ವಿವಾದಗಳಿಂದ ನಾಯಕತ್ವ ಬೆಳೆಸಿಕೊಳ್ಳುವ ಉದ್ದೇಶ ಸಲ್ಲದು : ಕಾಗೇರಿ

Social Share

ಬೆಂಗಳೂರು,ಫೆ.23- ಸಮಾಜದ ಸಾಮರಸ್ಯ ಹೆಚ್ಚಿಸುವ ರೀತಿಯಲ್ಲಿ ನಡೆನುಡಿ ಇರಬೇಕೆ ಹೊರತು ವಿವಾದಗಳ ಮಾತುಗಳಿಂದ ನಾಯಕತ್ವ ಬೆಳೆಸಿಕೊಳ್ಳುವ ಉದ್ದೇಶ ಇರಬಾರದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ಒಳ, ಹೊರಗೆ ಆಡುವ ಮಾತುಗಳು, ಭಾವನೆಗಳು ಸಮಾಜದಲ್ಲಿ ಪ್ರೀತಿ ವಿಶ್ವಾಸ ಬೆಳೆಸಲು ಪೂರಕವಾಗಿರಬೇಕು. ಆದರೆ ವಿವಾದಗಳ ಮಾತುಗಳಿಂದಲೇ ನಾಯಕತ್ವ ವೃದ್ದಿಸಿಕೊಳ್ಳುವ ಪ್ರವೃತ್ತಿ ಸರಿಯಲ್ಲ ಎಂದರು.
ಸಮಾಜದ ಸಾಮರಸ್ಯ ಕದಡುವಂತೆ ಮಾತನಾಡಿದ ಸಂದರ್ಭದಲ್ಲಿ ಮಾಧ್ಯಮಗಳು ಅದನ್ನು ವೈಭವೀಕರಿಸಬಾರದು. ಸುಸಂಸ್ಕøತ ಜನಜೀವನ ನಿರ್ಮಾಣಕ್ಕೆ ಜನಪ್ರತಿನಿಗಳು ಕೊಡುಗೆ ನೀಡಬೇಕು. ಯಾವುದೇ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಗೌರವಯುತ ಮಾತುಕತೆ ಆಡಬೇಕು. ಜವಾಬ್ದಾರಿಯ ಅರಿವು ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಈ ಮಾತನ್ನು ಯಾವುದೋ ಘಟನೆ ವ್ಯಕ್ತಿ ಹಿನ್ನೆಲೆಯಲ್ಲಿ ಹೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವೆಲ್ಲರೂ ವಿಷ ವರ್ತುಲದಲ್ಲಿದ್ದು ಮೌಲ್ಯಗಳನ್ನು ಎತ್ತಿ ಹಿಡಿಯಲು ಅನೇಕ ಪ್ರಯತ್ನಗಳನ್ನು ಮಾಡಿದ್ದರೂ ಸಫಲವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದನದ ಸದಸ್ಯರ ಹಕ್ಕುಚ್ಯುತಿಯಾದರೆ ರಕ್ಷಣೆ ಮಾಡಬಹುದು. ಆದರೆ ಜನರಿಂದ ಹಕ್ಕುಚ್ಯುತಿ ಮಂಡಿಸಲು ಆಗುವುದಿಲ್ಲ. ಎಲ್ಲವನ್ನು ಗಮನಿಸುತ್ತಿರುವ ಜನರು ಮುಂದೆ ಸೂಕ್ತ ತೀರ್ಮಾನವನ್ನು ಕೈಗೊಳ್ಳಬಹುದು. ಕಲಾಪದ ಸಮಯ ವ್ಯರ್ಥವಾಗದಂತೆ ಹಣ ವ್ಯಯವಾಗದಂತೆ ಎಲ್ಲರೊಂದಿಗೆ ಚರ್ಚೆ ಮಾಡಲಾಗುವುದು. ಆರೇಳು ವರ್ಷಗಳಿಂದ ಶಾಸಕರ ಭತ್ಯೆ ಹೆಚ್ಚಾಗಿರಲಿಲ್ಲ. ಇದರಿಂದ ನಿನ್ನೆ ಸರ್ಕಾರ ತಂದ ವಿಧೇಯಕಕ್ಕೆ ಸದನದಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದರು.
ಫೆ.14ರಿಂದ ಪ್ರಾರಂಭವಾದ ಜಂಟಿ ಅಧಿವೇಶನ ನಿನ್ನೆ ಮೊಟಕಾಗಿದೆ. 10 ದಿನ ಕಲಾಪ ನಡೆಯಬೇಕಿತ್ತು. ಎರಡು ದಿನ ಸುಗಮ ಕಲಾಪಗಳು ನಡೆದಿವೆ. ಐದು ಗದ್ದಲದ ನಡುವೆ ನಡೆಯಿತು. ಇನ್ನು ಮೂರು ದಿನ ನಡೆಯಬೇಕಿತ್ತು. ಅದು ಸಾಧ್ಯವಾಗಲಿಲ್ಲ. ಕಳೆದ ವರ್ಷ 40 ದಿನ ಸದನ ನಡೆದಿದೆ ಎಂದರು.
ವರ್ಷದ ಆರಂಭದಲ್ಲಿ ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹಲವು ದಶಕದ ನಂತರ ವಿಧಾನಸೌಧದ ಮುಂಭಾಗದ ವೈಭವೋಪೇತ ಮೆಟ್ಟಿಲುಗಳ ಮೂಲಕ ಸದನಕ್ಕೆ ಬಂದು ಭಾಷಣ ಮಾಡಿದರು. ಅವರು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಉತ್ತರ ನೀಡಿದ್ದಾರೆ. ಸದನದಲ್ಲಿ ವಂದನಾ ನಿರ್ಣಯ ಅಂಗೀಕರಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದಲ್ಲಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು. ಈ ಜವಾಬ್ದಾರಿಯ ಅರಿವು ಸದನದಲ್ಲಿದ್ದವರಿಗೂ ಧರಣಿಯಲ್ಲಿದ್ದವರಿಗೂ ಇದೆ. ಸೌಹಾರ್ದಯುತ ವಾತಾರಣದಲ್ಲಿ ಸದನ ನಡೆಸಬೇಕೆಂಬ ಪ್ರಯತ್ನ ಫಲ ನೀಡಲಿಲ್ಲ. ತೀವ್ರವಾಗಿ ಕ್ರಮ ಕೈಗೊಳ್ಳಲು ಕಾನೂನಿನ ಚೌಕಟ್ಟಿನಲ್ಲಿ ಅಕಾರವಿದೆ. ಅಂತಹ ದಿನ ಬಾರದೇ ಇರಲಿ ಎಂದು ಹೇಳಿದರು.
ಜೆಡಿಎಸ್ ಪಕ್ಷ ಮತ್ತು ಆಡಳಿತ ಬಿಜೆಪಿ ಪಕ್ಷ ಚರ್ಚೆಗೆ ಸಿದ್ದವಿತು. ಕಾಂಗ್ರೆಸ್ ಧರಣಿಯಲ್ಲಿ ನಿರತವಾಗಿತ್ತು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂಸದೀಯ ವ್ಯವಸ್ಥೆಯನ್ನು ಎತ್ತಿ ಹಿಡಿಯುವಂತಹ ಕೆಲಸವಾಗಬೇಕು. ಮಾ.4ರಿಂದ ಬಜೆಟ್ ಅವೇಶನ ನಡೆಯಲಿದ್ದು, ಅವೇಶನದಲ್ಲಿ ಚುನಾವಣೆ ಸುಧಾರಣೆ ಕುರಿತು ಚರ್ಚೆ ಮಾಡುವ ಉದ್ದೇಶವಿದೆ. ಒಟ್ಟಾರೆ ಎಲ್ಲರೂ ಸುಸಂಸ್ಕøತ ಜನಜೀವನ ರೂಪಿತವಾಗಲು ಎಲ್ಲರೂ ತಮ್ಮ ತಮ್ಮ ಜವಾ ಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕಾ ಗಿದೆ ಎಂದು ಸಲಹೆ ಮಾಡಿದರು.

Articles You Might Like

Share This Article