸಿ ಮೇಲಿನಿಂದ ನೀರನ್ನು ಸಿಂಪಡಿಸಿ ಬೆಂಕಿ ಹರಡದಂತೆ ನೋಡಿಕೊಳ್ಳಲಾಯಿತು ಬೆಂಕಿ ಅನಾಹುತಕ್ಕೆ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಸುಮಾರು 500 ನಿವಾಸಿಗಳನ್ನು ಸ್ಥಳೀಯ ಶಾಲೆಯ ,ಜಿಮ್,ಹೋಟೆಲ್ ಸೇರಿದಂತೆ ಹತ್ತಿರದ ಸಾಮೂಹಿಕ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
South Korea, fire, spurs, evacuation, shanty town,