ಮುಂದಿನ ಅವೇಶನದಲ್ಲಿ ಮೊದಲು ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ

Social Share

ಮುಂದಿನ ಅವೇಶನದಲ್ಲಿ ಮೊದಲು ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ
ಬೆಳಗಾವಿ,ಡಿ.30- ಸುವರ್ಣ ಸೌಧದಲ್ಲಿ ನಡೆದ 15ನೇ ವಿಧಾನಸಭೆಯ 14ನೇ ಅವೇಶನವು 9 ದಿನಗಳ ಕಾಲ ಒಟ್ಟು 41.21 ಗಂಟೆ ಸಾರ್ಥಕವಾಗಿ ನಡೆದಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು-ಬೆಳಗಾವಿ ಸೇರಿ 45ದಿನಗಳ ಅವೇಶನ ರಾಜ್ಯದಲ್ಲಿ ನಡೆದಿದೆ.

ಈ ಭಾರಿ ಸದನದಲ್ಲಿ 13 ವಿಧೇಯಕ ಗಳನ್ನು ಮಂಡಿಸಲಾಗಿದ್ದು, 9 ವಿಧೇಯಕ ಅಂಗೀಕರಿಸಲಾಯಿತು. ಚಳಿಗಾಲದ ಅವೇಶನದಲ್ಲಿ ಅನೇಕ ಪ್ರಮುಖ ವಿಚಾರಗಳ ಬಗ್ಗೆ ಸಾರ್ಥಕ ಚರ್ಚೆ ನಡೆದಿದೆ ಎಂದರು.
ಒಟ್ಟು 2125 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸಬೇಕಿದ್ದ 150 ಪ್ರಶ್ನೆಗಳ ಪೈಕಿ 146 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.

ಕಳಸಾ ಬಂಡೂರಿ ಯೋಜನೆ ಕ್ರೆಡಿಟ್ ಪಡೆಯಲು ಮೂರೂ ಪಕ್ಷಗಳ ವಾರ್

1614 ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನು ಸ್ವೀಕರಿಲಾಗಿದೆ. ವಿಧಾನಸಭೆ ಸಭಾಂಗಣದಲ್ಲಿ ಮಹಾತ್ಮ ಗಾಂೀಜಿ, ಬಸವೇಶ್ವರ, ಡಾ. ಬಿ. ಆರ್. ಅಂಬೇಡ್ಕರ್, ವೀರ ಸಾವರ್ಕರ್, ನೇತಾಜಿ ಸುಭಾಷಚಂದ್ರ ಬೋಸ್ ಇತರರ ಭಾವಚಿತ್ರಗಳನ್ನು ಹಾಕಲಾಗಿದೆ.

ಸುವರ್ಣಸೌಧ ಆವರಣದಲ್ಲಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹಾತ್ಮಾ ಗಾಂೀಜಿ, ಡಾ. ಬಿ.ಆರ್. ಅಂಬೇಡ್ಕರ್ ಸೇರಿ ಇತರ ಮಹಾಪುರುಷರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಪೂಜೆ ಮಾಡಲಾಗಿದೆ.
ಶೇ.74ರಷ್ಟು ಶಾಸಕರ ಹಾಜರಾತಿ ಇತ್ತು. ಜನಪ್ರತಿನಿಗಳು ಆದ್ಯತೆ ಮೇರೆಗೆ ಸದನಗಳಿಗೆ ಬರಬೇಕು ಎಂದು ಅವರು ಸಲಹೆ ನೀಡಿದರು. 9ಜನ ಶಾಸಕರು ನನಗೆ ಮಾಹಿತಿಯನ್ನೂ ಕೊಡದೇ ಗೈರು ಹಾಜರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದ ಏಳ್ಗೆಗೆ ಸಾಕಷ್ಟು ಚರ್ಚೆ ಆಗಬೇಕಿತ್ತು. ಇಲ್ಲಿನ ಶಾಸಕರಿಗೆ ಸಮಯ ಕೊಡಲು ಪ್ರಯತ್ನಿಸಿದ್ದೇನೆ. ಅಜೆಂಡಾ ಪ್ರಕಾರ ಉತ್ತರ ಕರ್ನಾಟಕ ಚರ್ಚೆ ಮಾಡಲು ಆಗಿಲ್ಲ. ಮುಂದಿನ ಅವೇಶನದಲ್ಲಿ ಮೊದಲ ಆದ್ಯತೆ ನೀಡಿ ಉತ್ತರ ಕರ್ನಾಟಕ ಭಾಗದ ವಿಚಾರಗಳ ಚರ್ಚೆ ಮಾಡಲು ನಿರ್ಧರಿಸಲಾಗಿದೆ.

ವಿವಿಧ ಸಂಘಟನೆಗಳು ಸೇರಿದಂತೆ ಒಟ್ಟು 100 ಪ್ರತಿಭಟನೆಗಳು ನಡೆದಿವೆ. ಆಡಳಿತ ಮತ್ತು ಪೊಲೀಸ್ ಇಲಾಖೆಗಳು ಪೂರಕವಾಗಿ ಕೆಲಸ ಮಾಡಿವೆ ಎಂದರು. 20 ಸಾವಿರ ಜನರು ಈ ಅವೇಶನವನ್ನು ವೀಕ್ಷಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ಎಸ್ಪಿ ಡಾ. ಸಂಜೀವ ಪಾಟೀಲ ಉಪಸ್ಥಿತರಿದ್ದರು.

#Speaker, #VishweshwarHegdeKageri,

Articles You Might Like

Share This Article