ಜೈಲು ಅಪರಾಧ ಚಟುವಟಿಕೆಗಳಿಗೆ ಪ್ರೋತ್ಸಾಹ : ಎಸ್‍ಪಿ ಮುಖಂಡ ಬಂಧನ

Social Share

ಲಕ್ನೋ,ಫೆ.21-ದರೋಡೆಕೋರ ಮುಖ್ತಾರ್ ಅನ್ಸಾರಿ ಅವರ ಪುತ್ರ ಹಾಗೂ ಶಾಸಕ ಅಬ್ಬಾಸ್ ಅನ್ಸಾರಿ ಮತ್ತು ಆತನ ಪತ್ನಿ ನಿಖತ್ ಅವರಿಗೆ ಜೈಲಿನಲ್ಲಿ ಅಪರಾಧ ಚಟುವಟಿಕೆಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ ಮುಖಂಡ ಫರಾಜ್‍ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಸಮಾಜವಾದಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಫರಾಜ್ ಖಾನ್ ಆರೋಪಿಗಳಿಗೆ ಅಪರಾಧ ಚಟುವಟಿಕೆಗಳಲ್ಲಿ ಕುಮ್ಮಕ್ಕು ನೀಡುವಲ್ಲಿ ಮತ್ತು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಡಿಐಜಿ ವಿಪಿನ್ ಕುಮಾರ್ ಹೇಳಿದ್ದಾರೆ.

ಗ್ಯಾಂಗ್‍ಸ್ಟರ್ ಬಿಷ್ಣೋಯ್ ಅಡ್ಡೆಗಳ ಮೇಲೆ NIA ದಾಳಿ

ಕೆಲ ದಿನಗಳ ಹಿಂದೆ ನಿಖತ್ ಅವರು ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಬ್ಬಾಸ್ ಅನ್ಸಾರಿ ಅವರ ಬಳಿ ಎರಡು ಮೊಬೈಲ್ ಫೋನ್‍ಗಳು ಪತ್ತೆಯಾಗಿದ್ದವು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದ ನಿಖತ್ ಹಾಗೂ ಆಕೆಯ ಚಾಲಕನನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆ ಬೆನ್ನಲ್ಲೇ ಫರಾಜ್‍ಖಾನ್ ಅವರ ಬಂಧನವಾಗಿದೆ.

ಈ ಘಟನೆ ನಂತರ ಜೈಲಿನಲ್ಲಿ ಅನ್ಸಾರಿ ಅವರ ಮೇಲೆ ಹದ್ದಿನಕಣ್ಣಿಡಲಾಗಿದೆ. ಆತನಿರುವ ಕಾಸ್‍ಗಂಜ್ ಜೈಲಿಗೆ ದೇಹಕ್ಕೆ ಧರಿಸುವ ಕ್ಯಾಮೆರಾ ಹಾಗೂ ಡ್ರೋನ್‍ಗಳನ್ನು ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಕಾಸ್ಗಂಜ್ ಜೈಲಿಗೆ ಐದು ಬಾಡಿ ವೋರ್ನ್ ಕ್ಯಾಮೆರಾಗಳು ಮತ್ತು ಒಂದು ಡ್ರೋನ್ ಕ್ಯಾಮೆರಾವನ್ನು ನೀಡಲಾಗಿದೆ. ಅಬ್ಬಾಸ್ ಅವರ ಬ್ಯಾರಕ್ ಸುತ್ತಲೂ ಇರುವ ಜೈಲು ಸಿಬ್ಬಂದಿ ದೇಹಕ್ಕೆ ಧರಿಸಿರುವ ಕ್ಯಾಮೆರಾಗಳನ್ನು ಧರಿಸುತ್ತಾರೆ. ಡ್ರೋನ್ ಕ್ಯಾಮೆರಾದೊಂದಿಗೆ ಕಣ್ಗಾವಲು ನಡೆಸಲಾಗುವುದು ಎಂದು ಜೈಲು ಡಿಜಿ ಆನಂದ್ ಕುಮಾರ್ ಹೇಳಿದರು.

್ತ ಮË ಸದರ್ ಕ್ಷೇತ್ರದ ಶಾಸಕರಾಗಿರುವ ಅಬ್ಬಾಸ್ ಅನ್ಸಾರಿ ಅವರು ಶಸ್ತ್ರಾಸ್ತ್ರ ಪರವಾನಗಿ ವರ್ಗಾವಣೆಯ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಈತನ ವಿರುದ್ಧ ಲಕ್ನೋ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತ್ತು.

ಹೆಡ್‌ಕಾನ್‌ಸ್ಟೆಬಲ್‌ ಕತ್ತು ಸೀಳಿದ ನಕ್ಸಲರು

ಇದಕ್ಕೂ ಮುನ್ನ ಆಗಸ್ಟ 18 ರಂದು, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಲಕ್ನೋ ಮತ್ತು ಘಾಜಿಪುರದಲ್ಲಿ ಬಹುಜನ ಸಮಾಜ ಪಕ್ಷದ ಮಾಜಿ ಸಂಸದ ಮುಖ್ತಾರ್ ಅನ್ಸಾರಿ ಅವರ ಕಚೇರಿಗಳ ಮೇಲೆ ದಾಳಿ ನಡೆಸಿತ್ತು.

Articles You Might Like

Share This Article