ತಿರುವನಂತಪುರಂ, ಫೆ.23-ಮದ್ಯಮಾರಾಟ ನಿಷೇಧದ ನಡುವೆಯೂ ಕೇರಳದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಪೊಲೀಸರು ರಾಜ್ಯಾದ್ಯಂತ ಕುಡಿದು ವಾಹನ ಚಾಲನೆ ಮಾಡುವವರನ್ನು ಪತ್ತೆ ಹಚ್ಚುವ ವಿಶೇಷ ಅಭಿಯಾನವನ್ನು ನಡೆಸಿದ್ದು 3,764 ಪ್ರಕರಣಗಳು ದಾಖಲಾಗಿದೆ.
ಸಂಚಾರ ವಿಭಾಗದ ಐಜಿಪಿ ಎ ಅಕ್ಬರ್ ಸೂಚನೆಯ ಮೇರೆಗೆ ಕೇರಳದಾದ್ಯಂತ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಳೆದ ಫೆ.6ರಿಂದ ಫೆ.12ರವರೆಗೆ 3,764 ಪ್ರಕರಣಗಳು ದಾಖಲಾಗಿದ್ದು, 1,911 ಲೈಸೆನ್ಸ್ ರದ್ದುಪಡಿಸಲಾಗಿದ್ದು, ಕುಡಿದು ವಾಹನ ಚಾಲನೆ ಮಾಡಿದ್ದಕ್ಕಾಗಿ 894 ಪರವಾನಗಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಪಿಎಸ್ – ಐಎಎಸ್ ಬೀದಿ ಸಂಘರ್ಷ ವಿರುದ್ಧ ಕಠಿಣ ಕ್ರಮ : ಸಚಿವ ಅಶ್ವಥ್ ನಾರಾಯಣ್
ತ್ರಿಶೂರ್ ನಗರದಲ್ಲಿ ಅತಿ ಹೆಚ್ಚು ಕುಡಿದು ವಾಹನ ಚಾಲನೆ ಪ್ರಕರಣ ದಾಳಲಾಗಿದೆ .ಕೊಚ್ಚಿ ನಗರದಲ್ಲಿ 342 ಪ್ರಕರಣಗಳು ಮತ್ತು ಆಲಪ್ಪುಳದಲ್ಲಿ 304 ಪ್ರಕರಣಗಳು ದಾಖಲಾಗಿವೆ. ತಿರುವನಂತಪುರಂ ನಗರದಲ್ಲಿ ಅತಿ ಕಡಿಮೆ 7 ಪ್ರಕರಣ ದಾಖಲಾಗಿದೆ.
ಬಿಬಿಎಂಪಿ ತಿದ್ದುಪಡಿ ವಿಧೇಯಕ ಮಂಡನೆ
ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ತಪಾಸಣೆ ಮುಂದುವರೆಸಲಾಗುವುದು ಎಂದು ಮೂಲಗಳಿ ತಿಳಿಸಿವೆ.
Special, drive, Kerala, police, detect, drunk driving,