ಮತ್ತೊಮ್ಮೆ ದಕ್ಷಿಣ ಕೊರಿಯಾದತ್ತ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

Social Share

ಸಿಯೋಲ್, ನ.9-ಉತ್ತರ ಕೊರಿಯಾ ಪ್ರಚೋದನೆಗಳು ಮುಂದುವರೆದಿದ್ದು, ದಕ್ಷಿಣ ಕೊರಿಯಾದ ಪೂರ್ವವಲಯದ ಸಮುದ್ರದತ್ತ ಒಂದು ಖಂಡಾಂತರ ಕ್ಷಿಪಣಿಯನ್ನು ಹಾರಿಸಿದೆ. ಹಾರಿಸಲಾದ ಕ್ಷಿಪಣಿ ಎಷ್ಟು ದೂರದವರೆಗೂ ತಲುಪಿದೆ ಎಂಬುದನ್ನು ದಕ್ಷಿಣ ಕೊರಿಯಾ ಸ್ಪಷ್ಟಪಡಿಸಿಲ್ಲ. ಆದರೆ ಇದನ್ನು ಪ್ರಚೋದನಾ ಕೃತ್ಯ ಎಂದು ಆಕ್ಷೇಪಿಸಿದೆ.

ಇತ್ತೀಚೆಗೆ ಅಮೆರಿಕಾ ಮತ್ತು ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸ ನಡೆಸಿದ್ದಕ್ಕೆ ಪ್ರತಿಯಾಗಿ ಕಳೆದ ವಾರ ಉತ್ತರ ಕೊರಿಯಾ ಡಜನ್‍ಗೂ ಹೆಚ್ಚು ಕ್ಷಿಪಣಿಗಳನ್ನು ಉಡಾವಣೆ ಮಾಡಿ ಆಕ್ರೋಶ ಹೊರ ಹಾಕಿತ್ತು. ಉತ್ತರ ಕೊರಿಯಾ ಪದೇ ಪದೇ ಅಣ್ವಸ್ತ್ರ ಪರೀಕ್ಷೆ ನಡೆಸುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ ಎಂಬ ಕಾರಣಕ್ಕೆ ಅಮೆರಿಕಾ ದಕ್ಷಿಣ ಕೊರಿಯಾಗೆ ಬೆಂಬಲವಾಗಿ ನಿಂತು ಜಂಟಿ ಸಮರಾಭ್ಯಾಸ ನಡೆಸಿದೆ. ಇದು ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ.

ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಸಿಎಂ ಬೊಮ್ಮಾಯಿ ಭೇಟಿ

Articles You Might Like

Share This Article