ನಾಡಿನಾದ್ಯಂತ ದೇವಾಲಯಗಳಿಗೆ ಭಕ್ತರ ದಂಡು

Social Share

ಬೆಂಗಳೂರು,ಜ.1- ಕಹಿ ನೆನಪು ಮರೆಯಾಗಲಿ ಕಂಡ ಕನಸು ನನಸಾಗಲಿ ನೂತನ ವರ್ಷ ಸಂತೋಷದಿಂದ ಕೂಡಿರಲಿ ಎಂದು ನಾಡಿನಾದ್ಯಂತ ಜನರು ಇಂದು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಕಹಿ ಘಟನೆ, ಸಂಕಷ್ಟಗಳೊಂದಿಗೆ 2022ಕ್ಕೆ ವಿದಾಯ ಹೇಳಿ ನಾಡಿನಾದ್ಯಂತ ಜನರು ಸಂಭ್ರಮ ಸಡಗರದಿಂದ ಕ್ಯಾಲೆಂಡರ್ ವರ್ಷವನ್ನು ರಾತ್ರಿಯೇ ಬರ ಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಕಾರ್ಯಕ್ರಮಗಳು ನಡೆದವು. ಹೊಸ ವರ್ಷ ಹಾಗೂ ವೈಕುಂಠ ಏಕಾದಶಿ ಪ್ರಯುಕ್ತ ಬೆಂಗಳೂರಿನ ವಿವಿಧ ದೇವಾಲಯಗಳಲ್ಲಿ ಇಂದು ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಭಕ್ತರು ಸರತಿಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ನೂತನ ವರ್ಷ ಎಲ್ಲರಲ್ಲೂ ಸಂತೋಷ ನೆಲಸಲಿ, ರಾಜ್ಯ ಸುಭಿಕ್ಷವಾಗಿರಲಿ ಎಂದು ಪ್ರಾರ್ಥಿಸಿದರು.

1 ಕೋಟಿ ಮೌಲ್ಯದ ಡ್ರಗ್ಸ್ ವಶ, 16 ನೈಜೀರಿಯನ್ನರನ್ನು ಬಂಧನ

ಇನ್ನು ಪವಿತ್ರ ಕ್ಷೇತ್ರಗಳಾ ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಗೊರವನಹಳ್ಳಿ, ಚಾಮುಂಡಿ ಬೆಟ್ಟ, ಮಹದೇಶ್ವರ ಬೆಟ್ಟ, ನಂದಿಬೆಟ್ಟ, ಬೆಂಗಳೂರಿನ ದೊಡ್ಡಗಣಪತಿ, ಗವಿಗಂಗಾಧರೇಶ್ವರ, ಬನಶಂಕರಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಂಕರ್ಯಗಳು ನೆರವೇರಿದವು. ಭಕ್ತರು ದೇವರ ದರ್ಶನ ಪಡೆದರು.

ಪಂಚಮಸಾಲಿ-ಒಕ್ಕಲಿಗ ಮೀಸಲಾತಿ ವಿಚಾರದಲ್ಲಿ ಗೊಂದಲ ಬೇಡ: ಸಿಎಂ ಬೊಮ್ಮಾಯಿ

ವಿದೇಶಗಳಲ್ಲಿ ಕೊರೊನಾ ಹೆಚ್ಚುತ್ತಿದ್ದು, ರಾಜ್ಯದಲ್ಲೂ ಸಹ ಕೋವಿಡ್ ಆತಂಕ ಎದುರಾಗಿದ್ದು, ರಾಜ್ಯಕ್ಕೆ ಯಾವುದೇ ರೋಗ ಬಾಧೆ ಕಾಡದಿರಲಿ. ಎಲ್ಲರಲೂ ಆರೋಗ್ಯದಿಂದ ಸುಭಿಕ್ಷವಾಗಿರಲಿ ಎಂದು ಅರ್ಚಕರು ಪೂಜೆ ಸಲ್ಲಿಸಿದರು.

Special puja, new year, temples, Devotees,

Articles You Might Like

Share This Article