ಪ್ರವಾಸಿ ತಾಣದಂತಾದ ಬಾಹ್ಯಾಕಾಶ, 3 ದಿನದ ಪ್ರವಾಸ ಮುಗಿಸಿ ನಾಲ್ವರು ವಾಪಸ್..!
ನವದೆಹಲಿ, ಸೆ.19- ಭೂಮಿಯ ಮೇಲಿನ ಪ್ರವಾಸಿತಾಣಗಳಿಗೆ ಪ್ರವಾಸ ಹೋದಂತೆ ಇನ್ನು ಮುಂದೆ ಬಾಹ್ಯಾಕಾಶ ಪ್ರವಾಸ ಕೈಗೊಳ್ಳುವ ಅವಕಾಶಗಳು ಖಚಿತವಾಗಿವೆ. ಸ್ಪೆಸ್ಎಕ್ಸ್ ಖಾಸಗಿ ಸಂಸ್ಥೆ ಆಯೋಜಿಸಿದ್ದ ಬಾಹ್ಯಕಾಶ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಲ್ವರು ಇಂದು ಬೆಳಗ್ಗೆ ಅಟ್ಲಾಂಟಿಕ್ ಸಾಗರದ ಬದಿಯಲ್ಲಿ ಯಶಸ್ವಿಯಾಗಿ ಬಂದಿಳಿಯುವ ಮೂಲಕ ಮೂರು ದಿನಗಳ ಯಶಸ್ವಿಯಾನ ಮುಗಿಸಿದ್ದಾರೆ.
ಎಂಐಟಿ ಸ್ವಾತತ್ತ ಬಾಹ್ಯಾಕಾಶ ಉಪಗ್ರಹ ನಾಲ್ವರು ಪ್ರಯಾಣಿಕರೊಂದಿಗೆ ನೀಲಾಕಾಶದಲ್ಲಿ 90 ಸುತ್ತು ಪ್ರಯಾಣಿಸಿದೆ. ಈ ಮೂಲಕ ಬಾಹ್ಯಕಾಶ ಪ್ರವಾಸೋದ್ಯಮದಲ್ಲಿ ಭಾರೀ ಪ್ರಮಾಣದ ಅವಕಾಶಗಳು ತೆರೆದುಕೊಂಡಿವೆ. ಇನ್ನು ಮುಂದೆ ಇದು ಕೂಡ ಆದಾಯ ತರುವ ಪ್ರಮುಖ ಮೂಲವಾಗುವ ಸಾಧ್ಯತೆ ಇದೆ.
ಮೊದಲ ಹಂತದ ಪ್ರಯತ್ನದಲ್ಲಿ ಬಿಲೇನಿಯರ್ ಉದ್ಯಮಿ ಐಸಾಕ್ಮ್ಯಾನ್ ಅವರು ಸ್ಪೆಸ್ಎಕ್ಸ್ ಆಯೋಜಿಸಿದ್ದ ಪ್ರಯಾಣದಲ್ಲಿನ ನಾಲ್ಕು ಸ್ಥಾನಗಳನ್ನು ತಾವೇ ಖರೀದಿಸಿದರು ಮತ್ತು ಅವುಗಳನ್ನು ಗಣ್ಯ ಸೇವೆ ಸಲ್ಲಿಸಿದ ಸಮಾಜ ಪ್ರಮುಖರಿಗೆ ಕೊಡುಗೆ ನೀಡಿ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. ಸೆಂಟ್ ಜುಡೇ ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯಾಕಾರಿ ಹ್ಯಾಲೇ ಅರ್ಸೆನೆಕ್ಸ್, ಡಾ.ಸೈನ್ ಪೋ ಕ್ಟರ್, ಅರಿಝೋನಾ ಅವರು ಬಾಹ್ಯಾಕಾಶ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಪ್ರವಾಸಿಗರ ಪೈಕಿ ಅರ್ಸೆನೆಕ್ಸ್ ಅವರು ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು ಗುಣಮುಖರಾದವರಾಗಿದ್ದಾರೆ. ಕೃತಕ ಅಂಗಾಂಗಗಳ ಜೊತೆ ನೀಲಾಕಾಶ ಪ್ರವಾಸ ಮಾಡಿದ ಕೀರ್ತಿಗೂ ಪಾತ್ರವಾಗಿದ್ದಾರೆ.
ಇಂದು ಬೆಳಗ್ಗೆ ಅಟ್ಲಾಂಟಿಕಾ ಸಮುದ್ರದ ಅಂಚಿನಲ್ಲಿ ಗಗನಯಾತ್ರಿಗಳು ಪ್ಯಾರಚೂಟ್ ಮೂಲಕ ಇಳಿದಾಗ ಜನರ ಹರ್ಷೋದ್ಘಾರಗಳು ಮುಗಿಲು ಮುಟ್ಟಿದ್ದವು. ಸದ್ಯಕ್ಕೆ ಶ್ರೀಮಂತರು ಮಾತ್ರ ಭರಿಸಬಹುದಾದಷ್ಟು ದುಬಾರಿಯಾಗಿರುವ ಬಾಹ್ಯಾಕಾಶ ಪ್ರವಾಸ ಮುಂದಿನ ದಿನಗಳಲ್ಲಿ ಆರ್ಥಿಕ ಹೊಂದಾಣಿಕೆಗಳಿಗೆ ಸಿಲುಕಿ ಜನಸಾಮಾನ್ಯರ ಕೈಗೆಟಕುವ ನಿರೀಕ್ಷೆಗಳು ವ್ಯಕ್ತವಾಗಿವೆ.