ಪಾಟ್ನಾ, ಜು 12 – ಬಿಹಾರ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುನ್ನ ವಿಶೇಷ ವರ್ಗದ ಸ್ಥಾನಮಾನದ ಬೇಡಿಕೆಯನ್ನು ದೊಸ್ತಿ ಸರ್ಕಾರದ ಪಲುದಾರ ಜೆಡಿಯು ಹೊಸ ಪಟ್ಟಿ ಮುಂಡಿಸಿದೆ. ಸಂಸದೀಯ ಮಂಡಳಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರು ಸುದೀರ್ಘವಾಗಿ ಫೇಸ್ಬುಕ್‍ನಲ್ಲಿ ಬೇಡಿಕೆಯನ್ನು ಎತ್ತಿದ್ದಾರೆ.
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಬಿಜೆಪಿಯೊಂದಿಗಿನ ತಮ್ಮ ಪಕ್ಷದ ಹಳೆಯ ಸಂಬಂಧವನ್ನು ಮೋದಿಗೆ ನೆನಪಿಸಿದ್ದಾರೆ. ಪ್ರಧಾನಿ ಮೋದಿ ಅವರು ಇಂದು ಸಂಜೆ ಬಿಹಾರದ ರಾಜಧಾನಿಗೆ ಆಗಮಿಸುತ್ತಿದ್ದು ,ಇದರ ನಡುವೆ ತಮ್ಮ ಪಕ್ಷಕ್ಕೆ ಸಂಬಂಧಿಸಿದಂತೆ ವಿಶೇಷ ಸ್ಥಾನಮಾನದ ದೀರ್ಘಕಾಲದ ಬೇಡಿಕೆ ಪ್ರಸ್ತಾಪವಾಗಲಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಬಿಜೆಪಿಯೊಂದಿಗೆ ಭಿನ್ನಾಭಿಪ್ರಾಯ ಎತ್ತಿ ತೋರಿಸಿ ಮುಜುಗರಕ್ಕೀಡು ಮಾಡುವ ಉದ್ದೇಶದಿಂದ ಈ ಬೇಡಿಕೆಯನ್ನು ಎತ್ತಲಾಗಿದೆಯೇ ಎಂಬ ಪ್ರಶ್ನೆಗೆ ಅವರು ತಿರುಗೇಟು ನೀಡಿ ಇಬ್ಬರು ನಾಯಕರ ಜೊತೆ ಕೆಲಸ ಮಾಡಿದ್ದೇನೆ ಇದು ಹೊಸದಲ್ಲ ಎಂದಿದ್ದಾರೆ.
ಕುಶ್ವಾಹ ಅವರು 2013 ರಲ್ಲಿ ನಿತೀಶ್ ಕುಮಾರ್ ಅವರಿಂದ ಬೇರ್ಪಟ್ಟು ರಾಷ್ಟ್ರೀಯ ಲೋಕ ಸಮತಾ ಪಕ್ಷವನ್ನು ಸೇರಿದ್ದರು
ಆದಾಗ್ಯೂ, ಅವರು ಕಳೆದ ವರ್ಷ ತಮ್ಮ ಪಕ್ಷವನ್ನು ಜೆಡಿ (ಯು) ನೊಂದಿಗೆ ವಿಲೀನಗೊಳಿಸಿದರು, ಇದು ಬಿಜೆಪಿಯ ಏರಿಳಿತದ ಮುಖಾಂತರ ತನ್ನ ಒಬಿಸಿ ನೆಲೆಯನ್ನು ಕ್ರೋಢೀಕರಿಸುವ ಮುಖ್ಯಮಂತ್ರಿಯ ಪ್ರಯತ್ನವಾಗಿ ಕಂಡುಬಂದಿದೆ.
ಸೇರ್ಪಡೆಯಾದಾಗಿನಿಂದ, ಮಾಜಿ ಕೇಂದ್ರ ಸಚಿವರು ಬಿಜೆಪಿಯನುಕೆಣಕುತ್ತಲ್ಲೇ ಇದ್ದಾರೆ, ವಿಶೇಷ ವರ್ಗದ ಸ್ಥಾನಮಾನದ ಬೇಡಿಕೆಯು ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಡುವೆ ಅನೇಕ ಸಂಘರ್ಷಕ್ಕೆ ಕಾರಣವಾಗಿದೆ ಆದರೆ ಕೇಂದ್ರವು ಈಗಾಗಲೇ ರಾಜ್ಯಕ್ಕೆ ತನ್ನ ಬಾಕಿಗಿಂತ ಹೆಚ್ಚಿನ ಅನುದಾನ ನೀಡುತ್ತಿದೆ.ಆದರೂ ಬಿನ್ನಾಭಿಪ್ರಾಯ ಮುಂದುವರೆದಿದ್ದು ಮುಂಬರುವ ವಿಧಾನ ಸಭೆ ಚುನಾವಣೆ ಮೈತ್ರಿ ಹಣೆಬರಹ ಏನಾಗುತ್ತದೂ ಎಂದು ಕಾಲವೇ ನಿರ್ಧರಿಸುತ್ತದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.