BIG NEWS : ಸರ್ಕಾರಿ ಶಾಲೆಗಳಲ್ಲಿ ವಾರಕ್ಕೊಮ್ಮೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್

Social Share

ಬೆಂಗಳೂರು,ಜು.15- ಸರ್ಕಾರಿ ಶಾಲೆಗಳಲ್ಲಿ ಇನ್ನು ಮುಂದೆ ವಾರಕ್ಕೊಮ್ಮೆ ಅಥವಾ ಎರಡು ದಿನ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆಯೋಜಿಸಲು ಸರ್ಕಾರ ಮುಂದಾಗಿದ್ದು ಇದಕ್ಕಾಗಿ ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದೆ.

ಒಂದು ವೇಳೆ ಶಿಕ್ಷಕರ ಕೊರತೆ ಬಂದರೆ ಹೊರಗುತ್ತಿಗೆ ಅಥವಾ ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಂಡು ಸ್ಪೋಕನ್ ಇಂಗ್ಲೀಷ್ ಕಲಿಸಲು ಸರ್ಕಾರ ಮುಂದಾಗಿದ್ದು, 1ರಿಂದ6 ಅಥವಾ 1-8 ನೇ ತರಗತಿವರೆಗೆ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡುವ ಉದ್ದೇಶ ಹೊಂದಿದೆ.

ವಾರದಲ್ಲಿ ಒಂದು ದಿನ ಶನಿವಾರ ಅಥವಾ ವಾರದಲ್ಲಿ ಎರಡು ದಿನ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಸಲು ಸರ್ಕಾರ ವೇಳಾಪಟ್ಟಿ ಸಿದ್ದ ಮಾಡಿಕೊಂಡಿದೆ. ಈಗಾಗಲೇ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕೂಡಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಕಲಿಸಲು ತಾತ್ವಿಕ ಒಪ್ಪಿಗೆ ನೀಡಿದ್ದು, ಸಿಎಂ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಸರ್ಕಾರ ಸ್ಪೋಕನ್ ಇಂಗ್ಲೀಷ್ ಕಲಿಕೆ ಬಗ್ಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಖಾಸಗಿ ಶಾಲೆಯ ಮಕ್ಕಳಿಗಿಂತ ತಮ್ಮ ಮಕ್ಕಳು ಯಾವುದರಲ್ಲೂ ಕಡಿಮೆಯಿಲ್ಲ ಎಂಬಂತೆ ಮಕ್ಕಳನ್ನು ಸಿದ್ದಪಡಿಸಲು ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಬಹುತೇಕ ಈ ವರ್ಷವೇ ಸ್ಪೋಕನ್ ಇಂಗ್ಲೀಷ್ ತರಗತಿಗಳು ಪ್ರಾರಂಭ ಆಗಲಿವೆ. ಸರ್ಕಾರಿ ಶಾಲೆಯ ಶಿಕ್ಷಕರನ್ನೇ ಆಯ್ಕೆ ಮಾಡಿ ಮೈಸೂರಿನಲ್ಲಿರುವ ಪ್ರಾದೇಶಿಕ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಯಲ್ಲಿ ವಿಶೇಷ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದ ಶಿಕ್ಷಕರು ಮಕ್ಕಳಿಗೆ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡುತ್ತಾರೆ.

ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ತೆಗೆದುಕೊಳ್ಳಲು ಮೊದಲು ಶಿಕ್ಷಕರು ಇಂಗ್ಲೀಷ್‍ನಲ್ಲಿ ಮಾತನಾಡಬಲ್ಲ ವ್ಯಾಕರಣಬದ್ದವಾಗಿ ಮಾತನಡಬಲ್ಲ ಸಾಮಥ್ರ್ಯವನ್ನು ಹೊಂದಿರಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆ ಮತ್ತೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ ಮೈಸೂರು ಮೂಲದ ರೀಜನಲ್ ಇನ್ಸ್ಟಿಟ್ಯೂಷನ್ ಆಫ್ ಇಂಗ್ಲೀಷ್ ಸಂಸ್ಥೆಯೊಂದರ ಮೂಲ ಶಿಕ್ಷಕರಿಗೆ ತರಬೇತಿಯನ್ನು ಕೊಡಿಸಿ. ಆ ಶಿಕ್ಷಕರ ಮೂಲಕ ಸ್ಪೋಕನ್ ಇಂಗ್ಲೀಷ್ ಹೇಳಿಕೊಡಲು ಶಿಕ್ಷಣ ಇಲಾಖೆ ಸಜ್ಜಾಗಿದ್ದು ಅಂತಿಮ ಹಂತದ ಸಿದ್ದತೆಯನ್ನು ನಡೆಸುತ್ತಿದ್ದಾರೆ.

ನಿಯಮಿತವಾಗಿರುವ ಇಂಗ್ಲೀಷ್ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರಿಗೆ ಹೊಣೆಯನ್ನು ವಹಿಸಲಾಗುತ್ತದೆ. ಈ ಶಿಕ್ಷಕರು ಮಕ್ಕಳಿಗೆ ಸಿದ್ದಪಡಿಸಿದ ವಿಚಾರ, ಪಠ್ಯಕ್ಕೆ ಅನುಗುಣವಾಗಿ ವಾರದಲ್ಲಿ ಒಮ್ಮೆ ಅಥವಾ ಎರಡು ದಿನ ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ತೆಗೆದುಕೊಳ್ಳಲಿದ್ದಾರೆ. ಮಕ್ಕಳ ನಿರರ್ಗಳ ಮಾತಿನ ಸಾಮಥ್ರ್ಯವನ್ನು ಹೆಚ್ಚು ಮಾಡುವುದೇ ಸ್ಪೋಕನ್ ಇಂಗ್ಲೀಷ್ ತರಗತಿಯ ಉದ್ದೇಶವಾಗಿದೆ.

ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಮೊದಲೆಲ್ಲಾ ಮಾತೃಭಾಷೆಯಲ್ಲೇ ಶಿಕ್ಷಣ ನೀಡಲಾಗುತ್ತಿತ್ತು. ಕರ್ನಾಟಕ ಪಬ್ಲಿಕ್ ಶಾಲೆಗಳು ಪ್ರಾರಂಭವಾದವು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭವಾಯಿತು. ಆದರೂ ಕನ್ನಡ ಮಾಧ್ಯಮಕ್ಕೆ ಪಾಠ ಮಾಡುತ್ತಿದ್ದ ಶಿಕ್ಷಕರೇ ಇಂಗ್ಲೀಷ್ ಮಾಧ್ಯಮದಲ್ಲಿ ಪಾಠ ಮಾಡಬೇಕಾಯಿತು. ಕೆಲವು ಶಾಲೆಗಳಲ್ಲಿ ಪಾಠ ಮಾತ್ರವೇ ಇಂಗ್ಲೀಷ್‍ನಲ್ಲಿ ಇರುತ್ತಿತ್ತು. ಮಕ್ಕಳಿಗೆ ಪಾಠದ ವಿವರಣೆ, ಸಂವಹನ ಎಲ್ಲವೂ ಕನ್ನಡ ಭಾಷೆಯಲ್ಲೇ ನಡೆಯುತ್ತಿತ್ತು.

ಇದರಿಂದಾಗಿ ಮಕ್ಕಳಿಗೆ ಮಾಧ್ಯಮ ಬದಲಾಯಿತೇ ವಿನಃ ಇಂಗ್ಲೀಷ್ ಸಂವಹನ ಬರಲಿಲ್ಲ. ಇದಕ್ಕಾಗಿಯೇ ಮಕ್ಕಳಲ್ಲಿ ಇಂಗ್ಲೀಷ್ ಸಂವಹನ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ವಾರದಲ್ಲಿ ಕಡೇ ಪಕ್ಷದ ಒಂದು ದಿನವಾದರೂ ಸ್ಪೋಕನ್ ಇಂಗ್ಲೀಷ್ ತರಗತಿ ನಡೆಸಲು ಯೋಜನ ಸಿದ್ಧವಾಗಿದೆ. ಮಕ್ಕಳು ಸುಲಲಿತವಾಗಿ ಮಾತೃಭಾಷೆಯಂತೆ ಮಾತನಾಡಬೇಕು ಎಂಬುದಾಗಿದೆ.

ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಉದ್ಯೋಗ ಅರಸಿ ನಗರಕ್ಕೆ ಬಂದಾಗ ಕಂಪನಿಯ ಉದ್ಯೋವನ್ನು ಕೇಳಲು ಹೋದಾಗ ಇಂಗ್ಲೀಷ್ ಭಾಷೆ ಬರಲ್ಲ ಎಂಬ ಹಿಂಜರಿಕೆ ಕಾಡುತ್ತದೆ. ಇಂಥ ಹಿಂಜರಿಕೆಯನ್ನು ದೂರ ಮಾಡಲು ಮಕ್ಕಳಿಗೆ ಇಂಗ್ಲೀಷ್ ಸಂವಹನ ಅನಿವಾರ್ಯವಾಗಿ ಬೇಕೆಬೇಕು ಹೀಗಾಗಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ಸರ್ಕಾರ ಮುಂದಾಗಿದೆ.

Articles You Might Like

Share This Article