Sunday, October 6, 2024
Homeರಾಜ್ಯದಸರಾಗೆ ಭರದ ಸಿದ್ಧತೆ, ಫಿರಂಗಿಗಳಿಗೆ ಡ್ರೈ ರನ್‌ ಆರಂಭ

ದಸರಾಗೆ ಭರದ ಸಿದ್ಧತೆ, ಫಿರಂಗಿಗಳಿಗೆ ಡ್ರೈ ರನ್‌ ಆರಂಭ

Special puja at Mysuru palace ahead of Dussehra cannon rehearsal

ಮೈಸೂರು,ಸೆ.18- ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯ ದಿನ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಿ, ರಾಷ್ಟ್ರಗೀತೆ ಮೊಳಗುವಾಗ ಹಾರಿಸುವ 21 ಕುಶಾಲ ತೋಪುಗಳ ತಾಲೀಮಿಗೆ ಬಳಸುವ ಫಿರಂಗಿಗಳ ಡ್ರೈ ರನ್‌ ಆರಂಭಗೊಂಡಿದೆ.
ಅರಮನೆ ಆವರಣದ ಆನೆ ಬಾಗಿಲಿನಲ್ಲಿ ಒಂದು ತಿಂಗಳ ಕಾಲ ಈ ತಾಲೀಮು ನಡೆಯಲಿದೆ.

ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಂದು ಗಣ್ಯರು ಅಂಬಾರಿಗೆ ಪುಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಹಾಡಲಾಗುತ್ತದೆ. ಈ ಸಂದರ್ಭದಲ್ಲಿ ಅರಮನೆಯ ಪಕ್ಕದ ಮಾರಮ ದೇವಾಲಯದ ಪಾರ್ಕಿಂಗ್‌ ಪ್ರದೇಶದಲ್ಲಿ ರಾಜಪರಂಪರೆಯಂತೆ ಸಾಂಪ್ರದಾಯಿಕ 21 ಸುತ್ತು ಕುಶಾಲತೋಪು ಹಾರಿಸಲಾಗುತ್ತದೆ. ಇದಕ್ಕಾಗಿ ಪ್ರತಿದಿನ ನುರಿತ ಸಿಬ್ಬಂದಿ ತಾಲೀಮು ನಡೆಸುತ್ತಾರೆ.

ಸಿಎಆರ್‌ ಪೊಲೀಸ್‌‍ ತಂಡದ ಎಸಿಪಿ ನೇತೃತ್ವದಲ್ಲಿ, ಪ್ರತಿದಿನ ಎಎಸ್‌‍ಐ ಸಿದ್ದರಾಜು ಮುಂದಾಳತ್ವದಲ್ಲಿ ಅರಮನೆ ಆನೆ ಬಾಗಿಲಿನಲ್ಲಿರುವ 7 ಫಿರಂಗಿಗಳ ಮೂಲಕ ಕುಶಾಲತೋಪು ಸಿಡಿಸುವ ತಾಲೀಮು ನಡೆಯಲಿದೆ. ಮೂರು ಬಾರಿ ಸಿಡಿಮದ್ದು ಸಿಡಿಸುವ ತಾಲೀಮು ಇದಾಗಿದೆ. ಒಂದೊಂದು ಫಿರಂಗಿಗೂ ಐವರು ಸಿಎಆರ್‌ ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ.

ಸೆ.25ರ ಬಳಿಕ ಮೂರು ಬಾರಿ ಗಜಪಡೆ, ಅಶ್ವಪಡೆ ಮುಂದೆ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲು ನಿರ್ಧರಿಸಲಾಗಿದೆ.ಮೊದಲ ತಾಲೀಮಿನಲ್ಲಿ ಒಂದು ಸುತ್ತಿನ ಸಿಡಿಮದ್ದು ಸಿಡಿತದ ಬಳಿಕ ಕೆಲ ನಿಮಿಷ ವಿಶ್ರಾಂತಿ ನೀಡಿ, ಎರಡನೇ ಸುತ್ತಿನ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ. ಆನೆ, ಕುದುರೆಗಳ ವರ್ತನೆಯನ್ನು ಪರಿಶೀಲಿಸಿ ಮೂರನೇ ಸುತ್ತಿನ ತಾಲೀಮು ನಡೆಯಲಿದೆ.

ಎರಡನೇ ತಾಲೀಮಿನಲ್ಲಿ ಪ್ರತಿ ಸುತ್ತು ಕುಶಾಲತೋಪು ಸಿಡಿಸುವ ಸಮಯಾವಕಾಶದಲ್ಲಿ ಕಡಿತ ಮಾಡಲಾಗುತ್ತದೆ. ಮೂರನೇ ತಾಲೀಮಿನಲ್ಲಿ ಒಂದೇ ನಿಮಿಷದೊಳಗೆ ಮೂರು ಸುತ್ತಿನ ಸಿಡಿಮದ್ದು ಸಿಡಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಸರಾ ಸಮಯದಲ್ಲಿ ನೆನೆಯಬೇಕಾದ ಸಮಾಧಿಗಳು :
ನಾಡಹಬ್ಬ ದಸರಾದಲ್ಲಿ ವಿಶ್ವ ವಿಖ್ಯಾತ ಜಂಬೂಸವಾರಿ ಪ್ರಮುಖ ಆಕರ್ಷಣೆಯಾಗಿದ್ದು, ಅಂತಹ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆಗಳಿಗೂ ಅಷ್ಟೇ ಪ್ರಾಮುಖ್ಯ.18 ಬಾರಿ ಅಂಬಾರಿ ಹೊತ್ತ ಆನೆ ದೋಣ ಹಾಗೂ 3 ಬಾರಿ ಅಂಬಾರಿ ಹೊತ್ತ ರಾಜೇಂದ್ರನನ್ನು ಈ ಸಮಯದಲ್ಲಿ ಸರಿಸಲೇಬೇಕಾಗಿದೆ.

ಅಂಬಾರಿಯನ್ನು ಹೊತ್ತು ಯಶಸ್ವಿ ದಸರಾಗೆ ಕೈಜೋಡಿಸಿದ್ದ ಆನೆ ದ್ರೋಣ ಹಾಗೂ ರಾಜೇಂದ್ರ ಇಂದು ನಮೊಂದಿಗಿಲ್ಲದೇ ಇದ್ದರೂ ಅವುಗಳ ನೆನಪು ಮಾತ್ರ ಅಚ್ಚಳಿಯದೆ ಉಳಿದಿದೆ. ದ್ರೋಣ ಹಾಗೂ ರಾಜೇಂದ್ರನ ಸಮಾಧಿಗಳು ಹೆಚ್‌.ಡಿ ಕೋಟೆ ತಾಲೂಕು ಬಳ್ಳೆಹಾಡಿ ಗ್ರಾಮದಲ್ಲಿದ್ದು, ದಸರಾ ಸಮಯದಲ್ಲಿ ಸಮಾಧಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.ರಾಜೇಂದ್ರ ಆನೆಯನ್ನು ಗಂಧದಗುಡಿ ಸಿನಿಮಾದಲ್ಲಿ ಬಳಸಿಕೊಂಡಿದ್ದನ್ನು ಇಲ್ಲಿ ಸರಿಸಿಕೊಳ್ಳಬಹುದಾಗಿದೆ.

RELATED ARTICLES

Latest News