ಜೈಪುರ ,ಸೆ. 28 – ಭಯೋತ್ಪಾದನಾ ಚಟುವಟಿಕೆಗಳ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ)ಅನ್ನು ನಿಷೇದಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಅಜ್ಮೀರ್ ದರ್ಗಾದ ಆಧ್ಯಾತ್ಮಿಕ ಮುಖ್ಯಸ್ಥ ಜೈನುಲ್ ಅಬೆದಿನ್ ಅಲಿ ಖಾನ್ ಸ್ವಾಗತಿಸಿದ್ದಾರೆ.
ಕಾನೂನಿಗೆ ಅನುಸಾರವಾಗಿ ಮತ್ತು ಭಯೋತ್ಪಾದನೆ ತಡೆಯಲು ಸರ್ಕಾರದಿಂದ ಸರಿಯಾದ ಕ್ರಮ ಕೈಗೊಳ್ಳಲಾಗಿದೆ ಎಂದು ಸೂಫಿ ಸಂತ ಖ್ವಾಜಾ ಮೊಯುದ್ದೀನ್ ಚಿಸ್ತಿಯ ದಿವಾನ್ ಹೇಳಿದ್ದಾರೆ.
ಇದನ್ನೂ ಓದಿ : BIG NEWS: ದೇಶದ್ರೋಹಿ PFI ಸಂಘಟನೆ ಬ್ಯಾನ್, ಕೇಂದ್ರ ಸರ್ಕಾರ ಖಡಕ್ ನಿರ್ಧಾರ
ದೇಶ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತವಾಗಿರುತ್ತೇವೆ. ದೇಶ ಯಾವುದೇ ಸಂಸ್ಥೆ ಅಥವಾ ಕಲ್ಪನೆಗಿಂತ ದೊಡ್ಡದಾಗಿದೆ. ಯಾರಾದರೂ ಈ ದೇಶ ಒಡೆಯುವ, ದೇಶದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಹಾಗೂ ಶಾಂತಿಯನ್ನು ಹಾಳು ಮಾಡುವ ಬಗ್ಗೆ ಮಾತನಾಡಿದರೆ ಅವರಿಗೆ ಇಲ್ಲಿ ವಾಸಿಸಲು ಹಕ್ಕಿಲ್ಲ ಎಂದಿದ್ದಾರೆ.
ಪಿಎಫ್‍ಐನಿಂದ ದೇಶವಿರೋದಿ ಚಟುವಟಿಕೆಗಳ ಬಗ್ಗೆ ವರದಿಗಳು ಬಂದಿದ್ದು, ದೇಶದ ಹಿತಾಸಕ್ತಿಯಿಂದ ಅದರ ಮೇಲೆ ನಿಷೇಧ ಹೇರಲಾಗಿದೆ. ಎರಡು ವರ್ಷಗಳ ಹಿಂದೆ ನಾನು ಮೊದಲು ಪಿಎಫ್‍ಐನ್ನು ನಿಷೇದಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾ ಎಂದು ಅಜ್ಮೀರ್ ದರ್ಗಾ ದಿವಾನ್ ಹೇಳಿದರು.
ಇದಲ್ಲದೆ ಅಖಿಲ ಭಾರತ ಸಜ್ಜದ ನಾಶಿನ್ ಕೌನ್ಸಿಲ್‍ನ ಅಧ್ಯಕ್ಷ ನಾಸಿರುದ್ದೀನ್ ಖಾನ್ ಅವರು ಕೂಡ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ದೇಶಕ್ಕಿಂತ ಯಾವುದೇ ಸಂಘಟನೆ ಅಥವಾ ಯಾರು ದೊಡ್ಡವರಲ್ಲ ಎಂದಿದ್ದಾರೆ.