ಲಿಮಾ (ಪೆರು), ಫೆ 7 – ಪೆರು ದೇಶದ ದಕ್ಷಿಣ ಭಾಗದಲ್ಲಿ ನಿರಂತರ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಹಲವಾರು ಗ್ರಾಮಗಳು ನಾಶಗೊಂಡಿದ್ದು ಸುಮಾರು 36 ಜನರು ಸಾವನ್ನಪ್ಪಿದ್ದಾರೆ.
ಮಿಸ್ಕಿ ಎಂಬ ಗುಡ್ಡಗಾಡು ಪ್ರದೇಶದಲ್ಲಿ 36 ಶವ ಪತ್ತೆಯಾಗಿದ್ದು ಮನೆಗಳ ಮೇಲೆ ಬಂಡೆಗಳು ಉರುಳಿವೆ ಕೆಲ ರಸ್ತೆಗಳು ನದಿಗಳಾಗಿ ಅನೇಕ ವಾಹನಗಳು ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ಕಾರ್ಯಾವಾಗಿ ಪ್ರಮುಖ ರಸ್ತೆಯಲ್ಲಿ ಅವಶೇಷಗಳನ್ನು ತೆರವುಗೊಳಿಸಲು ಭಾರೀ ಯಂತ್ರೋಪಕರಣಗಳನ್ನು ಕಳುಹಿಸಲು ಸ್ಥಳೀಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಜನ ಸಾಮಾನ್ಯರ ಮೇಲೆ ಮೋದಿಗೇಕಿಷ್ಟು ದ್ವೇಷ..? : ಸಿದ್ದರಾಮಯ್ಯ
ಭೂಕುಸಿತದ ನಂತರ ಅಂದಾಜು 630 ಮನೆಗಳು ನಾಶಗೊಂಡಿದೆ ಎಂದು ನಾಗರಿಕ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ, ಪೆರುವಿನಲ್ಲಿ ಪ್ರತಿ ವರ್ಷ ಫೆಬ್ರುವರಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತದೆ ಮತ್ತು ಆಗಾಗ್ಗೆ ಭೂಕುಸಿತಗಳು ಉಂಟಾಗುತ್ತದೆ.
Southern Peru, Landslide, triggered, steady, rains, kills, least 36,