ಶ್ರೀಲಂಕಾದಲ್ಲಿ ಏನಾಗುತ್ತಿದೆ..? ಇಲ್ಲಿದೆ ಹೊಸ ಅಪ್ಡೇಟ್ಸ್

Social Share

ಕೊಲಂಬೊ,ಜು.10- ಆರ್ಥಿಕ ಸಂಕಷ್ಟದಿಂದ ದಿಕ್ಕೆಟ್ಟಿರುವ ಶ್ರೀಲಂಕಾದಲ್ಲಿ ಅರಾಜಕತೆ ಉತ್ತುಂಗಕ್ಕೇರಿದ್ದು, ಹಿಂಸಾ ರೂಪ ಪಡೆದಿರುವ ಪ್ರತಿಭಟನೆಯ ಬೆಳವಣಿಗೆಗಳ ಮೇಲೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ನಿಗಾ ಇರಿಸಿವೆ.

ಪ್ರಧಾನಿ ರಾಜೀನಾಮೆ ಬಳಿಕವೂ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ. ಅಧ್ಯಕ್ಷರ ಮನೆಯಲ್ಲಿ ಬೀಡುಬಿಟ್ಟಿರುವವರು ಈಗಲೂ ಹೊರಬರದೆ ಗದ್ದಲ ಮುಂದುವರೆಸಿದ್ದಾರೆ. ಸರ್ಕಾರ ವಿರೋ ಪ್ರತಿಭಟನಕಾರರ ಉದ್ರಿಕ್ತತೆ ಮಿತಿಮೀರಿದ್ದು, ಬಿಗಿಭದ್ರತೆಯನ್ನು ಛೇದಿಸಿ ಅಧ್ಯಕ್ಷರ ಮನೆಗೆ ನುಗ್ಗಿದ್ದಾರೆ. ಅಧ್ಯಕ್ಷರ ಬಂಗಲೆಯಲ್ಲಿನ ಈಜಾಡುವ ಮೂಲಕ ಮೋಜು ಅನುಭವಿಸಿದ್ದಾರೆ. ಜಿಮ್‍ನ್ನು ಬಳಸಿದ್ದಾರೆ.

ಅಡುಗೆ ಮನೆಯಲ್ಲಿ ಆಹಾರ ಪದಾರ್ಥಗಳನ್ನು ಸೇವಿಸಿ ಅಧ್ಯಕ್ಷೀಯ ಕಚೇರಿಯನ್ನೂ ಸಂಪೂರ್ಣ ಲೂಟಿ ಮಾಡಲಾಗಿದೆ. ಪ್ರತಿಭಟನಾಕಾರರ ಆಕ್ರೋಶಕ್ಕೆ ಹೆದರಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿನ್ನೆಯೇ ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ.

ಈ ನಡುವೆ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಪ್ರಧಾನಿ ರನೀಲ್ ವಿಕ್ರಮ್ ಸಿಂಘೆ ರಾಜೀನಾಮೆ ನೀಡಿದ್ದಾರೆ. ಬಳಿಕವೂ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಹರಾಜಕತೆ ತಲೆದೋರಿದ್ದು, ಪರಿಸ್ಥಿತಿಯನ್ನು ಸರಿದೂಗಿಸಲು ಭದ್ರತಾ ಪಡೆಗಳು ಹೆಣಗಾಡುತ್ತಿವೆ.

ಸಿಕ್ಕಸಿಕ್ಕ ಕಡೆ ಸಂಸದರು, ಜನಪ್ರತಿನಿಗಳ ಮೇಲೆ ಹಲ್ಲೆಯಾಗುತ್ತಿದೆ. ಸಶಸ್ತ್ರ ಪಡೆಗಳು ಅಸಹಾಯಕವಾಗಿ ನಿಂತಿವೆ. ಗಣ್ಯರಿಗೆ ಭದ್ರತೆ ಒದಗಿಸುವುದು ಸವಾಲಿನ ಕೆಲಸವಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿ(ಐಎಂಎಫ್) ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದಾಗಿ ಹೇಳಿದೆ. ಶ್ರೀಲಂಕಾದಲ್ಲಿ ವಿದೇಶಿ ವಿನಿಮಯದ ಕೊರತೆಯಿಂದಾಗಿ ಪ್ರತಿ ಪೆಟ್ರೋಲ್ ಬೆಲೆ 500 ರೂ. ಗಡಿ ದಾಟಿತ್ತು.

ದಿನನಿತ್ಯದ ಆಹಾರ ಪದಾರ್ಥಗಳಿಗಾಗಿ ಜನ ವಾರಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇಶದ ಸಾಲ 51 ಬಿಲಿಯನ್ ದಾಟಿದ್ದು,ಅದನ್ನು ಮರುಪಾವತಿಸಲು ದ್ವೀಪ ರಾಷ್ಟ್ರ ಅಸಹಾಯಕವಾಗಿವೆ.ಹೀಗಾಗಿ ಜಾಗತಿಕವಾಗಿ ಹಲವಾರು ರಾಷ್ಟ್ರಗಳು ಶ್ರೀಲಂಕಾದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿವೆ.

ಸುಮಾರು ಮೂರ್ನಾಲ್ಕು ತಿಂಗಳಿನಿಂದಲೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ಪ್ರತಿನಿಗಳು ಅಕಾರಕ್ಕಾಗಿ ನಾನಾ ಸರ್ಕಸ್‍ಗಳನ್ನು ಮಾಡುತ್ತಿದ್ದಾರೆಯೇ ಹೊರತು ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಆದ್ಯತೆ ನೀಡಿರಲಿಲ್ಲ.ಮಹೀಂದ ರಾಜಪಕ್ಸೆ ಪ್ರಧಾನಿ ಸ್ಥಾನದಿಂದ ನಿರ್ಗಮಿಸಿದ ಬಳಿಕ ಅಧ್ಯಕ್ಷ ಗೊಟಬಯ ರಾಜಪಕ್ಸೆ ವಿರೋಧ ಪಕ್ಷಗಳನ್ನೂ ಒಳಗೊಂಡಂತೆ ಸರ್ವ ಪಕ್ಷಗಳ ಸರ್ಕಾರ ರಚಿಸಿದರು. ಎಲ್ಲ ಪಕ್ಷಗಳು ಆಡಳಿತದಲ್ಲಿ ಸಹಭಾಗಿಗಳಾಗಿದ್ದರಿಂದ ಪ್ರತಿಪಕ್ಷಗಳ ಧ್ವನಿಯೇ ಇಲ್ಲವಾಗಿತ್ತು.

ಜನರ ಸಮಸ್ಯೆಗಳಿಗೆ ಶಾಸನ ಸಭೆಯಲ್ಲಿ ಸ್ಥಳಾವಕಾಶವೇ ಇರಲಿಲ್ಲ. ಹೀಗಾಗಿ ಜನ ತಾವಾಗಿಯೇ ಪ್ರತಿಪಕ್ಷಗಳ ಮಾದರಿಯಲ್ಲಿ ಕೆಲಸ ಮಾಡಿದ್ದಾರೆ. ಜನಾಕ್ರೋಶ ತುತ್ತತುದಿಗೆ ತಲುಪಿ ಹಿಂಸಾಚಾರಕ್ಕೆ ತಿರುಗಿದೆ. ನಮ್ಮಿಂದ ಕದ್ದಿರುವ ಹಣವನ್ನು ವಾಪಸ್ ಕೊಡಿ ಎಂದು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸದರು, ಸಚಿವರಗಳ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ.

Articles You Might Like

Share This Article