ಕೊಲಂಬೊ, ಆ.6- ಚೀನಾದ ಬಾಹ್ಯಾಕಾಶ ಉಪಗ್ರಹ ಪತ್ತೆದಾರಿ ಹಡಗು ಯುವಾನ್ ವಾಂಗ್ 5 ಬರುವುದನ್ನು ಸುಮಾರು 5 ದಿನ ಮುಂದೂಡಬೇಕು ಎಂದು ಶ್ರೀಲಂಕಾ, ಚೀನಾ ಸರ್ಕಾರವನ್ನು ಮನವಿ ಮಾಡಿದೆ.
ಈಗಾಗಲೇ ಜುಲೈ 13ರಂದು ಚೀನಾದ ಜಿಯಾಂಗ್‍ನಿಂದ ಹಡಗು ಹೊರಟಿದ್ದು ಪ್ರಸ್ತುತ ತೈವಾನ್‍ನ ಸಮೀಪ ಸಂಚರಿಸುತ್ತಿದೆ. ಬರುವ ಆಗಸ್ಟ್ 11ರಂದು ಅದು ಶ್ರೀಲಂಕಾದ ಬಂದು ತಲುಪಿ ನಂತರ 17ರಂದು ಹೊರಡುವ ಕಾರ್ಯಯೋಜನೆಯನ್ನು ರೂಪಿಸಲಾಗಿತ್ತು.
ಇದರ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿ ಶ್ರೀಲಂಕಾ ಸರ್ಕಾರಕ್ಕೆ ತಮ್ಮ ನಿಲುವು ಪರಿಶೀಲಿಸುವಂತೆ ಭಾರತ ಹೇಳಿತ್ತು. ಆದರೆ ಕೊಲಂಬೊ ಮೂಲದ ರಾಜತಾಂತ್ರಿಕ ಅಧಿಕಾರಿಗಳ ಪ್ರಕಾರ ಶ್ರೀಲಂಕಾ ವಿದೇಶಾಂಗ ಸಚಿವಾಲಯವು ನೌಕಿಕ ಟಿಪ್ಪಣಿ ಮೂಲಕ ಹಡಗನ್ನು ಇಂಧನ ತುಂಬಿಸಿಕೊಂಡು ಹೊರಡಲು ಹಂಬಂಟೋಟಾ ಬಂದರನ್ನು ಪ್ರವೇಶಿಸಲು ಅನುಮತಿ ನೀಡಿತ್ತು ಎನ್ನಲಾಗಿದೆ.
ಈ ನಡುವೆ ಶ್ರೀಲಂಕಾ ಯುವಾನ್ ವಾಂಗ್ ಪತ್ತೆ ದಾರಿ ಹಡಗಿನ ಕಾರ್ಯಯೋಜನೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಚೀನಾವನ್ನು ಹೇಳಿಕೊಂಡಿದೆ. ಕಳೆದ 2007ರಲ್ಲಿ ನಿರ್ಮಿಸಿರುವ ಈ ನೌಕೆಯು 11 ಸಾವಿರ ಟನ್ ತೂಕವನ್ನು ಹೋರುವ ಸಾಮಥ್ರ್ಯ ಹೊಂದಿದ್ದು, ಭಾರತದ ಒಡಿಸ್ಸಾ ಕರಾವಳಿಯ ರಕ್ಷಣಾ ವಲಯ ಹಾಗೂ ಇತರೆ ಗೌಪ್ಯ ರಹಸ್ಯಗಳ ಪತ್ತೆಗೆ ಇದನ್ನು ಬಳಸಲಾಗುತ್ತಿದೆ ಎಂದು ಅಂದಾಜಿಸಲಾಗುತ್ತಿದೆ.
ರಾಜತಾಂತ್ರಿಕವಾಗಿ ಚೀನಾಕ್ಕೆ ಸೆಡ್ಡು ಹೊಡೆಯಲು ಭಾರತ ನಡೆಸುತ್ತಿರುವ ಪ್ರಯತ್ನದಲ್ಲಿ ಇದು ಸ್ವಲ್ಪ ಮಟ್ಟಿನ ಯಶಸ್ಸು ಸಿಕ್ಕಿದೆ ಎಂದು ಹೇಳಲಾಗುತ್ತಿದ್ದರು. ಚೀನಾ ನಡೆಸುವ ಕಾರ್ಯತಂತ್ರದ ಬಗ್ಗೆ ಈಗ ಎಲ್ಲರ ಚಿತ್ತ ನೆಟ್ಟಿದೆ.