ನಾಳೆ ನಿಮ್ಮೊಳಗಿನ ಆಧ್ಯಾತ್ಮಿಕತೆ ಕಾರ್ಯಾಗಾರ

Social Share

ಬೆಂಗಳೂರು, ಮಾ.4- ನೀವು ಒತ್ತಡದ ಜೀವನ ನಡೆಸುತ್ತಿದ್ದೀರಾ? ಭೂಮಿಯ ಮೇಲೆ ನಿಮ್ಮ ಜೀವನದ ನಿಜವಾದ ಉದ್ದೇಶ ಏನೆಂದು ನಿಮಗೆ ತಿಳಿದಿದೆಯೇ? ಎಂಬುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಯುನಿವರ್ಸಲ್ ನಾಲೆಡ್ಜ್ ತಂಡ ನಾಳೆ ನಿಮ್ಮೊಳಗಿನ ಆಧ್ಯಾತ್ಮಿಕತೆ ಎಂಬ ಕಾರ್ಯಾಗಾರದ ಮೂಲಕ ಉಚಿತವಾಗಿ ತಿಳಿಸಿಕೊಡಲಿದೆ.

ನಗರದ ಬಸವ ಭವನದ ಅನುಭವ ಮಂಟಪ ಸಭಾಭವನದಲ್ಲಿ ನಾಳೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರ ವರೆಗೆ ನಿಮ್ಮೊಳಗಿನ ಆಧ್ಯಾತ್ಮಿಕತೆ ಎಂಬ ಕಾರ್ಯಗಾರವನ್ನು ಮಾಸ್ಟರ್ ರೋಹನ್ ಶಿರಿ ನೇತೃತ್ವದ ತಂಡ ನಡೆಸಿಕೊಡಲಿದೆ.

ಆಧುನಿಕ ಜೀವನ ಪಯಣದಲ್ಲಿ ಆಧ್ಯಾತ್ಮಿಕತೆಯೆ ದಾರಿ ಎಂಬ ವಿಷಯದ ಮೇಲೆ ನಡೆಯುವ ಈ ಕಾರ್ಯಗಾರದಲ್ಲಿ, ಗಣೇಶ ಪ್ರಸಾದ್, ಸುಬ್ರಮಣ್ಯ, ಶಮ್ಮಿ ಶಿರಿ ಹಾಗೂ ಅಶ್ವಿನಿ ನಾಯಕ್ ಅವರು ಮಾಸ್ಟರ್ ತರಬೇತುದಾರರಾಗಿ ಭಾಗವಹಿಸಲಿದ್ದಾರೆ. ಇದೊಂದು ಅಭೂತಪೂರ್ವ ಹಾಗೂ ವಿಶಿಷ್ಠ ಕಾರ್ಯಾಗಾರವಾಗಿದ್ದು, ಮನುಷ್ಯನೊಳಗಿನ ಆಧ್ಯಾತ್ಮಿಕತೆಯನ್ನು ಜಾಗೃತಗೊಳಿಸುವುದಾಗಿದೆ.

ರಷ್ಯಾದಲ್ಲಿ ಸ್ಪುಟ್ನಿಕ್-ವಿ ಕೋವಿಡ್ ಲಸಿಕೆ ಶೋಧಿಸಿದ ವಿಜ್ಞಾನಿಯ ಹತ್ಯೆ

ಕಾರ್ಯಾಗಾರದಲ್ಲಿ ಭೂಮಿಯ ಮೇಲಿನ ನಿಮ್ಮ ಜೀವನದ ನಿಜವಾದ ಉದ್ದೇಶ ನಿಮಗೆ ತಿಳಿದಿದೆಯೇ? ನೀವು ಒತ್ತಡದ ಜೀವನವನ್ನು ನಡೆಸುತ್ತಿದ್ದೀರಾ? ಇತರರೊಂದಿಗಿನ ನಿಮ್ಮ ಸಂಬಂಧವನ್ನು ಸರಿಪಡಿಸುವ ಅಗತ್ಯವಿದೆಯೇ? ನೀವು ಜೀವನದಲ್ಲಿ ಆರ್ಥಿಕವಾಗಿ ತೃಪ್ತಿ ಹೊಂದಿದೀರಾ? ನೀವು ಪರಿಹರಿಸಲಾಗದ ದೈಹಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಧರ್ಮ ಮತ್ತು ಆಧ್ಯಾತ್ಮಿಕತೆಯ ನಡುವೆ ವ್ಯತ್ಯಾಸವಿದೆ ಎಂದು ನಿಮಗೆ ತಿಳಿದಿದೆಯೇ? ಈ ರೀತಿಯ ಎಲ್ಲ ಪ್ರಶ್ನೆ ಹಾಗೂ ಗೊಂದಲಕ್ಕೆ ನೀವು ಉತ್ತರವನ್ನು ಹುಡುಕುತ್ತಿದ್ದರೇ, ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಅದಕ್ಕೆ ಪರಹಾರ ಕಂಡುಕೊಳ್ಳಬಹುದಾಗಿದೆ.

ನಮ್ಮ ಕ್ಲಿನಿಕ್‍ಗಳತ್ತ ತಿರುಗಿನೋಡದ ರೋಗಿಗಳು

ಆಧುನಿಕ ಜಗತ್ತಿಗೆ ಮಾರು ಹೋಗುತ್ತಿರುವ ಮಾನವ ಒತ್ತಡದ ಜೀವನಕ್ಕೆ ಸಿಲುಕಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಮಾನವನ ಅಂತರಾತ್ಮವನ್ನು ಜಾಗೃತಗೊಳಿಸಿ, ಅವನಲ್ಲಿರುವ ಎಲ್ಲಾ ಗೊಂದಲ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ಉತ್ತಮ ಸದಾವಕಾಶವಾಗಿದೆ. ಮೊದಲು ಬಂದ 350-400 ಜನರಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯುನಿವರ್ಸಲ್ ನಾಲೆಡ್ಜ್ ತಂಡ ಮನವಿ ಮಾಡಿದೆ.

Spirituality, workshop, bangalore,

Articles You Might Like

Share This Article