ಕತಾರ್,ನ.28- ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲೂ ಕ್ರಿಕೆಟ್ ವಿಚಾರ ಸದ್ದು ಮಾಡಿದೆ.ಕತಾರ್ನಲ್ಲಿ ನೆಲೆಸಿರುವ ಕ್ರಿಕೆಟ್ ಅಭಿಮಾನಿಗಳು ಫುಟ್ಬಾಲ್ ಪಂದ್ಯಗಳು ನಡೆಯುತ್ತಿರುವ ಕ್ರೀಡಾಂಗಣದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸಂಜು ಸ್ಯಾಮ್ಸನ್ ಪರ ಭಿತ್ತಿ ಪತ್ರ ಹಿಡಿದು ತಮ್ಮ ಬೆಂಬಲ ಸೂಚಿಸಿರುವುದು ಭಾರಿ ವೈರಲ್ ಆಗಿದೆ.
ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಎಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬೆಂಚ್ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಅಸಮಾಧಾನಗೊಂಡಿರುವ ಸ್ಯಾಮ್ಸನ್ ಅಭಿಮಾನಿಗಳು ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಗಮನ
ಸೆಳೆದಿದ್ದಾರೆ.
ಬ್ಯಾಟಿಂಗ್ ಮಾಡುವುದರ ಜೊತೆಗೆ ಬೌಲಿಂಗ್ಗೂ ಆಧ್ಯತೆ ನೀಡಬೇಕು ಎಂಬ ಉದ್ಧೇಶದಿಂದ ಮ್ಯಾನೆಜ್ಮೆಂಟ್ ಸ್ಯಾಮ್ಸನ್ ಬದಲಿಗೆ ದೀಪಕ್ ಹೂಡಾ ಅವರಿಗೆ ಚಾನ್ಸ್ ನೀಡಿದ್ದರಿಂದ ಸ್ಯಾಮ್ಸನ್ ಬೆಂಚ್ ಕಾಯುವಂತಹ ಪರಿಸ್ಥಿತಿ ಎದುರಾಗಿತ್ತು.
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ 38 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 36 ರನ್ ಗಳಿಸಿದರು. ಆದರೆ, ಎರಡನೆ ಪಂದ್ಯದಲ್ಲಿ ಅವರಿಗೆ ಆಡಲು ಅವಕಾಶ ನೀಡದಿರುವುದು ಅವರ ಅಭಿಮಾನಿಗಳನ್ನು ಕೆರಳಿಸಿದ್ದು, ಇದೀಗ, ಫಿಫಾ ವಿಶ್ವಕಪ್ನಲ್ಲಿ ಅವರ ಅಭಿಮಾನಿಗಳು ಸ್ಯಾಮ್ಸನ್ಗೆ ಬೆಂಬಲ ತೋರಿಸಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಭಾರತ 12.5 ಓವರ್ಗಳಲ್ಲಿ 1 ವಿಕೆಟ್ಗೆ 89 ರನ್ ಗಳಿಸಿದ್ದಾಗ ಮಳೆಯು ಆಟಕ್ಕೆ ಅಡ್ಡಿಪಡಿಸಿದಾಗ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.
#Fans #specialgesture #FIFAWorldCup2022 #SanjuSamson #2ndODI