ಆಟೋ ಚಾಲಕರ ವಿರುದ್ಧ ವಿಶೇಷ ಪೊಲೀಸರ ಕಾರ್ಯಾಚರಣೆ, 482ಕ್ಕೂ ಹೆಚ್ಚು ಪ್ರಕರಣ ದಾಖಲು

ಬೆಂಗಳೂರು, ಜೂ.26- ಸಂಚಾರ ಪೂರ್ವ ವಿಭಾಗದ ಪೊಲೀಸರು ನಿನ್ನೆ ಆಟೋ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು 482ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡು 2,41,000ರೂ. ದಂಡ ಸಂಗ್ರಹಿಸಿದ್ದಾರೆ. ಕರೆದಲ್ಲಿಗೆ ಬರದಿರುವ ಆಟೋ ಚಾಲಕರ ವಿರುದ್ಧ 167 ಪ್ರಕರಣಗಳು, ಮೀಟರ್‌ಗಿಂತ ಅಧಿಕ ಬಾಡಿಗೆ ಕೇಳುವ ಆಟೋ ಚಾಲಕರ ವಿರುದ್ಧ 158 ಪ್ರಕರಣಗಳು, ಏಕಮುಖ ಸಂಚಾರಕ್ಕೆ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ 157 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಜತೆಗೆ 2,41,000ರೂ. ದಂಡ ಸಂಗ್ರಹಿಸಲಾಗಿದೆ. ಇದೇ ಸಂದರ್ಭದಲ್ಲಿ … Continue reading ಆಟೋ ಚಾಲಕರ ವಿರುದ್ಧ ವಿಶೇಷ ಪೊಲೀಸರ ಕಾರ್ಯಾಚರಣೆ, 482ಕ್ಕೂ ಹೆಚ್ಚು ಪ್ರಕರಣ ದಾಖಲು