22ರಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರಶಸ್ತಿ ಪ್ರದಾನ

ಬೆಂಗಳೂರು, ಅ.20- ನಾದಬ್ರಹ್ಮ ಹಂಸಲೇಖ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಮತ್ತಿತರರು ಈ ಬಾರಿಯ ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕಿ ರಮ್ಯಾ ವಸಿಷ್ಠ ನೇತೃತ್ವದ ಮಂದ್ರ ಕಲ್ಚರಲ್ ಫೌಂಡೇಷನ್ ವತಿಯಿಂದ ಪ್ರತಿ ವರ್ಷ ನೀಡಲಾಗುವ ಎಸ್.ಪಿ.ಬಾಲ ಸುಬ್ರಹ್ಮಣ್ಯಂ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮ ಇದೇ ಶುಕ್ರವಾರ ಸಂಜೆ 5.30ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ನೆರವೇರಲಿದೆ.

ನಾಗಾಭರಣ, ಹಂಸಲೇಖ ಅವರ ಜತೆಗೆ ಡಾ.ಕಲ್ಲಡ್ಕ ಪ್ರಭಾಕರ್‍ಭಟ್, ಡಾ.ಬಿ.ಕೆ.ಎಸ್.ವರ್ಮ, ಹೋಮಿಯೋಪತಿ ವೈದ್ಯ ಡಾ.ಮದನ್, ವಾಯುಯಾನ ಉದ್ಯಮಿ ಕ್ಯಾಪ್ಟನ್ ಗೋಪಿನಾಥ್, ಎಂ.ಬಿ.ಜಯರಾಮ್, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ, ಎಸ್.ವಿ.ವೆಂಕಟೇಶ್ ಹಾಗೂ ಸಹ ಕಂದಾಯಾಕಾರಿ ಬಸವರಾಜ್ ಮಗಿ ಅವರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಪ್ರಶಸ್ತಿ ಪುರಸ್ಕøತರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಉದ್ಘಾಟಿಸಲಿದ್ದು, ಮಾಜಿ ಮೇಯರ್ ಗೌತಮ್‍ಕುಮಾರ್, ನಿವೃತ್ತ ಐಪಿಎಸ್ ಅಧಿಕಾರಿ ಡಾ.ಶಂಕರ್ ಮಹದೇವ್ ಬಿದರಿ, ಲಹರಿ ರೆಕಾರ್ಡಿಂಗ್ ಸಂಸ್ಥೆ ಸಂಸ್ಥಾಪಕ ತುಳಸಿರಾಮ್ ನಾಯ್ಡು ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಬಿಎಂಪಿ ಅಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‍ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.