ನಿಂತಿದ್ದ ಬಸ್‍ಗಳಿಗೆ ಟ್ರಕ್ ಡಿಕ್ಕಿಯಾಗಿ 14 ಮಂದಿ ಸಾವು

Social Share

ಭೋಪಾಲ್, ಫೆ.24 – ರಸ್ತೆಯ ಬದಿಯಲ್ಲಿ ನಿಂತಿದ್ದ ಎರಡು ಬಸ್‍ಗಳಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 14ಜನರು ಸಾವನ್ನಪ್ಪಿ ಸುಮರು 40 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ರೇವಾ-ಸತ್ನಾ ಗಡಿಯ ಮೊಹಾನಿಯಾ ಸುರಂಗದ ಬಳಿ ಕಳೆದ ರಾತ್ರಿ ನಡೆದಿದೆ.

ಶಬರಿ ಮಾತೆಯ ಜಯಂತಿ ಅಂಗವಾಗಿ ಸತ್ನಾನಗರದ ಕೋಲ್ ಮಹಾಕುಂಭದಲ್ಲಿ ಭಾಗವಹಿಸಿ ಬಸ್‍ನಲ್ಲಿ ಹಿಂತಿರುಗುತ್ತಿದ್ದ ಭಕ್ತಾಗಳು ವಿಶ್ರಾಂತಿ ,ಊಟಕ್ಕೆಂದು ನಿಲ್ಲಿಸಿದದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರೆಲ್ಲರೂ ಬಸ್‍ನಲ್ಲಿದ್ದವರು ಎಂದು ತಿಳಿದುಬಂದಿದೆ. ಶಬರಿ ಮಾತೆಯ ಜಯಂತಿ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಚಾಲನೆ ನೀಡಿದ್ದರು. ರೇವಾ ಕಡೆಯಿಂದ ಬಂದ ಟ್ರಕ್ ಹಿಂದಿನಿಂದ ಏಕಾಏಕಿ ರಸ್ತೆ ಬದಿ ನಿಂತಿದ್ದ ಬಸ್‍ಗಳಿಗೆ ಡಿಕ್ಕಿ ಹೊಡೆದಿದೆ ಎಂದು ಜಿಲ್ಲಾಧಿಕಾರಿ ಸಾಕೇತ್ ಮಾಳವಿಯಾ ಹೇಳಿದ್ದಾರೆ.

ರೈತರಿಗೆ ನೆರವಾಗಲು ಅಂಚೆ ಜಾಲ

ಗಾಯಾಳುಗಳನ್ನು ರೇವಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಬಸ್‍ಗಳಿಗೆ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಒಂದು ಬಸ್ ಪಲ್ಟಿಯಾಗಿ ನಾಲೆಗೆ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಟ್ರಕ್ ಟಯರ್ ಸ್ಪೋಟಗೊಂಡ ಕಾರಣ ಚಾಲಕ ನಿಯಂತ್ರಣ ಕಳೆದುಕೊಂಡು ನಿಂತಿದ್ದ ಬಸ್‍ಳಿಗೆ ಡಿಕ್ಕಿ ಹೊಡೆದಿದ್ದಾನೆ.

ಪರವಾನಗಿ ಇಲ್ಲದ 47 ಬಂದೂಕು, 2 ರಿವಾಲ್ವರ್ ವಶ, ಮೂವರ ಸೆರೆ

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ವಿಷ್ಣು ದತ್ ಶರ್ಮಾ ಸತ್ನಾದಿಂದ ಸ್ಥಳಕ್ಕೆ ಭೇಟಿ ನೀಡಿ ಇಡೀ ರಾತ್ರಿ ಪರಿಹಾರ ಕಾರ್ಯ ನೋಡಿಕೊಂಡರು. ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ದಾವಿಸಿದ ಹಿರಿಯ ಅಕಾರಿಗಳು ಹಾಗು ಆರೋಗ್ಯ ಸಿಬ್ಬಂದ್ದಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದಾರೆ .

Speeding, truck, hits, three buses, 14 died, Madhya Pradesh,

Articles You Might Like

Share This Article