ಕಾರು ಡಿಕ್ಕಿ ಹೊಡೆದು ಪೊಲೀಸ್ ಕಾನ್ಸ್ಟೇಬಲ್ ಮತ್ತು ಯೋಧ ಸಾವು

Social Share

ಪಣಜಿ, ಜ 16 -ಮಧ್ಯರಾತ್ರಿ ದಕ್ಷಿಣ ಗೋವಾದ ಸೆರಾಲಿಮ್ ಗ್ರಾಮದ ಪೊಲೀಸ್ ಚೆಕ್‍ಪೋ ಸ್ಟ್ ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಕಾನ್ಸ್ಟೇಬಲ್ ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್‍ನ ಯೋಧ ಸಾವನ್ನಪ್ಪಿದ್ದಾರೆ.
ರಾತ್ರಿ ಸುಮಾರು 12.15 ರಲ್ಲಿ ಕೋಲ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಸೆರೌಲಿಮ್ ಗ್ರಾಮದಲ್ಲಿ ನಾಕಾಬಂದಿ ಮಾಡಿ ವಾಹನ ತಪಾಸಣೆ ಮಾದುವಾಗ ಏಕಾಏಕಿ ವೇಗವಾಗಿ ಬಂದ ಕಾರು ಬಾರಿಕೇಡ್‍ಗೆ ಗುದ್ದಿ ಮುಂದೆ ನುಗ್ಗಿದೆ.
ಈ ವೇಳೆ ಕರ್ತವ್ಯಲ್ಲಿದ್ದ ಕಾನ್ಸ್ಟೇಬಲ್ ಶೈಲೇಶ್ ಗಾಂವ್ಕರ್ ಯೋಧ ವಿಶ್ವಾಸ್ ಡೇಕರ್ ಗಂಭೀರವಾಗಿ ಗಾಯಗೊಂ ಡು ಸಾವನ್ನಪ್ಪಿದ್ದಾರೆ,ಮತ್ತು ಹೋಮ್ ಗಾರ್ಡ್ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ಹೇಳಿದರು.
ಘಟನೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ .ಕಾರಿನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Articles You Might Like

Share This Article