ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬ, ಅಣ್ಣಮ್ಮ ಉತ್ಸವ ಮಾಡೇಮಾಡ್ತಿವಿ : ಎಸ್.ಆರ್.ವಿಶ್ವನಾಥ್

Social Share

ಯಲಹಂಕ,ಆ.13-ಕಾಂಗ್ರೆಸ್ ನವರು ಬರಿ ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡೋಕೆ ಪ್ರಯತ್ನ ಮಾಡ್ತಾ ಇದ್ದಾರೆ. ಚಾಮರಾಜಪೇಟೆಯ ಆಟದ ಮೈದಾನ ಸರ್ಕಾರದ್ದು, ಅಲ್ಲಿ ಗಣೇಶ ಉತ್ಸವ ಏನು ಅಣ್ಣಮ್ಮ, ಚಾಮುಂಡೇಶ್ವರಿ ಉತ್ಸವವನ್ನೂ ಮಾಡುತ್ತೇವೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ಯಲಹಂಕದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲ್ಲೂಲಕಿನ ಚಲ್ಲಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೇಲೆ ಸುಮಾರು 40 ಕ್ಕೂ ಹೆಚ್ಚು ಪ್ರಕರಣಗಳು ಇವೆ. ಅವುಗಳನ್ನು ಮುಚ್ಚಿಕೊಳ್ಳಲು ಎ.ಸಿ.ಬಿ ತಂದಿದ್ದರು. ಇಂದು ಕಾನೂನು ಹೋರಾಟದಲ್ಲಿ ಮತ್ತೆ ಲೋಕಾಯುಕ್ತಕ್ಕೆ ಬಲ ನೀಡಿ ಆದೇಶ ಬಂದಿದ್ದು ಸ್ವಾಗತಾರ್ಹ ಎಂದರು.

ಲೋಕಾಯುಕ್ತ ಸಂಸ್ಥೆ ಇಡೀ ದೇಶದ¯್ಲÉ ತುಂಬಾ ಒಳ್ಳೇಯ ಸಂಸ್ಥೆ. ಎಂತಹವರನ್ನೂ ರಕ್ಷಣೆ ಮಾಡದೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ ದೇಶದ ಗಮನ ಸೆಳೆದ ಸಂಸ್ಥೆಗೆ ಬಲ ನೀಡಿರುವುದು ಭ್ರಷ್ಠರಿಗೆ ನಡುಕ ತರಿಸಿದೆ. ಅದಕ್ಕಾಗಿ ಕಾಂಗ್ರೆಸ್ ನಾಯಕರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಒಂದು ಬಾರಿ ಕಲಬುರಗಿ ನೋಡಿ, 9 ಸಾರಿ ಗೆದ್ದ ಮಲ್ಲಿಕಾರ್ಜುನ ಖರ್ಗೆರವರ ಸಾಧನೆ ಏನೆಂದು ಗೊತ್ತಾಗುತ್ತೆ. ಹಂದಿ ಗೂಡಾಗಿದೆ ಕಲಬುರಗಿ ಪಟ್ಟಣ, ಖರ್ಗೆ ಸಂಸಾರದ ಆಸ್ತಿ ಯಾರ ಕೊಡುಗೆ? ಇವರು ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ, ಯುಪಿಎ ಸರ್ಕಾರದ ಎಷ್ಟು ಜನ ಸಚಿವರು, ಸಂಸದರು, ಜನ ಪ್ರತಿನಿದಿಗಳ ಕೇಸುಗಳನ್ನು ಇವರು ಮುಚ್ಚಿ ಹಾಕಿಲ್ಲ, ಎಲ್ಲವೂ ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ದೇಶದ ಪ್ರಜಾಪ್ರಬುತ್ವದಲ್ಲಿ ಸಂವಿಧಾನ ಅನ್ನೋ ಗ್ರಂಥವಿದೆ ಅದು ನಮಗೆ ಹೇಳಿ ಕೊಟ್ಟಿದ್ದು ಕೇಸರಿ-ಬಿಳಿ-ಹಸಿರು ಬಣ್ಣದ ಮಹತ್ವ ಅದನ್ನೆ ಇವರು ಕೆಂಪು ಎಂದು ಉಚ್ಚರಿಸ್ತಾರೆ. ಅಂದರೆ ಇವರಿಗೆ ಕೇಸರಿ ಮೇಲೆ ಇನ್ನೆಷ್ಟು ಆಕ್ರೋಶ ಇರಬೇಕು. ದೇಶದ ಜನ ಎಲ್ಲವನ್ನೂ ನೋಡಿ ನೀಡಿ ದೇಶದ ರಕ್ಷಣೆಗೆ ನಮ್ಮನ್ನು

ಆಯ್ಕೆ ಮಾಡಿದ್ದಾರೆ. ಈದ್ಗಾ ಮೈದಾನ ಸರ್ಕಾರದ ಆಸ್ತಿ, ಜನಗಳ ಸ್ವತ್ತು. ಅಲ್ಲಿ ಗಣೇಶ ಹಬ್ಬ,ಅಣ್ಣಮ್ಮ ಉತ್ಸವ ಮಾಡ್ತೀವಿ, ಚಾಮುಂಡೇಶ್ವರಿ ಉತ್ಸವ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು. ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಪ್ರಿಯಾಂಕ ಖರ್ಗೆ ಮಾತನಾಡಬೇಕು ಅಂತ ಮಾತನಾಡ್ತಿದ್ದಾರೆ, ಸತ್ಯ ಹರಿಶ್ಚಂದ್ರರ ಮೊಮ್ಮಗ ಇವರು…!? ಲಂಚ ಮಂಚ ಅಂತ ಮಾತನಾಡುವಾಗ ನಾಲಿಗೆಯನ್ನು ಬಿಗಿ ಹಿಡಿದುಕೊಂಡು ಮಾತನಾಡಬೇಕು ಎಂದು ವಿಶ್ವನಾಥ್ ತಿರುಗೇಟು ನೀಡಿದರು.

Articles You Might Like

Share This Article