ಬೆಂಗಳೂರು, ಮಾ. 29- ಹತ್ತೊಂಭತ್ತನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 202 ರನ್‌ಗಳ ಕಠಿಣ ಗುರಿ ಚೇಸ್ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದ್ರಾಬಾದ್ ಪರ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಇಶಾನ್ ಕಿಶನ್ (80 ರನ್, 38 ಎಸೆತ) ನಿಗದಿತ 20 ಓವರ್ ಗಳ ಅಂತ್ಯಕ್ಕೆ ತಂಡವು 201/9 ರನ್ ಗಳಿಸಲು ಬಲವಾದರು.
ಈ ಗುರಿಯನ್ನು ಹಿಂಬಾಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊತ್ತ ಎರಡಂಕಿ ದಾಟುವ ಮುನ್ನವೇ ಆರಂಭಿಕ ಆಟಗಾರ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡು ಪ್ರೇಕ್ಷಕರ ಮೊಗದಲ್ಲಿ ದುಗುಡ ಮನೆ ಮಾಡುವಂತೆ ಮಾಡಿತ್ತು.
ಆದರೆ 2ನೇ ವಿಕೆಟ್‌ಗೆ ಜೊತೆಗೂಡಿದ ಕನ್ನಡಿಗ ದೇವದತ್ ಪಡಿಕ್ಕಲ್ (61 ರನ್, 36 ಎಸೆತ, 7 ಬೌಂಡರಿ, 4 ಸಿಕ್ಸರ್) ಹಾಗೂ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ (ಅಜೇಯ 69) ಶತಕ ಜೊತೆಯಾಟದ ನೆರವಿನಿಂದ 15.4 ಓವರ್‌ಗಳಲ್ಲೇ 203/4 ರನ್ ಗಳಿಸಿ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದರು.
ಈ ಹಿಂದೆ ರಾಜಸ್ಥಾನ್ ರಾಯಲ್ಸ್ 200 ರನ್ ಚೇಸ್ ಮಾಡುವ ವೇಳೆ 25 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿ ನಿರ್ಮಿಸಿದ್ದ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (26 ಎಸೆತಗಳು) ತನ್ನ ಹೆಗಲೇರಿಸಿಕೊಂಡಿದೆ.
