ನವದೆಹಲಿ-ತೀವ್ರ ವಿವಾದದ ನಡುವೆಯೇ ಭಾನುವಾರ ಪ್ರಧಾನಿ ನರೇಂದ್ರ ಮೋಧಿ ಉದ್ಘಾಟನೆಗೊಳ್ಳಲಿರುವ ನೂತನ ಸಂಸತ್ ಭವನದ ಉದ್ಘಾಟನೆಯ ಸವಿನೆನಪಿಗಾಗಿ ಭಾರತ ಸರ್ಕಾರ 75 ರೂಪಾಯಿಯ ವಿಶೇಷ ನಾಣ್ಯವನ್ನು ಹೊರತರಲಿದೆ.ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ 75 ರೂ.ಯ ವಿಶೇಷ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಲಾಂಛನ ಇರಲಿದ್ದು, ಅದರ ಕೆಳಗಡೆ ¾ಸತ್ಯಮೇವ ಜಯತೆ¿ ಎಂದು ಬರೆಯಲಾಗುತ್ತದೆ. ಎಡಭಾಗದಲ್ಲಿ ‘ಭಾರತ’ ಎಂದು ದೇವನಾಗರಿ ಲಿಪಿ ಹಾಗೂ ಬಲ ಭಾಗದಲ್ಲಿ ‘ಇಂಡಿಯಾ’ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗುತ್ತದೆ. ಸಿಂಹದ ಲಾಂಛನದ ಕೆಳಗಡೆ ಮುಖಬೆಲೆಯನ್ನು ತೋರಿಸುವ ರೂ. ಚಿಹ್ನೆಯೊಂದಿಗೆ 75 ಎಂದು ಇಂಗ್ಲಿಷ್ ಅಂಕೆಯಲ್ಲಿ ಬರೆಯಲಾಗುತ್ತದೆ ಎಂದು ತಿಳಿಸಿದೆ.
2011 ರ ನಾಣ್ಯ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಸಚಿವಾಲಯ ಈ ಗೆಜೆಟ್ ಅಸೂಚನೆ ಹೊರಡಿಸಿದೆ.ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸವನ್ನು ಹೊಂದಿರಲಿದೆ. ಅದರ ಅಂಚುಗಳ ಉದ್ದಕ್ಕೂ 200 ಸರಣಿಗಳನ್ನು ಹೊಂದಿರುತ್ತದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಬಳಸಿ ನಾಣ್ಯ ತಯಾರಿಸಲಾಗುತ್ತಿದ್ದು, ಇದು 35 ಗ್ರಾಂ ತೂಗಲಿದೆ.
ಸಂಸತ್ ಭವನ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ : ಹೆಚ್‌ಡಿಡಿ
ಈ ವಿಶೇಷ ನಾಣ್ಯವನ್ನು ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥವಾಗಿ ಬಿಡುಗಡೆಗೊಳಿಸುತ್ತಿರುವುದು ಮಾತ್ರವಲ್ಲದೇ ಇದು 75 ವರ್ಷಗಳ ಸ್ವತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವದ ಸಂಕೇತವೂ ಆಗಿರಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.ರೂಪಾಯಿ ಚಿಹ್ನೆ ಮತ್ತು ಸಿಂಹದ ಲಾಂಛನದ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75 ರ ಮುಖಬೆಲೆಯ ಮೌಲ್ಯ ಹೊಂದಿರಲಿದೆ. ನ್ಯಾಣದ ಮತ್ತೊಂದು ಬದಿಯಲ್ಲಿ ಸಂಸತ ಸಂಕೀರ್ಣದ ಫೋಟೋ ಇರಲಿದೆ.
ನಾಣ್ಯದ ಮೇಲಿನ ಪರಿಯಲ್ಲಿ ದೇವನಾಗರಿ ಲಿಪಿಯಲ್ಲಿ ”ಸಂಸದ್ ಸಂಕುಲ’ ಎಂದು ಹಾಗೂ ಕೆಳಗಿನ ಪರಿಯಲ್ಲಿ ¿ಪಾರ್ಲಿಮೆಂಟ್ ಕಾಂಪ್ಲೆಕ್ಸ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಇದರ ಜತೆಗೆ, 2023 ವರ್ಷವನ್ನು ಸಂಸತ್ತಿನ ಸಂಕೀರ್ಣದ ಚಿತ್ರದ ಕೆಳಗೆ ಪ್ರಿಂಟ್ ಮಾಡಲಾಗಿದೆ.ವೃತ್ತಾಕಾರದ ನಾಣ್ಯವು 44 ಮಿಲಿ ಮೀರ್ಟ ವ್ಯಾಸ ಹೊಂದಿದೆ. ಬೆಳ್ಳಿ (50%), ತಾಮ್ರ (40%), ನಿಕಲ್ (5%) ಮತ್ತು ಸತು (5%) ಒಳಗೊಂಡಿರುವ ನಾಲ್ಕು ಮಿಶ್ರಲೋಹದಿಂದ ತಯಾರಿಸಲಾಗಿದೆ. ನಾಣ್ಯದ ಪ್ರಮಾಣಿತ ತೂಕ 35 ಗ್ರಾಂ.
ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಸೂಕ್ತ ಸ್ಥಾನಮಾನ
ನಾಣ್ಯ ಬಿಡುಗಡೆ ಇದೇ ಮೊದಲಲ್ಲ: 75 ಫೋಲ್ಯದ ನಾಣ್ಯವನ್ನು ಸರ್ಕಾರ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಜನವರಿಯಲ್ಲಿ ಎನ್ಸಿಸಿಯ 75 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ₹75 ನಾಣ್ಯವನ್ನು ಬಿಡುಗಡೆ ಮಾಡಿದ್ದರು. 2020 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಈಂಔ) 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ₹75 ನಾಣ್ಯವನ್ನು ಬಿಡುಗಡೆ ಮಾಡಲಾಯಿತು.
2018 ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪೆÇೀರ್ಟ್ ಬ್ಲೇರ್ನಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ 75 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 75 ನಾಣ್ಯವನ್ನು ಬಿಡುಗಡೆ ಮಾಡಲಾಗಿತ್ತು. ಅಲ್ಲದೇ 2010 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 75 ನೇ ವಾರ್ಷಿಕೋತ್ಸವ (ಪ್ಲಾಟಿನಂ ಜುಬಿಲಿ) ಸಂದರ್ಭದಲ್ಲಿ ಇದೇ ರೀತಿಯ 75 ರೂಪಾಯಿಯ ನಾಣ್ಯ ಬಿಡುಗಡೆ ಮಾಡಲಾಗಿತ್ತು.
ಭಾರತದ ಸ್ವಾತಂತ್ರ್ಯೋತ್ಸವದ 75 ವರ್ಷಗಳ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ಶಾಸಕಾಂಗ ಕಟ್ಟಡವನ್ನು ಮೇ 28 ರಂದು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಸುಮಾರು 25 ಪಕ್ಷಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ 20ಕ್ಕೂ ಅಧಿಕ ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಕಾಂಗ್ರೆಸ, ಆಮ್ ಆದ್ಮಿ ಪಾರ್ಟಿ, ತೃಣಮೂಲ, ಸಮಾಜವಾದಿ ಪಾರ್ಟಿ ಸೇರಿದಂತೆ ಹಲವು ಪಕ್ಷಗಳು ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.
#SpecialCoin, # ₹75Coin, #NewParliamentBuilding, #PMModi,