ಬೆಂಗಳೂರು,ಜ.13- ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಯವರ 10ನೇ ವರ್ಷದ ಪುಣ್ಯಸಂಸ್ಮರಣಾ ಮಹೋತ್ಸವ ಇಂದು ನೆರವೇರಿತು. ಶ್ರೀಗಳು ಭೈರವೈಕ್ಯರಾಗಿ 10 ವರ್ಷಗಳಾಗಿರುವ ಹಿನ್ನಲೆಯಲ್ಲಿ ಆದಿಚುಂಚನಗಿರಿ ಮಠದಲ್ಲಿಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ಇಂದು ಹೋಮಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಶ್ರೀಗಳ 10ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ನಿನ್ನೆಯಿಂದಲೇ ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ನಿನ್ನೆ ರೈತ ಸಮಾವೇಶವನ್ನು ನಡೆಸಲಾಯಿತು.
ನಾಳೆ ಹಿರಿಯ ವಿದ್ಯಾರ್ಥಿಗಳ ವೇದಿಕೆ ಸಮಾರಂಭ ನಡೆಸಲಾಗುತ್ತದೆ. ಭಾನುವಾರ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಜನವರಿ 16ರಂದು ಕುವೆಂಪು ಸಾಹಿತ್ಯ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ.17ರಂದು ರಾಜ್ಯಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಿದ್ದು ಜ.18ರಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತೋತ್ಸವ ಹಾಗೂ ಭಕ್ತ ಸಂತ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಹಾರಾಷ್ಟ್ರದ ನಾಸಿಕ್ ಬಳಿ ಭೀಕರ ಅಪಘಾತ, 10 ಮಂದಿ ಸಾವು
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಪೀಠಾಪತಿಗಳಾದ ಮೇಲೆ ಆದಿಚುಂಚನಗಿರಿ ಮಠವನ್ನು ಚಿನ್ನದ ಗಿರಿಯನ್ನಾಗಿ ಅಭಿವೃದ್ಧಿಪಡಿಸಿದರು. ಶಿಕ್ಷಣ, ಆರೋಗ್ಯ, ಧಾರ್ಮಿಕವಾಗಿ ಸಾಕಷ್ಟು ಅಭಿವೃದ್ದಿಯನ್ನು ಅವರ ಅವಧಿಯಲ್ಲಿ ಶ್ರೀ ಮಠ ಕಂಡಿತು.
ಶ್ರೀ ಮಠದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ಮಾಡಿಕೊಟ್ಟರು. ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆಗೂ ಒತ್ತು ನೀಡಿದರು. ವನಸಂವರ್ಧನ ಟ್ರಸ್ಟ್ ಮೂಲಕ ಗಿಡಮರಗಳನ್ನು ಬೆಳೆಸಲು ಉತ್ತೇಜನ ನೀಡಿದರು. ಗೋಶಾಲೆ ಸ್ಥಾಪನೆ ಮೂಲಕ ಪಶು ಸಂಪತ್ತಿನ ರಕ್ಷಣೆಗೂ ಮುಂದಾಗಿದ್ದರು.
ಮಹಾರಾಷ್ಟ್ರದ ನಾಸಿಕ್ ಬಳಿ ಭೀಕರ ಅಪಘಾತ, 10 ಮಂದಿ ಸಾವು
ಜಾನಪದ ಕಲೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಾಕಷ್ಟು ಉತ್ತೇಜನ ನೀಡಿದ್ದರು. ಬಾಲಗಂಗಾಧರನಾಥ ಸ್ವಾಮೀಜಿಯವರು ಪೀಠಾಪತಿಗಳಾಗಿದ್ದ ಅವಧಿಯಲ್ಲಿ ಶ್ರೀಮಠವು ಸರ್ವೋತ್ತೋಮುಖ ಅಭಿವೃದ್ಧಿಯನ್ನು ಕಂಡಿತು. ಇಂದಿಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶ್ರೀ ಮಠವು ಮುನ್ನಡೆಯುತ್ತಿದೆ.
#SriBalagangadharanathaSwamiji