ಕಾನ್ಪುರ್,ಡಿ.20- ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಶಾಸಕನ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದಿದ್ದ ಅಲ್ಲಿನ ಪ್ರಜೆಗಳಿಗೆ ಸ್ಥಳೀಯವಾಗಿ ದಾಖಲಾತಿಗಳನ್ನು ಸೃಷ್ಟಿಸಲು ಅನುಕೂಲವಾಗುವಂತೆ ಪತ್ರ ನೀಡಿದ ಆರೋಪ ಮಾಡಲಾಗಿದೆ.
ಭೂ ವಿವಾದಕ್ಕೆ ಸಂಬಂಧಿಸಿದಂತೆ ಗಲಭೆ ಮಾಡಿ, ಬೆಂಕಿ ಹಚ್ಚಿದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ನವೆಂಬರ್ 8ರಂದು ಶರಣಾಗಿದ್ದರು. ಸಮಾಜ ವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಿನ್ನೆಯಷ್ಟೇ ಜೈಲಿನಲ್ಲಿ ಸೋಲಂಕಿಯನ್ನು ಭೇಟಿ ಮಾಡಿ, ಉತ್ತರ ಪ್ರದೇಶ ಸರ್ಕಾರ ತಮ್ಮ ಪಕ್ಷದ ಶಾಸಕರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲು ಮಾಡಿದೆ ಎಂದು ಆರೋಪಿಸಿದ್ದರು.
ಈ ಹಿಂದೆ ಭೂಗತ ಜಗತ್ತಿನಲ್ಲಿ ಗುರುತಿಸಿಕೊಂಡು ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟ ಬಲವಂತ್ ಸಿಂಗ್ ಮತ್ತು ಎನ್ಕೌಂಟರ್ನಲ್ಲಿ ಮೃತಪಟ್ಟ ವಿಕಾಶ್ ದುಬೆ ಅವರಂತೆ ಇರ್ಫಾನ್ ವಿರುದ್ಧವೂ ಸಂಚು ನಡೆದಿತ್ತು. ನಮ್ಮ ಪಕ್ಷದ ಶಾಸಕರು ಕಾನ್ಪುರಲ್ಲೇ ಇದ್ದರು ಅವರು ಎಲ್ಲಿಗೂ ಪರಾರಿಯಾಗಿರಲಿಲ್ಲ. ತೊಂದರೆ ನೀಡಲು ಸುಳ್ಳು ಪ್ರಕರಣದ ಮೂಲಕ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದರು.
ಬಿಜೆಪಿಯ ಒಂದು ನಾಯಿಯೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿಲ್ಲ : ಖರ್ಗೆ
ಅಖಿಲೇಶ್ ಯಾದವ್ ಬಂಧಿಖಾನೆ ಭೇಟಿ ಮುಗಿಸಿ ವಾಪಾಸ್ಸಾಗುತ್ತಿದ್ದಂತೆ ಕಾನ್ಪುರ ಪೊಲೀಸರು ಹೊಸ ಪ್ರಕರಣ ದಾಖಲಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಆನಂದ ಪ್ರಕಾಶ್ತಿವಾರಿ, ಪೊಲೀಸ್ ತನಿಖೆಯಲ್ಲಿ ಶಾಸಕ ಇರ್ಫಾನ್ ಅವರ ಮೇಲಿನ ದೂರುಗಳಿಗೆ ಸಾಕ್ಷ್ಯ ಸಿಕ್ಕಿವೆ ಎಂದಿದ್ದಾರೆ.
ಬಾಂಗ್ಲಾದೇಶದಿಂದ ಆಗಮಿಸಿ ಕಾನ್ಪುರದಲ್ಲಿ ನೆಲೆಸಿದ್ದ ಒಂದು ಕುಟುಂಬದ ನಾಲ್ವರನ್ನು ಡಿಸೆಂಬರ್ 11ರಂದು ಬಂಧಿಸಲಾಗಿದೆ. ಪರಿಶೀಲನೆ ನಡೆಸಿದಾಗ ಅವರ ಬಳಿ ನಕಲಿ ದಾಖಲಾತಿಗಳಿದ್ದವು. 13 ಪಾಸ್ಪೋರ್ಟ್, ಐದು ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣ ಪತ್ರ, ವಿದೇಶಿ ಕರೆನ್ಸಿ, ಚಿನ್ನಾಭರಣಗಳು ಮತ್ತು 14 ಲಕ್ಷ ರೂಪಾಯಿಗೂ ಮೀರಿದ ಹಣ ಪತ್ತೆಯಾಗಿತ್ತು.
ಕೇಳ್ರಪ್ಪ ಕೇಳಿ, ಹೊಸ ವರ್ಷಕ್ಕೂ ಮುನ್ನ ಬೆಂಗಳೂರು ರಸ್ತೆಗಳು ಗುಂಡಿ ಮುಕ್ತವಾಗಲಿವೆಯಂತೆ..!
ವಿದೇಶಿ ಪ್ರಜೆಗಳು ಇಲ್ಲಿನ ದಾಖಲಾತಿಗಳನ್ನು ಪಡೆದುಕೊಳ್ಳಲು ಶಾಸಕರು ನೀಡಿರುವ ಪರಿಚಯ ಪತ್ರ ಮುಖ್ಯಪಾತ್ರ ವಹಿಸಿತ್ತು ಎಂದು ಹೇಳಲಾಗಿದೆ. ಈ ಆರೋಪಕ್ಕಾಗಿ ಶಾಸಕ ಸೋಲಂಕಿಯವರ ವಿರುದ್ಧ ಕಾನ್ಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
SP MLA, booked,Bangladeshi, family living, illegally, India,